

ಗದಗ :ವಿದ್ಯಾಥಿರ್ಗಳು ಬಾಲ್ಯದಲ್ಲೇ ಉತ್ತಮ ಓದು ಹಾಗೂ ಸಂಸ್ಕಾರವನ್ನು, ಮೌಲ್ಯಗಳನ್ನು ರೂಢಿಸಿಕೊಂಡು ಭವಿಷ್ಯದಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಈಗಿನಿಂದಲೇ ನಿಧಿರ್ಷ್ಠ ಗುರಿ ಹೊಂದಿರಬೇಕೆಂದು ಕನಕದಾಸ ಶಿಣ ಸಮಿತಿಯ ಅತಾ ದಂಡಿನ ಹೇಳಿದರು.
ನಗರದ ಕನಕದಾಸ ಶಿಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೈಸ್ಕೂಲ್ನಲ್ಲಿ ಇತ್ತೀಚೆಗೆ ಜರುಗಿದ 10ನೇ ತರಗತಿ ವಿದ್ಯಾಥಿರ್ಗಳಿಗೆ ಬೀಳ್ಕೋಡುಗೆ, ವಾಷಿರ್ಕ ಸ್ನೇಹ ಸಮ್ಮೇಳನ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾಧಾನದಿಂದ ಯೋಚಿಸಿ ಭವಿಷ್ಯ ರೂಪಿಸಿಕೊಳ್ಳುವ ಅವಶ್ಯಕತೆ ಇದೆ. ಆತುರದಲ್ಲಿ ನಿರ್ಧಾರ ಕೈಗೊಂಡು ದಾರಿ ತಪ್ಪಬಾರದು. ಹಿರಿಯ, ಜ್ಞಾನಿಗಳ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ವಿದ್ಯಾಥಿರ್ಗಳಿಗೆ ಸಲಹೆ ನೀಡಿದರು.
ಕೆವಿಎಸ್ಆರ್ ಕಾಲೇಜಿನ ಪ್ರೊ. ಸತೀಶ ಪಾಸಿ ಉಪನ್ಯಾಸ ನೀಡಿ, ಶಾಲೆಗಳಲ್ಲಿ ಪಡೆಯುವ ಶಿಣವು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿದರೆ, ಮನೆಯಲ್ಲಿ ದೊರೆಯುವ ಉತ್ತಮ ಸಂಸ್ಕಾರಯುತ ಶಿಣವು ಮಕ್ಕಳ ಜೀವನವನ್ನು ಪರಿರ್ಪೂಣಗೊಳಿಸಿ ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುತ್ತದೆ. ಹೀಗಾಗಿ ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರವೂ ಪ್ರಮುಖವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ, ಓದುವ ಸಾಮರ್ಥ್ಯ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ಮನೋಭಾವನೆಯೊಂದಿಗೆ ವಿದ್ಯಾಥಿರ್ಗಳು ಮುನ್ನಡೆಯಬೇಕು ಎಂದರು.
ಸುಜಾತಾ ಪಾಟೀಲ, ಪಿ.ಟಿ.ಬಿಸನಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಬಿ.ಎಸ್.ಗುಡಿ, ಎ.ಆರ್.ನದಾ, ಪಿ.ಆರ್.ಬಾರಾಟಕ್ಕೆ ಇತರರು ಇದ್ದರು.