ಗದಗ: ಲಕ್ಕುಂಡಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ

IMG-20230211-WA0007
Published on

ಗದಗ: ಐತಿಹಾಸಿಕ ಲಕ್ಕುಂಡಿ ಉತ್ಸವದ ಅಂಗವಾಗಿ ತಾಲೂಕಿನ ‌ಲಕ್ಕುಂಡಿಯ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆ ಹತ್ತಿರದಲ್ಲಿ ವಸ್ತು ಪ್ರದರ್ಶನ, ಫಲಪುಷ್ಪ ಪ್ರರ್ದಶನವು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ತೋಟಗಾರಿಕೆ ಇಲಾಖೆಯವರು ಪ್ರದರ್ಶಿಸಿದ ಫಲ ಪುಷ್ಪ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು. ಬಣ್ಣ ಬಣ್ಣದ ಹೂವಿನಿಂದ ಬ್ರಹ್ಮ ಜೀನಾಲಯ ಚಿತ್ರ ನೋಡುಗರನ್ನು ಆನಂದ ನೀಡಿತು. ವಿವಿಧ ತರಕಾರಿಗಳಲ್ಲಿ ಹಣ್ಣು ಹಾಗೂ ವಿವಿಧ ಕಲಾಕೃತಿಗಳು, ವಿವಿಧ ಹೂವಿನಿಂದ ಚಿತ್ರಗಳು ಅಲಂಕರಿಸಿದ್ದು ನೋಡುಗರ ಕಣ್ಮನ ಸೆಳೆಯಿತು.
ಫಲಪುಷ್ಪ ಪ್ರದರ್ಶನದ ಮುಂಬಾಗದಲ್ಲಿ ಸೆಲ್ಪಿ ತೆಗೆದುಕೊಳ್ಳಲು ಮಗಿ ಬಿದ್ದರು. ಹೂವಿನಲ್ಲಿ ಅರಳಿದ ವಿವಿಧ ಚಿತ್ರಗಳು, ಹಣ್ಣಿನಲ್ಲಿ ಮಹಾತ್ಮರ ಕಲಾಭಿಮಾನಿಗಳಿಗೆ ಸಂತಸ ಮೂಡಿಸಿದವು. ನೀರು ಮತ್ತು ಮಣ್ಣು ಸಂರಕ್ಷಣೆ ಕುರಿತ ಜಲಾನಯನ ಮಾದರಿ ರೈತರನ್ನು ಆಕರ್ಷಿಸಿತು.
ಸಿರಿಧಾನ್ಯದ ಮೂಲಕ ವಿವಿಧ ವಸ್ತುಗಳನ್ನು ಜನರು ಖರೀದಿ ಮಾಡಲು ಮುಂದಾದರು.

ಬಾಕ್ಸ್
ರೈತರ ಬೆಳೆಗಳ ಪ್ರದರ್ಶನ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಅತ್ಯುತ್ತಮವಾಗಿ ಬೆಳೆದ ಉತ್ತಮ ಬೆಳೆಗಳನ್ನು ಪ್ರದರ್ಶನ ಮಾಡಲಾಯಿತು. ಜತೆಗೆ ತಾಲೂಕಿನ ವಿವಿಧ ಭಾಗದ ರೈತರು ಇಲ್ಲಿ ತಮ್ಮ ಉತ್ತಮ ಬೆಳೆಗಳನ್ನು ಬರುವ ಜನರಿಗೆ ಮಾಹಿತಿ ನೀಡುತ್ತಿದ್ದರು.

ಬಾಕ್ಸ್
25 ವಿವಿಧ ಮಳಿಗೆ ಹಾಕಲಾಗಿದೆ
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸ್ವಸಹಾಯ ಗುಂಪು, ಅರಣ್ಯ ಇಲಾಖೆ, ಸಿರಿಧಾನ್ಯ, ಕೌದಿ ಮಾರಾಟ ಸೇರಿದಂತೆ 25 ಮಳಿಗೆಗಳನ್ನು ಹಾಕಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಜನರು ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net