

ಗದಗ: ನಗರದ ವಾರ್ಡ್ ನಂ 7 ರಲ್ಲಿ ರಸ್ತೆಗೆ ಪ್ಲೇವರ್ಸ್ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಬೂಮಿ ಪೂಜೆ ನೆರವೇರಿಸಿದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಮಾತನಾಡಿ, ವಾಡಿರ್ನ ವ್ಯಾಪ್ತಿ ಅಧಿಕಗೊಳ್ಳುತ್ತಿದೆ. ಹಂತ ಹಂತವಾಗಿ ಎಲ್ಲ ಭಾಗಗಳಿಗೆ ಅವಶ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ಮಾಡಲಾಗಿದೆ. ಅದಕ್ಕಾಗಿ ವಾರ್ಡ್ ಎಲ್ಲ ಹಿತೈಷಿಗಳ ಸಹಕಾರ ಹಾಗೂ ಪ್ರೇರಣೆ ಅವಶ್ಯವಿದೆ ಎಂದು ರಾಘವೇಂದ್ರ ಯಳವತ್ತಿ ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಅನಿಲ ಅಬ್ಬಿಗೇರಿ, ಚಿನ್ನಪ್ಪ ನೆಗಳೂರು, ಹುಚ್ಚಪ್ಪ ಭಜಂತ್ರಿ, ಸೋಮಣ್ಣ ಕೊಂಗತಿ, ಮಂಜುನಾಥ ಶಿರಹಟ್ಟಿ, ಮುತ್ತಿನಪಂಡಿಮಠ, ಸಿದ್ದಪ್ಪ ಶಾಕಾನವರ, ಶಂಕ್ರಪ್ಪ ತೊಂಡಿಹಾಳ ಇತರರು ಇದ್ದರು.