ಗದಗ: ಬರಗಾಲ: ಚಿಕ್ಕಸವನೂರು ಗ್ರಾಮಕ್ಕೆ ಕೇಂದ್ರ ಅಧ್ಯಯನ ತಂಡ(ಭಾಗ೨)

IMG-20231006-WA0006
Published on

ತುಂಗಭದ್ರಾ ಎಡದಂಡೆ ಯೋಜನೆಗೆ ಒಳಪಡಿಸಲು ಮನವಿ

ಶಿರಹಟ್ಟಿ ತಾಲೂಕಿನ ಚಿಕ್ಕಸವನೂರು ಗ್ರಾಮಕ್ಕೆ ಭೇಡಿ ನೀಡಿದ ಕೇಂದ್ರ ಅಧ್ಯಯನ ತಂಡಕ್ಕೆ ದನಕರುಗಳಿಗೆ ಮೇವಿನ ಕೊರತೆ ಎದುರಾಗುವ ಸಂಭವ ಕುರಿತು ರೈತರು ಅಳಲು ತೋಡಿಕೊಂಡಿದ್ದಾರೆ.

ಕೀಟ ಹತ್ತಿದ ಮೆಕ್ಕೆಜೋಳ ತೆನೆಗಳನ್ನು ದನಕರುಗಳಿಗೆ ಮೇವು ರೂಪದಲ್ಲಿ ಹಾಕಲು ಬರುವುದಿಲ್ಲ. ದನಕರುಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ. ಇದರಿಂದ ಬೆಳೆ ನಾಶದ ಜತೆ ದನಕರುಗಳನ್ನು ಕಳೆದುಕೊಳ್ಳುವ ಸ್ಥಿತಿ ಬರುತ್ತದೆ ಎಂದು ರೈತರು ತಿಳಿಸಿದರು.

ಇನ್ನೊಂದು ತಿಂಗಳು ಮಳೆಯ ಅವಧಿ ಇದ್ದು, ಕೃಷಿಗೆ ಯೋಗ್ಯವಲ್ಲ. ಹೀಗಾಗಿ ಬಿಜಾಪುರ, ಗೋವಾ ಪುಣೆಗೆ ಗೂಳೆ ಹೋಗಬೇಕಾಗುತ್ತದೆ ಎಂದರು. ಗೂಳೆ ಹೋಗುವ ಬದಲಾಗಿ ನರೇಗಾ ಯೋಜನೆಯಲ್ಲಿ ಕೂಲಿ ಮಾಡಬಹುದಲ್ಲವೇ ಎಂದು ಕೇಂದ್ರ ತಂಡದ ಸದಸ್ಯರು ರೈತರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೈತರು ' ಹೊಟ್ಟೆಗಾಗಿ ನರೇಗಾ ಕೂಲಿ ಮಾಡಬಹುದು ಆದರೆ ಇತರೆ ಖರ್ಚು ಮಕ್ಕಳ ಶಿಕ್ಷಣಕ್ಕೆ ನರೇಗಾ ಕೂಲಿ ಸಾಲದು' ಎಂದು ತುಳಿಸಿದ್ದಾರೆ.

ಬಿತ್ತನೆ ನಡೆಸಿದ ಮೆಕ್ಕೆಜೋಳದ ತಳಿ ಕುರಿತು ಚರ್ಚಿಸಲಾಯಿತು. 'ಗಂಗಾ ಕಾವೇರಿ ಜಿಕೆ3045 ಮೆಕ್ಕೆ ಜೋಳ ಬಿತ್ತನೆ ಮಾಡಿದ್ದಾಗಿ ಮಾಹಿತಿ ನೀಡಿದರು. ಬೆಳೆ ವಿಮೆ ಕುರಿತು ಮಾಹಿತಿ ಪಡೆಯಲಾಯಿತು.

ಕಾಲುವೆ ಇಲ್ಲ:
ತುಂಗಭದ್ರಾ ಎಡದಂಡೆ ವ್ಯಾಪ್ತಿಗೆ ಶಿರಹಟ್ಟಿ ತಾಲೂಕು ಬರುತ್ತದೆ. ಆದರೆ, ಮುಂಡರಗಿ ತಾಲೂಕಿಗೆ ಮಾತ್ರ ಎಡದಂಡೆ ಯೋಜನೆ ಜಾರಿಯಾಗಿದೆ. ಶಿರಹಟ್ಟಿ ತಾಲೂಕನ್ನು ಯೋಜನೆಗೆ ಒಳಪಡಿಸಿ ಎಂದು ರೈತರು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net