ಗದಗ: ಸ್ವೀಪ್ ಸಮಿತಿ ಅಧ್ಯಕ್ಷರಿಂದ ಮನೆ ಮನೆ ಭೇಟಿ, ಮತದಾನದ ಜಾಗೃತಿ

Published on

ಗದಗ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಸುಶೀಲಾ ಬಿ ಅವರು ಶುಕ್ರವಾರ ಬೆಟಗೇರಿಯ ಗಾಂಧೀ ನಗರ, ಸೆಟ್ಪಮೆಂಟ್ ಹಾಗೂ ಹಾಕಿ ಸ್ಟೇಡಿಯಂ ಹತ್ತಿರದ ಮನೆಗಳಿಗೆ ಭೇಟಿ ನೀಡಿ ಮತದಾರರ ವಿವರ ಪಡೆದು ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಪಾಲ್ಗೊಂಡು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದರು.  ಮನೆ ಮನೆ ಭೇಟಿ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಸಂಖ್ಯೆ, ಮತದಾನ ಗುರುತಿನ ಚೀಟಿ, ಮತಗಟ್ಟೆ ಸಂಖ್ಯೆ ಕುರಿತು ವಿವರ ಪಡೆದು ಮತದಾನದ ದಿನದಂದು ತಪ್ಪದೇ ಮತ ಚಲಾಯಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಅರ್ಹ ಮತದಾರರಿಗೆ ಮತದಾನದಿಂದಾಗುವ ಪ್ರಯೋಜನ, ಮತದಾನದ ಜವಾಬ್ದಾರಿ ಕುರಿತು ವಿವರ ನೀಡಿದರು. ಈ ವೇಳೆ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತ ಗಂಗಪ್ಪ, ಜಿ.ಪಂ. ಮುಖ್ಯ ಯೋಜನಾಧಿಕಾರಿ ವಾಘೀಶ, ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net