ಗದಗ: ಮಾ.4ಕ್ಕೆ ದಾವಣಗೆರೆಗೆ ಕೇಜ್ರಿವಾಲ್​

d6814bdb-c81b-4d26-a1cd-f15db127d120
Published on

ಗದಗ: ದಾವಣಗೆರೆಯಲ್ಲಿ ಮಾ.4 ರಂದು ನಡೆಯುವ ಸಮಾವೇಶಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಹಾಗೂ ಪಂಜಾಬ್​ ಮುಖ್ಯಮಂತ್ರಿ ಭಗವಂತ ಮಾನ್​ ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ 25 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಚಲನಚಿತ್ರ ನಟ, ಆಮ್​ ಆದ್ಮಿ (ಆಪ್​) ಪದ ಪ್ರಚಾರ ಸಮಿತಿ ಅಧ್ಯ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿರುವ ಕಅಂಗ್ರೆಸ್​ಮ ಬಿಜೆಪಿ ಪಕ್ಷಗಳ ವಿರುದ್ಧ ಹರಿಹಾಯ್ದರು. ಜನ ಬಯಸಿದ ರಾಜಕೀಯ ವ್ಯವಸ್ಥೆ ಆಮ್​ ಆದ್ಮಿ ಪದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಆಪ್​ ಸರ್ಕಾರ ರಚನೆಯಾದರೆ 1 ರಿಂದ 12 ನೇ ತರಗತಿವರೆಗೆ ಉಚಿತ ಶಿಣ, 200 ಯುನಿಟ್​ ಉಚಿತ ವಿದ್ಯುತ್​, ಉಚಿತ ಆರೋಗ್ಯ, ಹೈಟೆಕ್​ ಆಸ್ಪತ್ರೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಲೋಕಾಯುಕ್ತರ ಅಧಿಕಾರವನ್ನು ಕಸಿದುಕೊಂಡರು. ಈ ವೇಳೆ ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಎಸಿಬಿ ರದ್ದು ಮಾಡಿ, ಲೋಕಾಯುಕ್ತ ಬಲಪಡಿಸುವ ಬಗ್ಗೆ ಮಾತನಾಡಿದ್ದ ಯಡಿಯೂರಪ್ಪನವರು ಅಧಿಕಾರದಿಂದ ಬಿದ್ದು ಹೋದರೂ ಮಾಡಲಿಲ್ಲ. ಬೊಮ್ಮಾಯಿ ಅವರು ಕೂಡ ಮಾಡಲಿಲ್ಲ. ಹೈಕೋರ್ಟ್​ ನಿರ್ದೇಶನ ಬಳಿಕ ಬಗ್ಗೆ ಪ್ರಕ್ರಿಯೆ ನಡೆದವು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಆಪ್​ನ ಕಾರ್ಯಾಧ್ಯ ಶಿವರುದ್ರಪ್ಪ ಜೋಗಿನ, ರಾಜ್ಯ ಉಪಾಧ್ಯ ರುದ್ರಯ್ಯ ನವಲಿಹಿರೇಮಠ, ಗದಗ ಜಿಲ್ಲಾಧ್ಯ ಸಂಜೀವ ಕುಲಕಣಿರ್, ಗದಗ ವಿಧಾನಸಭಾ ಮತೇತ್ರದ ಆಕಾಂ ಪೀರಸಾಬ ಶೇಖ, ಜಿಲ್ಲಾ ಕಾರ್ಯದಶಿರ್ ವಾದಿರಾಜ ಕೌಜಲಗಿ, ಆಪ್​ನ ಗದಗ ಜಿಲ್ಲಾ ಉಸ್ತುವಾರಿ ರೋಹನ್​ ಐನಾಪೂರ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net