

ಹಾಸನ: ರಕ್ತಗತವಾಗುವಂತೆ ಕೌಶಲ್ಯವನ್ನು ಬೆಳೆಸಿಕೊಳ್ಳುವುದರಲ್ಲಿ ಗಮಕ ಕಲೆ ಒಳಗೆ ಹೆಚ್ಚು ಶ್ರಮವಿದೆ ಎಂದು ಪ್ರಸಿದ್ಧ ಕವಿ ಮತ್ತು ಶಿಕ್ಷಣತಜ್ಞ ಪ್ರೊ. ವಿ. ನರಹರಿ ಅಭಿಪ್ರಾಯಪಟ್ಟರು.
ನಗರದ ಎಂ.ಜಿ. ರಸ್ತೆಯ ಬಳಿ ಇರುವ ದಿವ್ಯಚೈತನ್ಯದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಹಾಗೂ ದಿವ್ಯ ಚೈತನ್ಯ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 8 ಮತ್ತು 9 ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಗಮಕ ಕಾರ್ಯಾಗಾರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಒಂದು ವಿಶೇಷವಾದ ಬಾರವನ್ನು ತಮ್ಮಲ್ಲಿ ಇಟ್ಟುಕೊಂಡಿದ್ದು, ಗಮಕ ಕಲೆಯನ್ನು ಒಳಗೊಂಡಾಗೆ ಅದಕ್ಕೆ ಯಾವ ಕಲೆಯೂ ಹೊರತಲ್ಲ. ಮುಖ್ಯವಾಗಿ ಅಭ್ಯಾಸ ಮಾಡದಿದ್ದರೇ ಹೇಗೆ ವಿಧ್ಯೆಯು ನಮಗೆ ಕರಗತವಾಗುವುದಿಲ್ಲವೋ ಆಗೇ ಗಮಕ ಕಲಿಯುವುದಕ್ಕೂ ಅನ್ವಯಿಸುತ್ತದೆ. ಒಂದು ಸಾರಿ ಪದ್ಯ ಕೇಳಿದರೇ, ಅದರ ರಾಗವನ್ನು ಅನುಸರಿಸಿದರೇ ಅದನ್ನ ಮತ್ತೆ ಮತ್ತೆ ಹಾಡಿ ತಮ್ಮ ವಶವನ್ನಾಗಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾಧ್ಯವಾದಷ್ಟು ಅದರ ಪರಿಣತೆಯ ಮಟ್ಟವನ್ನು ಮುಟ್ಟಲಿಕೆ ಪ್ರಯತ್ನದ ಮಾಡಿದಾಗ ವಿಧ್ಯೆ ಒಲಿಯುತ್ತದೆ ಇಲ್ಲವಾದರೆ ಕಲೆಗೆ ಅಪಪ್ರಚಾರ ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ನಮ್ಮ ಸ್ವಭಾವದ ಒಂದು ಭಾಗವಾಗಿ ಮೈಗೂಡಿಸಿಕೊಂಡು ಶ್ರದ್ಧೆ, ಭಕ್ತಿಯಿಂದ ಕಲಿತ ವಿದ್ಯೆ ಎಂದು ನಿಮ್ಮನ್ನು ಕೈಬಿಡುವುದಿಲ್ಲ. ಭಾಷೆ ಕಲಿಯುವಾಗ ಆರಂಭದಲ್ಲಿ ಯಾರಿಗೂ ವ್ಯಾಕರಣ ಹೇಳಿಕೊಡುವುದಿಲ್ಲ. ಆಗೇ ಅಗತ್ಯವಿಲ್ಲ. ಭಾಷೆ ಕಲಿಯುತ್ತ ವ್ಯಾಕರಣ ಬೇಕಾಗುತ್ತದೆ. ರಕ್ತಗತವಾಗುವಂತೆ ಕೌಶಲ್ಯವನ್ನು ಬೆಳೆಸಿಕೊಳ್ಳುವುದರಲ್ಲಿ ಗಮಕ ಕಲೆ ಒಳಗೆ ಹೆಚ್ಚು ಶ್ರಮವಿದೆ. ಗಮಕ ಕಲೆಯಲ್ಲಿ ಎಷ್ಟು ರಾಗಗಳಿವೆ? ಎಷ್ಟು ವೈವಿಧ್ಯಮಯವಾಗಿ ಭಾವಗಳನ್ನು ಪ್ರಕಟಣ ಮಾಡುವ ಕ್ರಮಗಳಿವೆ? ಅವೆಲ್ಲವು ಕೂಡ ಕಾಲ ಸಿದ್ಧವಾಗಿ ಪ್ರಸ್ತುತ ಬಂದಿರುವ ಆಸ್ತಿ ನಮ್ಮದು. ಸುಲಭವಾಗಿ ಅದು ನಮ್ಮ ಕೈಗೆ ಸಿಗುವುದಿಲ್ಲ ಅದಕ್ಕಾಗಿ ಶ್ರಮದ ಅಗತ್ಯವಿದೆ ಎಂದರು.
ಯಾವುದೇ ಕಲಿಕೆಯಲ್ಲಿ ಶ್ರಮವಿಲ್ಲದೆ ಇದ್ರೆ ಕಲಿಕೆ ಪೂರ್ಣಗೊಳ್ಳುವುದಿಲ್ಲ. ಎರಡು ದಿನಗಳ ಗಮಕ ಕಾರ್ಯಾಗಾರದಲ್ಲಿ ಸಾಧ್ಯವಾದಷ್ಟು ಯಾರಿಗೆ ಇದರ ಬಗ್ಗೆ ಪರಿಚಯ ವಿಲ್ಲವೊ ಅವರು ಓಂ ಮೂಲಕ ಬಳಸಿಕೊಂಡು ನಿರಂತರವಾಗಿ ಹೋದ್ರೆ ಮಾತ್ರ ಗಮಕವು ತನ್ನ ಣವಿಷ್ಯವನ್ನು ಶಿಬಿರಾರ್ಥಿಗಳ ಮೂಲಕ ಕಂಡುಕೊಳ್ಳಲು ಕನ್ನಡದಲ್ಲಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶ್ರಮ ಪಟ್ಟರೇ ಕಲಿತವರಿಗೆ ಮಾತ್ರವಲ್ಲ. ಇಡೀ ಸಮಾಜಕ್ಕೆ ಆಗುತ್ತದೆ. ಪುಸ್ತಕದಲ್ಲಿರುವದನ್ನು ಮನಸ್ಸಿನೊಳಗೆ ಎಳೆದುಕೊಳ್ಳುವ ನಿಮ್ಮ ಪ್ರಯತ್ನ ಇರಬೇಕು. ಅಂತಹ ಸಾಮಾರ್ಥ್ಯವನ್ನು ಬೆಳೆಸಿಕೊಳ್ಳುವ ಆರಂಭದ ಲಕ್ಷಣವನ್ನು ತೋರಿಸಿದರೇ ಗಮಕದ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ಕಾರ್ಯಾಗಾರದ ಶಿಭಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಗಮಕಕಲಾ ಪರಿಷತ್‌ನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ತಮ್ಮ ಕಂಠದ ಮೂಲಕ ಪದ್ಯಗಳ ಗಾಯನ ಮಾಡುವುದರ ಮೂಲಕ ಗಮನಸೆಳೆದರು. ಉಭಯಭಾಷಾವಿದೆ ಶಾಂತಾಗೋಪಾಲ್ ಷಟ್ಟದಿಗಳು, ಕಾವ್ಯ, ಕವಿ ಮತ್ತು ಪದ್ಯವೈಶಿಷ್ಟ್ಯವನ್ನು ತಮ್ಮ ವ್ಯಾಖ್ಯಾನದಲ್ಲಿ ತಿಳಿಸಿಕೊಟ್ಟರು. ಎರಡನೇ ಗೋಷ್ಠಿಯಲ್ಲಿ ವಿದುಷಿ ಸುಷ್ಮಾ ಸಂತೋಷ್ ಮತ್ತು ವಿದ್ವಾನ್ ಶೃಂಗೇರಿ ವಿದ್ವಾನ್ ಎಸ್. ಗುರುಪ್ರಸಾದ್ ಗಮಕಕ್ಕೆ ಒಗ್ಗಿಕೊಳ್ಳುವ ಕಾವ್ಯದ ವಿವಿಧ ಪ್ರಕಾರಗಳ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಸಂಚಾಲಕ ಕಲಾಶ್ರೀ ಗಣೇಶ್ ಉಡುಪ, ಸೌಮ್ಯಶ್ರೀ ಆತ್ಮರಾಂ, ವಿದುಷಿ ರಾಧಕೃಷ್ಣ ಸ್ವರೂಪ್ ಇತರರು ಇದ್ದರು.