ಗದಗದಲ್ಲಿ ಹಣ್ಣಿನ ವ್ಯಾಪಾರಿ ಹತ್ಯೆ

19-gdg-gundappa death
Published on

ಗದಗ: ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ತೀಸ್ ಬಿಲ್ಡಿಂಗ್ ಸಮೀಪ ಭಾನುವಾರ ರಾತ್ರಿ ನಡೆದಿದೆ. ಸ್ಥಳೀಯ ವಿವೇಕಾನಂದ ನಗರದ ನಿವಾಸಿ ಗುಂಡಪ್ಪ (ಮುತ್ತು) ಛಲವಾದಿ (27) ಹತ್ಯೆಗೀಡಾದವರು. ಗುಂಡಪ್ಪನ ಎದೆ, ಹೊಟ್ಟೆ, ಕೈ ಮತ್ತಿತರ ಭಾಗಗಳಿಗೆ ಹಲವಾರು ಬಾರಿ ಇರಿದು ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ನಗರದ ಜನತಾ ಬಜಾರ್​ನಲ್ಲಿ ಗುಂಡಪ್ಪ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಯತೀಶ್, ಡಿಎಸ್ಪಿ ಶಿವಾನಂದ ಪವಾಡಿಶೆಟ್ಟರ ಮತ್ತು ಸಿಪಿಐ ಪಿ.ವಿ. ಸಾಲಿಮಠ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಗುಂಡಪ್ಪ ಛಲವಾದಿ ಬಡ್ಡಿ ವ್ಯವಹಾರ ಮಾಡುವವರೊಂದಿಗೆ ಸ್ನೇಹ ಬೆಳೆಸಿದ್ದೇ ಸಾವಿಗೆ ಕಾರಣವಾಯಿತೆ? ಎಂಬ ಅನುಮಾನ ಮೂಡಿದೆ. ಬಡ್ಡಿ ವ್ಯವಹಾರಸ್ಥರಿಂದ ವ್ಯಕ್ತಿಯೊಬ್ಬರಿಗೆ ಗುಂಡಪ್ಪ 20 ಸಾವಿರ ರೂ. ಸಾಲ ಕೊಡಿಸಿದ್ದರು. ಈ ವಿಷಯದಲ್ಲಿ ಜಗಳ ಉಂಟಾಗಿ ಸ್ನೇಹಿತರೇ ಗುಂಡಪ್ಪನನ್ನು ಹತ್ಯೆ ಮಾಡಿದ್ದಾರೆ. ಭಾನುವಾರ ರಾತ್ರಿ ಪಾರ್ಟಿಗೆಂದು ಕರೆದು ಹತ್ಯೆ ಮಾಡಿದ್ದಾರೆ ಎಂದು ಗುಂಡಪ್ಪನ ತಂದೆ ಯಲ್ಲಪ್ಪ ಛಲವಾದಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net