ಗದಗದ ನಾಗಾವಿಯಲ್ಲಿ ಜಲಕಂಟಕ, ಒಂದೇ ದಿನ ದಾಖಲೆಯ 179.5 ಮಿ.ಮೀ. ಮಳೆ

10-gdg-3
Published on

ಗದಗ: ನಾಗಾವಿ ಗ್ರಾಮದ ಬಳಿ ಸೆ. 6ರಂದು 179.5 ಮಿ.ಮೀ. ಮಳೆ ಸುರಿದು ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿ ದಾಖಲೆಯಾಗಿದೆ. ಸತತ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಇಡೀ ಗ್ರಾಮವೇ ಜಲಾವೃತಗೊಂಡಿದೆ.

ಗ್ರಾಮದಲ್ಲಿರುವ ವಿಜಯನಗರ ಕಾಲದ ಬುಕ್ಕನ ಕೆರೆ ತುಂಬಿ ಹರಿಯುತ್ತಿದೆ. ಎಲ್ಲ ಬಾವಿಗಳೂ ಭರ್ತಿಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿದ್ದರಿಂದ ಕೆರೆ ವ್ಯಾಪ್ತಿಯ ಮನೆಗಳಲೂ ನೀರು ಸಂಗ್ರಹವಾಗಿದೆ. ಪಂಪ್​ಸೆಟ್ ಮೂಲಕ ನೀರನ್ನು ಹೊರಹಾಕಲಾಗá-ತ್ತಿದೆ. ತೇವಾಂಶ ಹೆಚ್ಚಾಗಿ ಸ್ಥಳೀಯರು ಅನಾರೋಗ್ಯಕ್ಕೆ ಈಡಾಗá-ತ್ತಿದ್ದಾರೆ.

ಶಿರುಂದ-ಯಲಿಶಿರುಂದ ಹಾಗೂ ಬೆಳದಡಿ-ಬೆಳದಡಿ ತಾಂಡಾಗಳಿಂದ ಹರಿದು ಬರುವ ನೀರು ನಾಗಾವಿ ಗ್ರಾಮ ಹಾಗೂ ತಾಂಡಾದ ನಡುವೆ ಇರುವ ಕೆರೆಯಲ್ಲಿ ಶೇಖರಣೆಯಾದ ಪರಿಣಾಮ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆ ನಾಶವಾಗಿದೆ. ಗದಗ-ಬೆಳದಡಿಗೆ ಸಂಪರ್ಕ ಕಲ್ಪಿಸುವ ನಾಗಾವಿ ಹತ್ತಿರದ ರಸ್ತೆಯಲ್ಲಿ ಸುಮಾರು 30 ಮೀ. ಅಡಿಯಷ್ಟು ಕಂದಕ ಬಿದ್ದಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನಾಗಾವಿ ಬಳಿಯ ಈಚಲು ಹಳ್ಳದ ಒಡ್ಡು ಒಡೆದು ಹೋಗಿದೆ. ಸತತ ಮಳೆಯಿಂದ ಉಂಟಾಗಿರá-ವ ಹಾನಿಗೆ ಪರಿಹಾರ ನೀಡಬೇಕು. ಆಧುನಿಕ ತಂತ್ರಜ್ಞಾನ ಬಳಸಿ ಬುಕ್ಕನಕೆರೆಯ ನೀರು ಹೊರಹಾಕಲು ನಾಗಾವಿ ಗ್ರಾ.ಪಂಗೆ ವಿಶೇಷ ಅನುದಾನದ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net