

ಬಾಗಲಕೋಟೆ: ಜಿಲ್ಲಾ ಕೇಂದ್ರಕ್ಕೆ ಹತ್ತಿರವಿರುವ ಕಾರಣ ಗದ್ದನಕೇರಿ ಕ್ರಾಸ್ ಸಾರ್ವಜನಿಕರು ಓಡಾಡುವ ಪ್ರಮುಖ ಸ್ಥಳವಾಗಿ ಮಾರ್ಪಟ್ಟಿದೆ. ಈ ಪ್ರದೇಶ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೀಳಗಿ ಶಾಸಕ, ಹಟ್ಟಿ ಚಿನ್ನದ ಗಣಿ ಕಂಪನಿ ನಿ. ಅಧ್ಯಕ್ಷ ಜಿ.ಟಿ.ಪಾಟೀಲ ಹೇಳಿದರು.
ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಶುಕ್ರವಾರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ೨೦೨೩-೨೪ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಸಿಸಿ ರಸ್ತೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ಮತಕ್ಷೇತ್ರದ ಅರಕೇರಿ, ಕೊಪ್ಪ, ಚಿಕ್ಕಾಲಗುಂಡಿ, ಸೋರಕೊಪ್ಪ, ಬನ್ನಿದಿನ್ನಿ ಸೇರಿದಂತೆ ಗದ್ದನಕೇರಿ ಕ್ರಾಸ್ ಹಾಗೂ ಮುರನಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಕಾಮಗಾರಿಗಳನ್ನು ಸ್ವತಃ ಗ್ರಾಮಸ್ಥರು ಅದರ ಉಸ್ತುವಾರಿ ವಹಿಸಿಕೊಂಡು ಉತ್ತಮ ಗುಣಮಟ್ಟದ ಕಾರ್ಯವನ್ನು ನಿರ್ವಹಿಸಿಕೊಳ್ಳಬೇಕು. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿ ಕೂಡ ಇದೆ ಎಂದರು.
ಗದ್ಧನಕೇರಿ ಕ್ರಾಸಿಗೆ ಬಸ್ ನಿಲ್ದಾಣ ಆರೋಗ್ಯ ಕೇಂದ್ರ ಮಾರುಕಟ್ಟೆ ಪೊಲೀಸ್ ಠಾಣೆ ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿದ್ದು ಈ ಮೊದಲು ಬಸ್ ನಿಲ್ದಾಣ ನನ್ನ ಅವಽಯಲ್ಲಿ ನಿರ್ಮಿಸಲು ಗ್ರಾಂಟ್ ಹಾಕಿಕೊಂಡಿದ್ದೆ . ಸ್ಥಳದ ಅಭಾವವಿರುವುದರಿಂದ ಅದು ಸರ್ಕಾರಕ್ಕೆ ಮರಳಿ ಹೋಯಿತು. ಈಗ ಇಲ್ಲಿಯ ಎಣ್ಣೆ ಬೆಳೆಗಾರರ ಸಂಘ ಲೀಸ್ ಪಡೆದಿರುವ ಜಮೀನು ೨೦ ಎಕರೆ ಇದ್ದು, ಇದರಲ್ಲಿ ನಮಗೆ ಭೂಮಿ ದೊರೆಯುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದ್ದನಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾ ಸಂಗಪ್ಪ ನಾಲತ್ವಾಡ, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್ ಸಾಲಗುಂದಿ, ಸಂಭಾಜಿ ಕೊಕಾಟೆ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಗಣ್ಣ ನಾಲವತ್‌ವಾಡ, ಅಹ್ಮದ್ ಕಿರ್ಸೂರ್ ಜಾವೇದ್, ಮುಜಾವರ್ ಶವತ್ಕಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ಶಿವನಂದ ಪಟ್ಟಣಶೆಟ್ಟಿ ಸೇರಿ ಇತರರು ಇದ್ದರು.