ಗದಗ: ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತಬೇಕು : ಕವಿತಾ

08GDG08
Published on

ಗದಗ
ಮುಗ್ದವಾದ ಮಕ್ಕಳು ದೇವಲೋಕದ ಪುಷ್ಪಗಳು. ಅವರ ಪಾಲನೆ ಪೋಷಣೆ ಹಾಗೂ ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತಿ ಅವರನ್ನು ಸತಜೆಗಳನ್ನಾಗಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ಬಾಪೂಜಿ ಆಂಗ್ಲ ಹಾಗೂ ಕನ್ನಡ ಮಾದ್ಯಮ ಶಾಲೆಯ ವಾಷಿರ್ಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯಾಂತ್ರಿಕ, ತಾಂತ್ರಿಕ ಕಂಪ್ಯೂಟರೀಕರಣ, ಒತ್ತಡದಲ್ಲಿ ಮಗು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದ್ದು ಮೊಬೈಲ್​, ಟಿವಿ ಗೀಳಿನಿಂದ ಮಕ್ಕಳನ್ನು ದೂರವಿರಿಸಿ ಅಭ್ಯಾಸದತ್ತ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಬೇಕಿದೆ ಎಂದರು.
ಅತಿಥಿ ಜ್ಯೋತಿ ದೇವಗಿರಿ ಮಾತನಾಡಿ, ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದರಷ್ಟೇ ಸಾಲದು ಮೇಲಿಂದ ಮೇಲೆ ಶಾಲೆಗೆ ಭೇಟಿ ನೀಡಿ ವಿದ್ಯಾಥಿರ್ಯ ಶೈಣಿಕ ಪ್ರಗತಿಯನ್ನು ಪರಿಶೀಲಿಸಬೇಕು ಎಂದರು.
ಅತ್ಯುತ್ತಮ ವಿದ್ಯಾಥಿರ್ಗಳಾಗಿ ಆಯ್ಕೆಯಾದ ಸಮರ್ಥ ಜಾಡರ, ಮಹ್ಮದ್​ ಕಳಸಾಪೂರ, ಮಿಥುನ್​ ಚನ್ನದಾಸರ, ಮಹಾಲಕ್ಷಿ$್ಮ ಸೋಮಸಾಳೆ, ಗಗನಸಿಂಧು, ಅಯ್​ ಕುಲಕಣಿರ್, ಮೇಘಾ ಭಜಂತ್ರಿ, ಜ್ಯೋತಿಕಾ ಮಸ್ಕಿ, ಶ್ರಾವಣಿ ಕುಂದಗೋಳ, ಕಾವ್ಯಾ ಕುಂಬಾರ ಇವರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.
ಸಂಸ್ಥೆಯ ಸದಸ್ಯೆ ಅಮೃತಾ ಹಸರಡ್ಡಿ, ಶಕುಂತಲಾ ರಡ್ಡೇರ, ವಸಂತಾ ಕಿವಿಡೇರ, ಮಂಜುಳಾ ತೆರದಾಳ, ಸಂಧ್ಯಾ ಶೇಠ, ಕವಿತಾ ಅಬ್ಬಿಗೇರಿ, ಪ್ರೀತಿ ಕಟ್ಟಿಮನಿ, ಸತೀಶ್​ ದೊಡ್ಡಮನಿ, ಕಟ್ಟಿಮನಿ, ಅಜ್ಮೀರ್​ ಆಲದಕಟ್ಟಿ, ಶ್ರೀನಿವಾಸ ಜಾಡರ್​, ಶಂಕರ ಕಲಾಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net