ಗದಗ: ಮೊದಲಬಾರಿಗೆ ವಿಕಲಚೇತನ ವಧು ವರರ ಉಚಿತ ಸಮಾವೇಶ

967d3d9b-f939-436d-976e-daa405ba8fe0
Published on

ಮೊದಲಬಾರಿಗೆ ವಿಕಲಚೇತನ ವಧು ವರರ ಉಚಿತ ಸಮಾವೇಶ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹುಣಸಿಮರದ ಹಿರಿಯ ಸೇವಾ ಸಂಸ್ಥೆ ಸಹಯೋಗದೊಂದಿಗೆ ಬರುವ ಮೇ ತಿಂಗಳಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸರ್ವ ಧರ್ಮ ವಿಕಲಚೇತನರ ವಧು ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನೋಂದಣಿಗೆ ಮಾರ್ಚ 3 ಕೊನೆಯ ದಿನವಾಗಿದೆ ಎಂದು ಸೊರಟೂರಿನ ಓಂಕಾರೇಶ್ವರ ಮಠದ ಫಕ್ಕಿರೇಶ್ವರ ಶ್ರೀಗಳು ಹೇಳಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನೋಂದಣಿ, ಪ್ರವೇಶ ಎಲ್ಲವೂ ಉಚಿತ. ಈ ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ನೀಡಿ ಎಲ್ಲ ವಿಕಲಚೇತನರಿಗೂ ಮಾಹಿತಿ ಲಭ್ಯವಾಗಲಿ ಎಂದು ಶ್ರೀಗಳು ಹೇಳಿದರು.

ಸೇವಾ ಸಂಸ್ಥೆಯ ಅಧ್ಯಕ್ಷ ರಾಚಪ್ಪ ಹುಣಸಿಮರದ ಮಾತನಾಡಿ, ವಧು ವರರ ಜತೆ ಇಬ್ಬರೂ ಪೋಷಕರು ಕಡ್ಡಾಯ ಬರಬೇಕು. ಸಮ್ಮೇಳನದ ಸ್ಥಳ ಮತ್ತು ದಿನಾಂಕವನ್ನು ಕರೆ ಮಾಡಿ ಪ್ರತ್ಯೇಕವಾಗಿ ತಿಳಿಸಲಾಗುವುದು. ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವರು ಗದಗಿನ ಸಿದ್ಧಲಿಂಗ ನರದಲ್ಲಿ ಇರುವ ಹುಣಸಿಮರದ ಹಿರಿಯ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಬೇವಿನಮರದ, ಗುರುಲಿಂಗಪ್ಪ ಕಾಡಪ್ಪನ್ನವರ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net