ಗದಗ: ಬೆಂಕಿ ಅವಘಡ, ಲಕ್ಷಾಂತರ ರೂ. ಹಾನಿ

1111111
Published on

ಗದಗ: ಗದಗಿನ ಬೆಟಗೇರಿ ಭಾಗದ ಕೈಗಾರಿಕಾ ವಲಯದಲ್ಲಿ ಇರುವ ರಾಘವೇಂದ್ರ ಪೂಜಾರ್ ಎಂಬುವರು ಕಟಗಿ ಅಡ್ಡಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಂದಾಜು 25 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಟಗಿ ಜತೆಗೆ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳು ಹಾನಿಯಾಗಿವೆ.

ಸ್ಥಳೀಯಯರ ಮಾಹಿತಿ ಪ್ರಕಾರ, ಮಂಗಳವಾರ ತಡರಾತ್ರಿ ವರೆಗೂ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಬೆಳಗಿನ ಜಾವ ಬೆಂಕಿ ತಗುಲಿದ್ದು ಸ್ಥಳಿಯರಿಗೆ ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net