

ಗದಗ- ಗದಗ-ಬೆಟಗೇರಿ ನಗರಸಭೆಯ 2023-24 ನೇ ಸಾಲಿನ ಬಜೆಟ್ ಮಂಡನೆ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಉಷಾ ದಾಸರ ರವರು ಮಂಡಿಸಿದರು. ಈ ಸಾಲಿನ ಬಜೆಟ್ ಉಳಿತಾಯದ ಬಜೆಟ್(ರೂ 3 ಕೋಟಿ 12 ಲಕ್ಷ) ಎಲ್ಲ ವರ್ಗಕ್ಕೆ ಹಾಗು ಗದಗ ನಗರದ ಸೌಂದರ್ಯಕರಣಕ್ಕೆ, ಮಹಿಳೆಯರಿಗೆ, ಪಿಂಕ್ ಟಾಲೇಟ್ ಮತ್ತು ಗದಗ-ಬೆಟಗೇರಿ ನಗರದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಹಣವನ್ನು ಮೀಸಲಿಟ್ಟು ಅನೇಕ ಅಭಿವೃದ್ಧಿ ಕೆಲಸಕ್ಕೆ ಒಳ್ಳೆಯ ಬಜೆಟ್ ಮಂಡನೆಯನ್ನು ಶ್ರೀಮತಿ ಉಷಾ ದಾಸರವರು ಮಂಡಿಸಿದರು. ಆದರೆ ಭಾರತೀಯ ಜನತಾ ಪಾರ್ಟಿಯ ನಗರಸಭೆಯಲ್ಲಿ ಸರ್ಕಾರವಿದ್ದು ವಿರೋಧ ಪಕ್ಷದವರಾದ ಕಾಂಗ್ರೇಸ್‍ನವರು ತಮ್ಮ ದುರುವರ್ತನೆಯನ್ನ ಬಜೆಟ್ ಸಭೆಯಲ್ಲಿ ಬಜೆಟ್ ಓದುವ ಮುನ್ನವೇ ಭಾವಿಗಿಳಿದು ಬಜೆಟ್ ಓದುವವರೆಗೂ ತಮ್ಮ ಸಂಸ್ಕøತಿಯನ್ನು ಎತ್ತಿ ತೋರಿಸಿದ್ದಾರೆ. ಸಭೆಯಲ್ಲಿ ಗೌರವಪೂರ್ವಕವಾಗಿ ನಡೆದುಕೊಳ್ಳಬೇಕಾದ ಕಾಂಗ್ರೇಸ್ ಸದಸ್ಯರು ಅಭಿವೃದ್ಧಿ ವಿಚಾರದಲ್ಲಿ ಇದೇ ರೀತಿ ಪ್ರತೀಯೊಂದು ನಗರಸಭೆಯಲ್ಲಿ ಕರೆದಿರಕ್ಕಂತ ಸಭೆಯಲ್ಲಿ ಭಾವಿಗಿಳಿದು ವಿನಾಕಾರಣ ವಿರೋಧಿಸುವ ರೂಢಿಯನ್ನು ಮಾಡಿಕೊಂಡಿದ್ದಾರೆ ಎಂದು ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ ಆರೋಪಿಸಿದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೇಸ್‍ಗೆ ಗದಗ-ಬೆಟಗೇರಿ ನಗರದಲ್ಲಿ ಅಧಿಕಾರವನ್ನು ಕಳೆದುಕೊಂಡು ಹತಾಶ ಮನೋಭಾವದಿಂದ ನಗರದ ಅಭಿವೃದ್ಧಿಯ ಚಿಂತನೆಯನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.