

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಐತಿಹಾಸಿಕ ಲಕ್ಕುಂಡಿ ಉತ್ಸವವು ಫೆಬ್ರುವರಿ 10,11,12 ರಂದು ಹಮ್ಮಿಕೊಳ್ಳಲಾಗಿದ್ದು ಉತ್ಸವದ ಮೊದಲನೇ ದಿನವಾದ ಫೆಬ್ರುವರಿ 10 ರಂದು ಬೆಳಿಗ್ಗೆ 10 ಗಂಟೆಗೆ ಲಕ್ಕುಂಡಿಯ ಸರಕಾರಿ ಮಾದರಿ ಪ್ರೌಢಶಾಲೆ ಆವರಣದಲ್ಲಿ ಜಾನಪದ ಕಲಾವಾಹಿನಿ ಮೆರವಣಿಗೆಯ ಉದ್ಘಾಟನೆ ಜರುಗಲಿದೆ.
ಮೆರವಣಿಗೆಯು ವಿವಿಧ ಜನಪದ ಕಲಾತಂಡಗಳೊಂದಿಗೆ ಸರಕಾರಿ ಹಿರಿಯ ಪ್ರೌಢ ಶಾಲೆ ಆವರಣದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಗೆ ಆಗಮಿಸಲಿದೆ.
ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಜಾನಪದ ಕಲಾವಾಹಿನಿಯ ಮೆರವಣಿಗೆಯನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಎಂ.ಸಿ.ಎ ನಿಗಮದ ಅಧ್ಯಕ್ಷ ಎಂ.ಎಸ್.ಕರಿಗೌಡ್ರ. ಲಕ್ಕುಂಡಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಲಲಿತಾ ಅಶೋಕ ಗದಗಿನ, ಉಪಾಧ್ಯಕ್ಷ ರೇವಣಸಿದ್ದಪ್ಪ ಶೇಖಪ್ಪ ಮುಳಗುಂದ ಹಾಗೂ ಲಕ್ಕುಂಡಿ ಗ್ರಾಮ ಪಂಚಾಯತ ಸರ್ವ ಸದಸ್ಯರು, ಸ್ತ್ರೀಶಕ್ತಿ ಸಂಘ, ಯುವಕ ಮಂಡಳಿಗಳು ಗ್ರಾಮದ ಗುರು-ಹಿರಿಯರು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸುವರು.
ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಸ್ಥಳೀಯ 25ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಲಿದ್ದು ವಿವರ ಇಂತಿದೆ: ಮಂಡ್ಯದ ಶ್ರೀಮತಿ ಸವಿತಾ ಚಿರಕುನ್ನಯ್ಯ ಮತ್ತು ತಂಡದವರಿಂದ ಮಹಿಳಾ ಪೂಜಾ ಕುಣಿತ, ಮದ್ದೂರಿನ ಜಗದೀಶ ಮತ್ತು ತಂಡದವರಿಂದ ಪಟ ಕುಣಿತ, ಚಿಕ್ಕಮಗಳೂರಿನ ಶ್ರೀಮತಿ ಶ್ವೇತಾ ಮತ್ತು ತಂಡದವರಿಂದ ಮಹಿಳಾ ವೀರಗಾಸೆ, ಉಡುಪಿಯ ಶ್ರೀ ದುರ್ಗಾ ಮಹಿಳಾ ಚಂಡೆ ಬಳಗದವರಿಂದ ಮಹಿಳಾ ಚಂಡೆ ವಾದ್ಯ, ಪಾಂಡವಪುರದ ಕೃಷ್ಣೇಗೌಡ ಹೆಗ್ಗಡಹಳ್ಳಿಯವರಿಂದ ಚಿಲಿಪಿಲಿ ಗೊಂಬೆ, ಕೊಪ್ಪಳದ ಶರಣಯ್ಯ ಮತ್ತು ತಂಡದವರಿಂದ ನಂದಿಧ್ವಜ, ನರಗುಂದದ ಯೋಗೇಶ ಗುಡಾರದ ಮತ್ತು ತಂಡದವರಿಂದ ಜಗ್ಗಲಿಗೆ, ಸಂದಿಗವಾಡದ ಸಿದ್ಧಲಿಂಗೇಶ್ವರ ಕರಡಿ ಮಜಲು ಸಂಘದವರಿಂದ ಕರಡಿ ಮಜಲು, ಎಚ್.ಎಸ್. ವೆಂಕಟಾಪುರದ ಮಹರ್ಷಿ ವಾಲ್ಮೀಕಿ ಕಲಾ ಸಂಸ್ಥೆಯವರಿಂದ ಜಾಂಜ್‍ಮೇಳ, ಕಲ್ಲಾಪೂರದ ಬಸವೇಶ್ವರ ಕರಡಿ ಮಜಲು ಸಂಘದವರಿಂದ ಕರಡಿ ಮಜಲು, ಕೊಣ್ಣೂರಿನ ಮಹಾಂತೇಶ ವಾಲಿ ಮತ್ತು ತಂಡದವರಿಂದ ಡೊಳ್ಳು ಕುಣಿತ, ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ಕಲಾ ತಂಡದವರಿಂದ ನಂದಿಕೋಲು, ನಗರದ ಶಹಾಪೂರ ಪೇಟೆ ಸಮ್ಮಾಳ ಮೇಳ ಸಂಘದವರಿಂಸ ಸಮ್ಮಾಳ ನಂದಿಕೋಲು, ಹಡಗಲಿಯ ಚಂದ್ರಮೌಳೇಶ್ವರ ಯುವಕ ಸಂಘದವರಿಂದ ಚಾಂಜ್ ಮೇಳ, ಸೊರಟೂರಿನ ಶ್ರೀ ವೀರಭದ್ರೇಶ್ವರ ಕಲಾತಂಡದವರಿಂದ ಕೀಲು ಕುದುರೆ, ಸೂರಣಗಿಯ ಬೀರಲಿಂಗೇಶ್ವರ ಡೊಳ್ಳಿನ ಕಲಾತಂಡದವರಿಂದ ಡೊಳ್ಳು ಕುಣಿತ, ಬೆಟಗೇರಿಯ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾ ತಂಡದವರಿಂದ ವೀರಗಾಸೆ, ಲಕ್ಕುಂಡಿಯ ನೂಲಿ ಚಂದಯ್ಯ ಕರಡಿ ಮಜಲು ತಂಡದವರಿಂದ ಕರಡಿ ಮಜಲು, ನರಗುಂದದ ಜಗ್ಗಲಿಗೆ ಶ್ರೀ ವೀರಬಾಬಾ ಸಾಹೇಬ ಜಗ್ಗಲಿಗೆ ಮೇಳದವರಿಂದ ಜಗ್ಗಲಿಗೆ, ಲಕ್ಕುಂಡಿಯ ಶ್ರೀ ರಾಜರಾಜೇಶ್ವರಿ ಡೊಳ್ಳು ಕುಣಿತ ಹಾಗೂ ಶ್ರೀ ಬೀರಲಿಂಗೇಶ್ವರ ಡೊಳ್ಳು ಕುಣಿತ ತಂಡದವರಿಂದ ಡೊಳ್ಳು ಕುಣಿತ, ಲಕ್ಕುಂಡಿಯ ಶ್ರೀ ಗ್ರಾಮದೇವತೆ ಯುವಕ ಮಂಡಳದವರಿಂದ ಜಾಂಜ್ ಮೇಳ, ಲಕ್ಕುಂಡಿಯ ಶ್ರೀ ಲಕ್ಷ್ಮೀ ಗಾರ್ಮೆಂಟ್ಸ್ ಮಹಿಳಾ ತಂಡದವರಿಂದ ಕೋಲಾಟ, ರಾಮನಗರದ ಶ್ರೀ ಮಾರುತಿ ಕಲಾವಿದರ ಸಂಘದವರಿಂದ ಡೊಳ್ಳು ಪಟ ಕುಣಿತ ಜರುಗಲಿದೆ.