

ತಮ್ಮ ಶಿಕ್ಷಕರು ಹೇಳಿರುವ ಪರೀಕ್ಷೆಯ ಹಲವಾರು ಸಲಹೆಗಳನ್ನು ಅಳವಡಿಸಿಕೊಂಡು ಆತ್ಮ ವಿಶಾಸ್ವದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಯ ಸಿ.ಸಿ.ಕುರಹಟ್ಟಿ ಹೇಳಿದರು.
ಲಕ್ಕುಂಡಿ ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪರೀಕ್ಷೆಗೆ ಪೂರ್ವ ತಯಾರಿ ಅವಶ್ಯವಿದ್ದು ತಾಳ್ಮೆ , ಸಹನೆಯಿಂದ ಮನಸ್ಸನ್ನು ಶುಭ್ರವಾಗಿಸಿಕೊಂಡು ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದ ಅವರು ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಕೌಶಲ್ಯಭರಿತ ಶಿಕ್ಷಣವನ್ನು ಕಲಿತು ಭವಿóಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಮಾಜಿ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ ವಿದ್ಯಾರ್ಥಿಗಳಿಗೆ ಈ ಪ್ರೌಢವಸ್ಥೆಯ ಜೀವನ ಅಮೃತ ಗಳಿಗೆ ಇದ್ದಂತೆ ಈ ಸಮಯವನ್ನು ಅಧ್ಯಯನಶೀಲತೆಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮಲ್ಲಿರುವ ವಿಚಾರಗಳನ್ನು ಹತ್ತಿಟ್ಟುಕೊಳ್ಳದೇ ಪ್ರಕಟಿಸಬೇಕು. ಭಗವಂತನಲ್ಲಿ ವಿಶ್ವಾಸವಿಟ್ಟು ಸಂಸ್ಕ್ರತಿ ,ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕು. ಅಹಂಕಾರವನ್ನು ತೊರೆದು ಹಿರಿಯರ, ಶಿಕ್ಷಕರ ಸಲಹೆಗಳನ್ನು ಗೌರವಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಗ್ರಾ. ಪಂ ಸದಸ್ಯ ಕುಬೇರಪ್ಪ ಬೆಂತೂರು, ಶಿಕ್ಷಕ ಎ.ಎಸ್. ಕಳಸದ ಮಾತನಾಡಿದರು
ಕಳೆದ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ನೇತ್ರಾವತಿ ಪಲ್ಲೇದ, ಸಾನಿಯಾ ಹುಬ್ಬಳ್ಳಿ, ಈರಮ್ಮ ಕರಿಯಲ್ಲಪ್ಪನವರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ಎಸ್. ಎಸ್.ಎಲ್. ಸಿ ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಅನುಭವಗಳನ್ನು ಹಂಚಿಕೊಂಡರು. ವಿವಿಧ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿರುಪಾಕ್ಷಪ್ಪ ಚನ್ನಪ್ಪನವರ ಸಂಗಡಿಗರಿಂದ ರಸಮಂಜರಿ ನಡೆಯಿತು.
ಶಿಕ್ಷಕ ಎಸ್.ಎಚ್. ಶೆಟ್ಟಿನಾಯ್ಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯೋಪಾಧ್ಯಯ ಯಮನೂರಸಾಬ ಎಚ್ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ. ಪಂ ಸದಸ್ಯರಾದ ಅನಸಮ್ಮ ಅಂಬಕ್ಕಿ, ಬಸವರಾಜ ಹಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಪುರದ, ಉಪಾಧ್ಯಕ್ಷೆ ಶೋಭಾ ಮಲ್ಲಾಡದ, ಸದಸ್ಯರಾದ ಮಲ್ಲಪ್ಪ ದಂಡಿನ, ನಜೀರಸಾಬ ಮಲ್ದಾರ, ಲಕ್ಷ್ಮವ್ವ ಕೆಂಗೊಡದ, ಲಕ್ಷ್ಮೀ ರೋಣದ, ಉಪಸ್ಥಿತರಿದ್ದರು. ಅಪ್ಸನಾ ತಹಶಿಲ್ದಾರ, ಸಂಗಡಿಗರು ಸ್ವಾಗತಿಸಿದರು.ಎಸ್.ಎ ಮುಂಡೆವಾಡೆ ಸ್ವಾಗತಿಸಿದರು. ವೈ. ವೈ ಬೆಟಗೇರಿ ನಿರೂಪಿಸಿದರು. ಎಮ್, ಎಮ್, ಮುನಸಿ ವಂದಿಸಿದರು.