

ಗದಗ: ಜಿಲ್ಲೆಯಲ್ಲಿ ಕರೊನಾ ಅಬ್ಬರ ಮುಂದುವರಿದಿದ್ದು, ಬುಧವಾರ 71 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 71 ಸೋಂಕಿತರ ಪೈಕಿ 41ಜನ ಗದಗ ಬೆಟಗೇರಿ ಅವಳಿ ನಗರದವರು.
1 ವರ್ಷದ ಮಗುವಿನಿಂದ 80 ವರ್ಷದ ವೃದ್ಧರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಕರೊನಾ ವಾರಿಯರ್ಸ್ ಎನಿಸಿರುವ ವೈದ್ಯರು, ನರ್ಸ್ಗಳಿಗೂ ಮಹಾಮಾರಿ ಕಾಟ ತಪ್ಪುತ್ತಿಲ್ಲ. ಎಷ್ಟೇ ಸುರಕ್ಷಿತವಾಗಿದ್ದರೂ ಕಣ್ಣಿಗೆ ಕಾಣದ ವೈರಾಣು ದೇಹ ಸೇರಿಕೊಂಡು ಜನರನ್ನು ಭೀತಿಗೊಳಿಸಿ ಅಟ್ಟಹಾಸ ಮೆರೆಯುತ್ತಿದೆ.
ಜಿಲ್ಲೆಯಲ್ಲಿ ಸೋಂಕಿತರ ಏರಿಕೆಯ ಜತೆಗೆ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುವವರ ಸಂಖ್ಯೆಯೂ ಹೆಚ್ಚಿದೆ. ಜಿಲ್ಲೆಯಲ್ಲಿ ಒಟ್ಟು 698 ಸೋಂಕಿತರ ಪೈಕಿ 286 ಜನ ಸೋಂಕಿನಿಂದ ಗುಣವಾಗಿದ್ದಾರೆ.
ಬುಧವಾರ ಪತ್ತೆಯಾದ ಸೋಂಕಿತರ ವಿವರ: ಗದಗ ನಗರದ ಮಕಾನ ಗಲ್ಲಿ ನಿವಾಸಿ 16 ವರ್ಷದ ಮಹಿಳೆ, ಗದಗ ಪೊಲೀಸ್ ಕ್ವಾರ್ಟರ್ಸ್ ನಿವಾಸಿ 30 ವರ್ಷದ ಪುರುಷ, ಎಪಿಎಂಸಿ ಗೇಟ್ ಹತ್ತಿರದ ನಿವಾಸಿ 37 ವರ್ಷದ ಪುರುಷ, ಮುಳಗುಂದ ನಾಕಾ ನಿವಾಸಿ 30 ವರ್ಷದ ಪುರುಷ, ವಕ್ಕಲಗೇರಿ ಓಣಿಯ 34 ವರ್ಷದ ಪುರುಷ, ರಾಜೀವಗಾಂಧಿ ನಗರದ 26 ವರ್ಷದ ಪುರುಷ, ಬೆಟಗೇರಿ ಗಣೇಶ ನಗರದ 40 ವರ್ಷದ ಮಹಿಳೆ, ಕಳಸಾಪೂರ ರಸ್ತೆಯ ಬಾಪೂಜಿ ನಗರದ 52 ವರ್ಷದ ಪುರುಷ, ಸಾಯಿ ನಗರದ 30 ವರ್ಷದ ಪುರುಷ, ಬೆಟಗೇರಿಯ ರಂಗಾವಧೂತ ನಗರದ 75 ವರ್ಷದ ಪುರುಷ, ನಗರದ ಕರಿಯಮ್ಮ ದೇವಸ್ಥಾನದ ಹತ್ತಿರದ ನಿವಾಸಿ 29 ವರ್ಷದ ಮಹಿಳೆ, ಬೆಟಗೇರಿಯ 40 ವರ್ಷದ ಪುರುಷ, ರೈಲ್ವೆ ಕ್ವಾರ್ಟರ್ಸ್ ನಿವಾಸಿ 34 ವರ್ಷದ ಪುರುಷ, ಜಿಮ್್ಸ ಕ್ವಾರ್ಟರ್ಸ್ ನಿವಾಸಿ 73 ವರ್ಷದ ಪುರುಷ, ಗದಗ ವಕ್ಕಲಗೇರಿ ನಗರದ 60 ವರ್ಷದ ಪುರುಷ, ಕಾಗದಗೇರಿ ಓಣಿಯ 19 ವರ್ಷದ ಯುವಕ, ರೆಹಮತ್ ನಗರದ 65 ವರ್ಷದ ಪುರುಷ, ಎಸ್.ಎಂ.ಕೆ.ನಗರದ 13 ಬಾಲಕ, 15 ವರ್ಷದ ಯುವತಿ, ಗದಗ ಮಹೇಂದ್ರಕರ ವೃತ್ತ ನಿವಾಸಿ 56 ವರ್ಷದ ಮಹಿಳೆ, ಗದಗ ಕಾಗದಗೇರಿ ಓಣಿಯ 34 ವರ್ಷದ ಮಹಿಳೆ, 35, 33, 42 ವರ್ಷದ ಪುರುಷರು, ಎಸ್.ಎಂ.ಕೆ.ನಗರದ 36 ವರ್ಷದ ಮಹಿಳೆ, ಹುಡ್ಕೋ ಕಾಲನಿಯ 58 ವರ್ಷದ ಮಹಿಳೆ, ಜಿಮ್್ಸ ನಿವಾಸಿ 35 ವರ್ಷದ ಪುರುಷ, ಗಂಗಿಮಡಿ ನಿವಾಸಿಗಳಾದ 19 ವರ್ಷದ ಯುವತಿ, 15 ವರ್ಷದ ಬಾಲಕ, ಜಮಾತ್ ನಗರದ 15 ವರ್ಷದ ಬಾಲಕ, ಗಂಗಿಮಡಿ ನಿವಾಸಿ 12 ವರ್ಷದ ಬಾಲಕ, ಗದಗ ಗಂಗಾಪೂರ ಪೇಟೆ ನಿವಾಸಿ 46 ವರ್ಷದ ಮಹಿಳೆ, ಜಿಮ್್ಸ ನಿವಾಸಿ 55 ವರ್ಷದ ಪುರುಷ, ಕ್ರೀಡಾಂಗಣದ ಹತ್ತಿರದ ನಿವಾಸಿ 46 ವರ್ಷದ ಪುರುಷ, ಜಮಾತ್ ನಗರ ನಿವಾಸಿ 18 ವರ್ಷದ ಪುರುಷ, ಗಂಗಿಮಡಿ ನಿವಾಸಿ 35 ವರ್ಷದ ಮಹಿಳೆ, ಗಂಗಾಪೂರ ಪೇಟೆ ನಿವಾಸಿ 25 ವರ್ಷದ ಪುರುಷ, ಜವಳ ಗಲ್ಲಿ ನಿವಾಸಿ 46 ವರ್ಷದ ಪುರುಷನಿಗೆ ಸೋಂಕು ದೃಢಟ್ಟಿದೆ.
ಹೊಳೆ ಆಲೂರ ನಿವಾಸಿ 25 ವರ್ಷದ ಪುರುಷ, ಕೊಪ್ಪಳ ಜಿಲ್ಲೆ ಸಿಡಗನಹಳ್ಳಿ ನಿವಾಸಿ 10 ವರ್ಷದ ಬಾಲಕ, ಗಜೇಂದ್ರಗಡ ಜನತಾ ಪ್ಲಾಟ್ ನಿವಾಸಿ 16 ವರ್ಷದ ಬಾಲಕ, ಬೆಳಗಾವಿ ಜಿಲ್ಲೆ ಮುಗಳಖೋಡ ನಿವಾಸಿ 45 ವರ್ಷದ ಪುರುಷ, ಬೆಳದಡಿಯ 48 ವರ್ಷದ ಪುರುಷ, ಹಿರೇಹಂದಿಗೋಳದ 28 ವರ್ಷದ ಪುರುಷ, ಹೊಸಳ್ಳಿಯ 69 ವರ್ಷದ ಪುರುಷ, ಅಸೂಟಿಯ 55 ವರ್ಷದ ಪುರುಷ, ಬೆಳಗಾವಿ ಜಿಲ್ಲೆ ಮುಗಳಖೋಡದ 7 ವರ್ಷದ ಬಾಲಕಿ, 17, 64, 43 ವರ್ಷದ ಮಹಿಳೆ, ಬೆಳ್ಳಟ್ಟಿಯ 21 ವರ್ಷದ ಪುರುಷ, ಮುಳಗುಂದದ 26 ವರ್ಷದ ಪುರುಷ, ಹಿರೆಕೊಪ್ಪದ 63 ವರ್ಷದ ಪುರುಷ, ಹುಲಕೋಟಿಯ 38 ವರ್ಷದ ಪುರುಷ, ಬೆಟಗೇರಿ ರೈಲ್ವೆ ಕ್ವಾರ್ಟರ್ಸ್ ನಿವಾಸಿ 35 ವರ್ಷದ ಪುರುಷ, ನರಗುಂದದ ಹೊರಕೇರಿ ಓಣಿಯ 60 ವರ್ಷದ ಪುರುಷ, ಕುರ್ತಕೋಟಿಯ 32, 34, 48 ವರ್ಷದ ಪುರುಷ, ಹೊಳೆಆಲೂರ ನಿವಾಸಿ 26, 52 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ರೋಣದ 30 ವರ್ಷದ ಮಹಿಳೆ, 48 ವರ್ಷದ ಪುರುಷ, ಗದಗ ಖಾನತೋಟ ನಿವಾಸಿ 65 ವರ್ಷದ ಮಹಿಳೆ, 12,10 ವರ್ಷದ ಬಾಲಕರು, 22 ವರ್ಷದ ಮಹಿಳೆ, ನರಗುಂದದ 60 ವರ್ಷದ ಮಹಿಳೆ, 38 ವರ್ಷದ ಪುರುಷನಿಗೆ, ಕೊಣ್ಣೂರ ನಿವಾಸಿ 50 ವರ್ಷದ ಪುರುಷ, ಅಬ್ಬಿಗೇರಿ ನಿವಾಸಿ 70 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.
ಕರೊನಾ ಅಂಶಗಳು
71: ಇಂದಿನ ಸೋಂಕಿತರು
15084: ನಿಗಾದಲ್ಲಿ ಇರುವವರು:
15741: ಮಂದಿಯ ಗಂಟಲದ್ರವ ಸಂಗ್ರಹ
480: ಏಳು ದಿನ ಕ್ವಾರಂಟೈನ್ನಲ್ಲಿರುವವರು:
397: ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರುವವರು:
698: ಪಾಸಿಟಿವ್ ಪ್ರಕರಣಗಳು
286: ಗುಣವಾಗಿ ಬಿಡುಗಡೆಯಾದವರು:
397: ಸಕ್ರಿಯ ಪ್ರಕರಣಗಳು
485: ಬಾಕಿ ಇರುವ ವರದಿಗಳು:
14558: ನೆಗೆಟಿವ್ ಮಾದರಿಗಳು
15: ಮೃತರು
ದಕ್ಷತೆಯಿಂದ ಕಾರ್ಯ ನಿರ್ವಹಿಸಿ
ಗದಗ: ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಿಯುಕ್ತರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ಸಾರ್ವಜನಿಕ ಸೇವೆಯಲ್ಲಿ ದಕ್ಷತೆ ಮತ್ತು ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂಟಿ ಸಮಾಲೋಚನೆ ಸಮಿತಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಅಧಿಕಾರಿಗಳು ಸಿಬ್ಬಂದಿಯ ಕಾರ್ಯನಿರ್ವಹಣೆ ಉತ್ತಮವಾಗಿರುವಂತೆ ನಿಗಾವಹಿಸುವುದು. ಕಾರ್ಯ ನಿರ್ವಹಣೆಯಲ್ಲಿ ಸಮಸ್ಯೆ, ತೊಡಕುಗಳಿದ್ದಲ್ಲಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು. ಕರ್ತವ್ಯ ನಿರ್ವಹಣೆಯಲ್ಲಿ ವೃತ್ತಿಕೌಶಲ ವೃದ್ಧಿಗೆ ಕ್ರಮ. ಸಾರ್ವಜನಿಕ ಸೌಹಾರ್ದ ಸಂಬಂಧ ಹೆಚ್ಚಿಸುವ ನಿಟ್ಟಿನಲ್ಲಿ ಜನರ ಕುಂದುಕೊರತೆ, ದೂರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಹೇಳಿದರು.
ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕ್ರಮಗಳ ಕುರಿತು ಶಿಫಾರಸು ಮಾಡುವುದು ಸಮಿತಿ ರಚನೆಯ ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶಿತ ಜವಾಬ್ದಾರಿಗಳನ್ನು ನಿತ್ಯದ ಕರ್ತವ್ಯದಲ್ಲಿ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ ಕುಮಾರ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ಇರುವ ಜಂಟಿ ಸಮಾಲೋಚನೆ ಸಮಿತಿಯ ಕಾರ್ಯಕ್ಕೆ ಪೂರಕವಾಗಿ ರಚಿಸಲಾದ ಜಿಲ್ಲಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ ಎಂದರು.
ಜಿ.ಪಂ. ಸಿಇಒ, ಎಸ್ಪಿ, ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಂಘಗಳ ಅಧ್ಯಕ್ಷರು ಸದಸ್ಯರಾಗಿರುತ್ತಾರೆ ಎಂದರು.
ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ತಮ್ಮ ಸಮಸ್ಯೆ, ಕುಂದುಕೊರತೆಗಳ ಕುರಿತು ಸಮಿತಿಯ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಸಮಸ್ಯೆ, ದೂರುಗಳ ಕುರಿತು ರ್ಚಚಿಸಲಾಯಿತು. ಜಿಪಂ ಸಿಇಒ ಡಾ. ಆನಂದ ಕೆ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ್ ಮುಧೋಳ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಎಸ್. ಅಣ್ಣೀಗೇರಿ, ಗೌರವಾಧ್ಯಕ್ಷ ಆರ್.ಎಂ. ನಿಂಬಾನಾಯ್ಕರ, ಉಪಾಧ್ಯಕ್ಷ ಎಸ್.ಆರ್. ಬಂಡಿ, ಪ್ರಧಾನ ಕಾರ್ಯದರ್ಶಿ ಕೆ. ಎಫ್. ಹಳ್ಯಾಳ, ಮುಂಡರಗಿ ತಾಲೂಕು ಅಧ್ಯಕ್ಷ ಬಸವರಾಜ ಬಳ್ಳಾರಿ ಸಭೆಯಲ್ಲಿ ಭಾಗವಹಿಸಿದ್ದರು.
------------