ಗದಗ: ಬೌದ್ಧಿಕ ಮನೋವಿಕಾಸವೇ ಭಕ್ತಿ: ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು

20GDG11
Published on

ಮನಸ್ಸು ಎಂದರೆ ಮಹಾದೇವ.ನಿರಂತರ ದೇವರನ್ನ ಪ್ರೀತಿಸುವವನು ಭಕ್ತನಾಗಿದ್ದಾನೆ. ದೇವರನ್ನ ಪ್ರೀತಿಸುವುದೇ ಭಕ್ತಿ. ಆ ಭಕ್ತಿಯ ಮೂಲಕ ಬೌದ್ಧಿಕವಾಗಿ ಮನೋವಿಕಾಸ ಹೊಂದಿದರೆ ಅದೇ ಜೀವನ ಮುಕ್ತಿ ಎಂದು  ಪರಮಪೂಜ್ಯ.ಷ.ಬ್ರ.ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. 

          ಅವರು ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಮಹಾಶಿವರಾತ್ರಿ ಹಾಗೂ ಜೀವನ ದರ್ಶನ 26ನೇ ಮಾಸಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮನುಷ್ಯ ದೇವರ ಒಂದು ಭಾಗವಾಗಿದ್ದಾನೆ. ಅವನು ಸದ್ವಿಚಾರ, ಸದ್ಭಕ್ತಿ, ಸತ್ ಕ್ರಿಯೆಗಳ ಮೂಲಕ ಮಾನವ ಮಹಾದೇವನಾಗಬಹುದು. ಮನಸ್ಸಿಗೆ ಏನು ಬಿತ್ತುತ್ತೇವೆಯೋ ಅದನ್ನೇ ಪಡೆಯುತ್ತೇವೆ. ಆ ಕಾರಣಕ್ಕಾಗಿ ಯಾವಾಗಲೂ ಒಳ್ಳೆಯದನ್ನು ಬಿತ್ತಬೇಕು. ಬೆಳೆಸಬೇಕು ಎಂದು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

        ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಪ್ರೊ ಎಂ ಎನ್ ಕಾಮನಹಳ್ಳಿ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಹೇಳಿರುವಂತೆ, ನಮ್ಮ ಮನಸ್ಸಿನಲ್ಲಿ ಅಪಾರವಾದ ಶಕ್ತಿ ಇದೆ.ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿಸಾರ್ಥಕತೆಯನ್ನು ಸಾಧಿಸಬಹುದು.

ಮಾನವನ ಚೈತನ್ಯಕ್ಕೆ, ಬುದ್ಧಿಶಕ್ತಿಗೆ ಮಿತಿಯಿಲ್ಲ; ಇಲ್ಲದ ಆ ಮಿತಿಯನ್ನು ನಕಾರಾತ್ಮಕ ಆಲೋಚನೆಗಳಿಂದ ನಾವೇ ಸ್ವತಃ ನಿರ್ಮಿಸುತ್ತೇವೆ. ಇದನ್ನುತಡೆಯಲು, ಕನಸುಗಳು ಮಹತ್ವಾಕಾಂಶೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕುಮಾರ ಪಂಚಾಕ್ಷರೇಶ್ವರ  ರಾಜ್ಯ  ಸಂಗೀತ ರತ್ನ ಪ್ರಶಸ್ತಿ ಪುರಸ್ಕೃತ ಡಾ ಶಿವಬಸಯ್ಯ ಎಸ್ ಗಡ್ಡದಮಠ ಹಾಗೂ ಛಾಯಾರತ್ನ ಪ್ರಶಸ್ತಿ ಪುರಸ್ಕೃತ ಸಾಹೇಬಗೌಡ ಎಸ್ ಗೌಡರ ಇವರಿಗೆ ಸನ್ಮಾನಿಸಲಾಯಿತು.

ಕುಮಾರಿ ವಿಜಯಲಕ್ಷ್ಮಿ ಹಿರೇಮಠ ಇವರಿಂದ ಸಂಗೀತ ಸೇವೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಪ್ರಾರಂಭಿಸಲಾಯಿತು.  ಸುಮಂಗಲಾ ಪತ್ತಾರ ಪ್ರಾರ್ಥನೆ ಗೀತೆ ಹಾಡಿದರು. ಸ್ವಾಗತ ಹಾಗೂ ಪರಿಚಯ ಭಾಷಣವನ್ನು ಸಮಿತಿಯ ಅಧ್ಯಕ್ಷರಾದ ಪ್ರೊ ಎಂ ಎನ್ ಕಾಮನಹಳ್ಳಿ ಅವರು ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಮಿತಿಯ ಕಾರ್ಯದರ್ಶಿ ಗಳಾದ ಕೆ ಐ ಕುರಗೊಡ ಅವರು ಮಾಡಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಿಳಾ ನಿರ್ದೇಶಕಿಯರಾದ ಮಹಾದೇವಿ ಗೋಗೇರಿ ಹಾಗೂ ರಾಧಿಕಾ ಬಂಧಂ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಬಸವರಾಜ ಸುಂಕದ,ಸಹ ಕಾರ್ಯದರ್ಶಿ ಎಂ. ಕೆ. ಲಕ್ಕುಂಡಿ, ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ್, ಸಹಕೋಶಾಧ್ಯಕ್ಷರಾದ ಆರ್.ಬಿ.ಒಡೆಯರ, ನಿರ್ದೇಶಕರಾದ ವಿ. ಆರ್. ಕುಲಕರ್ಣಿ, ಅಮರೇಶ್ ಹಾದಿ, ಕಾರ್ತಿಕ್ ಮಡಿವಾಳರ್ ಮಹಾದೇವಿ ಗೋಗೇರಿ, ರಾಧಿಕಾ ಬಂದಂ, ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net