ಗದಗ: ಸಿದ್ದೇಶ್ವರ ಶ್ರೀಗಳು ಅಗಲಿಕೆ: ಮೌನ ವಹಿಸಿದ ಆದ್ಯಾತ್ಮಲೋಕ

03GDG01C
????????????????????????????????????
Published on

ಗದಗ

ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ಜಿಲ್ಲೆಯ ಆಧ್ಯಾತ್ಮ ಲೋಕ ಮೌನವಹಿಸಿದೆ.
ಜಾತಿ, ಮತಕ್ಕೆ ಸೀಮಿತವಾಗಿರದೇ ಅದ್ವೈತದ ಪ್ರತಿಪಾದಕರಾಗಿ, ಆಧ್ಯಾತ್ಮ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ವಿಜಯಪುರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಸೋಮವಾರ ಸಂಜೆ ಶ್ರೀಗಳು ಲಿಂಗೈಕ್ಯರಾಗಿದ್ದು, ಶಿಕ್ಷಣ ಸಂಸ್ಥೆಗಳು, ಪತ್ರಕರ್ತರ ಸಂಘ, ಜಿಲ್ಲೆಯ ಮಠಾ„ೀಶರು, ಜಿಲ್ಲಾ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಗದಗ ನಗರಕ್ಕೂ ಸಿದ್ದೇಶ್ವರ ಶ್ರೀಗಳಿಗೂ ಗುರು ಶಿಷ್ಯರ ಸಂಬಂಧವಿತ್ತು. ಅವರ ಪ್ರವಚನದಿಂದ ಗದಗ ಜಿಲ್ಲೆಯಲ್ಲಿ ಆದ್ಯಾತ್ಮಿಕ ಪರಿಸರ ಬೆಳೆದು ಹೆಮ್ಮರವಾಗಿಯಿತು. ಶಾಂತಿ, ಸಹಬಾಳ್ವೆ ನಲೆಗೊಂಡಿತು. ತೊಂಟದಾರ್ಯ ಮಠ, ಮುಂಡರಗಿ ಅನ್ನದಾನೇಶ್ವರ, ಮುಂಡರಗಿ ತಾಲೂಕಿನ ಡೋಣಿ ನಂದಿವೇರಿ ಮಠ ಸೇರಿದಂತೆ ಹಲವು ಮಠಗಳೊಂದಿಗೆ ಆತ್ಮಿಯತೆ ಹೊಂದಿದ್ದ ಶ್ರೀಗಳ ನಡುವೆ ಪರಸ್ಪರ ಗೌರವ ಇತ್ತು.
ಗದಗ ತಾಲೂಕಿನ ಹುಲಕೋಟಿಯಲ್ಲಿ 1996ರಲ್ಲಿ, ನಗರದ ಜಿಲ್ಲಾ ಕ್ರೀಡಾಂಗಣ 2005ರಲ್ಲಿ ಒಂದು ತಿಂಗಳು, ಮತ್ತು ಮುಳಗುಂದ ಪಟ್ಟಣದ ಮಹಾಂತ ಶಿವಯೋಗಿ ಕಲಾಭವನದಲ್ಲಿ ಒಂದು ದಿನದ ಪ್ರವಚನ, ಮುಳಗುಂದ ಪಟ್ಟಣದಲ್ಲಿ 2006ರ ನ.25 ರಿಂದ ಡಿ16 ರ ವೆರಗೆ 21 ದಿನಗಳ ಕಾಲ ಪ್ರವವಚನ ಯಶಸ್ವಿಗೊಂಡಿದ್ದು ಇತಿಹಾಸ. ಅದಲ್ಲದೇ ರೋಣ, ನರಗುಂದ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಶ್ರೀಗಳು ಪ್ರವಚನ ನೀಡಿದ್ದಾರೆ.
ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಬಿ. ಬಡ್ನಿ ಜತೆಗೆ ಸಿದ್ದೇಶ್ವರ ಶ್ರೀಗಳಿಗೆ ಆತ್ಮಿಯತೆ ಇತ್ತು. 1994ರಲ್ಲಿ ಹುಬ್ಬಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಸವೇಶ್ವರ ಪ್ರಾಂಗಣ ಎಂದು ನಾಮಕರಣ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲರು ಮೊದಲ ಬಾರಿಗೆ ಸಿದ್ದೇಶ್ವರ ಶ್ರೀಗಳ ದರ್ಶನ ಪಡೆದು, ಅವರ ಪ್ರವಚನದ ಪ್ರಭಾವಕ್ಕೊಳಗಾಗಿ ಗದಗ, ಹುಲಕೋಟಿಗೆ ಪ್ರವಚನಕ್ಕೆ ಕರೆಸಿದ್ದರು ಎಂಬುದು ವಿಶೇಷ.

ಒಂದು ವರ್ಷ ಕಾದಿದ್ದ ಸಿ.ಬಿ. ಬಡ್ನಿ:
ಗದಗ ಎಪಿಎಂಸಿ ಮಾಜಿ ಅಧ್ಯಕ್ಷ, ದಿವಂಗತ ಸಿ.ಬಿ. ಬಡ್ನಿ ಅವರು ಹೊಸ ಮನೆ ಗೃಹಪ್ರವೇಶಕ್ಕಾಗಿ ಒಂದು ವರ್ಷ ಕಾದಿದ್ದರು. ಮುಳಗುಂದ ಪಟ್ಟಣದಲ್ಲಿ ಹೊಸ ಮನೆ ನಿರ್ಮಿಸಿದ್ದ ಸಿ.ಬಿ. ಬಡ್ನಿ, ಸಿದ್ದೇಶ್ವರ ಶ್ರೀಗಳನ್ನು ಮುಳಗುಂದಕ್ಕೆ ಪ್ರವಚನ ಕರೆಸುವ ಆಶಯ ಹೊಂದಿದ್ದರು. ಶ್ರೀಗಳು ಒಪ್ಪಿದ ಹಿನ್ನೆಲೆ ನಿರ್ಮಿಸಿದ್ದ ಹೊಸ ಮನೆ ಗೃಹ ಪ್ರವೇಶ ಮಾಡದೇ ಒಂದು ವರ್ಷ ಕಾದು, ಸಿದ್ದೇಶ್ವರ ಶ್ರೀಗಳು ಪ್ರವಚನಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ವಾಸ್ತವ್ಯವನ್ನು ಅಲ್ಲೇ ಮಾಡಲಾಗಿತ್ತು. ತದನಂತದ ಗೃಹಪ್ರವೇಶ ಜರುಗಿಸಿದರು.

ಮುಳಗುಂದ ಪ್ರವಚನ:
2006ರಲ್ಲಿ ಮುಳಗುಮದದಲ್ಲಿ ನಡೆದ ಪ್ರವಚನವನ್ನು ಹಿರಿಯರು ಸ್ಮರಿಸುತ್ತಾರೆ. ಸಂಜೆ 6 ರಿಂದ 7 ಗಂಟೆ ವರೆಗೆ ಎಸ್.ಜೆ.ಜೆ.ಎಂ ಹೈಸ್ಕೂಲ್ ಮೈದಾನದಲ್ಲಿ ಪ್ರವಚನ. ಕುಂದಗೋಳ, ಗದಗ, ಹುಬ್ಬಳ್ಳಿ, ಮಧ್ಯ ಕರ್ನಾಟಕ ಭಾಗದಿಂದ ಜನರು ಆಗಮಿಸುತ್ತಿದ್ದರು. ಪ್ರತಿ ನಿತ್ಯ 6 ರಿಂದ 7 ಸಾವಿರ ಜನ ಸೇರಿತ್ತಿದ್ದರು. ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು, ಶೇಂಗಾ ಹೋಳಿಗೆ, ಗೋಧಿ ಹುಗ್ಗಿ, ನಾನಾ ಖಾಧ್ಯಗಳ ದಾಸೋಹವು ರಾಜರಾಜೇಶ್ವರಿ ಆಯಿಲ್ ಮಿಲ್ ನಲ್ಲಿ ನಿರಂತರ ನಡೆಯಿತು.

ಕೋಟ್:ಮಾತಿನಂತೆ ಬದುಕಿದ ಅಪರೂಪದ ಅದ್ವೈತದ ಪ್ರತಿಪಾದಕರು. ನಡೆ-ನುಡಿ ಒಂದೇ. ಅವರ ಸಂಪರ್ಕಕ್ಕೆ ಬಂದು ಬದುಕಿನಲ್ಲಿ ಬದಾಲವಣೆ ಕಂಡ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಗದಗ ನಗರದ ಜಿಲ್ಲಾ ಕ್ರೀಡಾಂಗಣ, ವಿಡಿಎಸ್ ಸ್ಕೂಲ್ ನಲ್ಲಿ ಎರಡೂ ಬಾರಿ ಪ್ರವಚನ ಹಮ್ಮಿಕೊಂಡಿದ್ದೇವು. -ಡಿ.ಆರ್. ಪಾಟೀಲ, ಮಾಜಿ ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net