

ಗದಗ: ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಅಂತೂರ ಬೆಂತೂರ ಗ್ರಾಮದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ .ಬಿ ಪಿ ಜೈನರ ಮಾತನಾಡಿ ಮೇಕ್ ಇನ್ ಇಂಡಿಯಾ ಸ್ಥಿರತೆ ಮತ್ತು ಧೈರ್ಯದ ಪ್ರತೀಕದ ಲಾಂಛನವಾಗಿದೆ ಮುಂದುವರೆದು ಈ ಒಂದು ಮಹತ್ವಾಕಾಂಕ್ಷೆಯ ಯೋಜನೆಯು 25 ಸೆಪ್ಟೆಂಬರ್ 2014 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಪ್ರಾರಂಭಿಸಿದರು. ಭಾರತಕ್ಕೆ ಆರ್ಥಿಕ ಜಾಗತಿಕ ಗುರುತನ್ನು ನೀಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ, ಹೂಡಿಕೆದಾರರು ಇದನ್ನು ಒಂದು ಅವಕಾಶವಾಗಿ ನೋಡಬೇಕು ಮತ್ತು ಭಾರತದಲ್ಲಿನ ಮಾರುಕಟ್ಟೆಯಾಗಿ ಅಲ್ಲ ಎಂದು ಪ್ರಧಾನಿ ಹೇಳಿದರು. ಈ ಅಭಿಯಾನದ ಗುರಿಯು ಭಾರತೀಯ ಆರ್ಥಿಕತೆಯನ್ನು ಸೇವಾ-ಚಾಲಿತ ಬೆಳವಣಿಗೆಯ ಮಾದರಿಯಿಂದ ಉತ್ಪಾದನೆ-ಚಾಲಿತ ಬೆಳವಣಿಗೆಗೆ ಕಾರ್ಮಿಕರನ್ನು ಹೆಚ್ಚಿಸುವ ಮೂಲಕ ಮರುರೂಪಿಸುವುದು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರಿಂದ ಭಾರತದಲ್ಲಿ 10 ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. ಇದು ಭಾರತದಲ್ಲಿ ತಮ್ಮ ವ್ಯಾಪಾರವನ್ನು ಸ್ಥಾಪಿಸಲು ಪ್ರಮುಖ ವಿದೇಶಿ ಕಂಪನಿಗಳನ್ನು ಆಕರ್ಷಿಸುವ ಪರಿಣಾಮಕಾರಿ ಯೋಜನೆಯಾಗಿದೆ.
ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ, ರಕ್ಷಣಾ ಉತ್ಪಾದನೆ ಮತ್ತು ವಿಮಾ ಕ್ಷೇತ್ರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ, ಆದಾಗ್ಯೂ ವಿಶ್ಲೇಷಕರ ಪ್ರಕಾರ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ. ದೇಶದಲ್ಲಿ ಹೆಚ್ಚಿನ ಉದ್ಯೋಗಗಳು ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ. ಭಾರತವು ವಿಭಿನ್ನ ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯನ್ನು ಹೊಂದಿರುವ ದೇಶವಾಗಿದ್ದು ಅದು ಹೂಡಿಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಹೀಗೆ ಅನೇಕ ವಿಚಾರಗಳನ್ನು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು
ವೇದಿಕೆ ಮೇಲೆ ಅಂತೂರ ಬೆಂತೂರ ಬುದೀಶ್ವರ ಸಂಸ್ಥಾನ ಮಠದ ಶ್ರೀ ಪರಮ ಪೂಜ್ಯ ರಾ ಚೋಟೇಶ್ವರ ಮಹಾಸ್ವಾಮಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಎಲ್ಲವ್ವ ಡಿ ಹೊಸಮನಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಬಿ ಏ ಮನಕವಾಡ, ಪ್ರಧಾನ ಗುರುಗಳಾದ ಶ್ರೀ ಎಸ್ ಜಿ ಓದಾನವರು ಹಿರಿಯರಾದ ಬೋಧೀಶ್ ಬಡ್ನಿ, ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಗ್ರಾಮದ ಗುರಿ ಹಿರಿಯರು ಈ ಒಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಕವನ ಕೊಣ್ಣೂರ್ ಎನ್ಎಸ್ಎಸ್ ಗೀತೆ ಪ್ರಸ್ತುತ ಪಡಿಸಿದರು