ಗದಗ: ಪ್ರಜಾಪ್ರಭುತ್ವ ಬಲಿಷ್ಟಗೊಳಿಸಲು ಮತದಾನದ ಪಾತ್ರ ಮಹತ್ವದ್ದಾಗಿದೆ

22222222222222222222
Published on

ಗದಗ: ಪ್ರಜಾಪ್ರಭುತ್ವ ಬಲಿಷ್ಟಗೊಳಿಸಲು ಎಲ್ಲರೂ ಮತದಾನ ಮಾಡುವುದು ಅವಶ್ಯವಾಗಿದೆ ಎಂದು ಚುನಾವಣಾ ಸೆಕ್ಟರ್ ಅಧಿಕಾರಿ ಶಿವಕುಮಾರ್ ಕುರಿಯವರ ತಿಳಿಸಿದರು
ಗದಗ ಬೆಟಗೇರಿ ನಗರದ ರೇಲ್ವೆ ನಿಲ್ದಾಣದಲ್ಲಿ ಬುಧವಾರದಂದು ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಾ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿ ಅವರು ಮಾತನಾಡಿದರು. ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಮತದಾನ ಮಾಡುವುದು ಪವಿತ್ರ ಕೆಲಸವಾಗಿದೆ. ಅರ್ಹ ಮತದಾರರು ಮತದಾನದಿಂದ ವಂಚಿತರಾಗದೇ ಮತ ಚಲಾಯಿಸಬೇಕೆಂದು ಹೇಳಿದರು. ಇ.ವಿ.ಎಂ. ಹಾಗೂ ವಿ.ವಿ.ಪ್ಯಾಟ್ ಯಂತ್ರಗಳ ಕಾರ್ಯ, ಮತ ಚಲಾಯಿಸುವ ಪ್ರತಿ ಹಂತದಲ್ಲೂ ಸಾರ್ವಜನಿಕರು ಗಮನಿಸಬೇಕಾದ ಅಂಶ ಹಾಗೂ ಮತಚಲಾಯಿಸಿದ್ದರ ಬಗ್ಗೆ ಖಚಿತಪಡಿಸಿಕೊಳ್ಳುವ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ವಿವರಿಸಿದರು. ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರೂ ಸಹ ಆಸಕ್ತಿಯಿಂದ ವಿದ್ಯುನ್ಮಾನ ಮತ ಯಂತ್ರ ಮೂಲಕ ಮತ ಚಲಾಯಿಸುವ ಹಾಗೂ ಚಲಾಯಿಸಿದ ಮತ ನಿರ್ದಿಷ್ಟ ವ್ಯಕ್ತಿ , ಪಕ್ಷ , ಚಿಹ್ನೆಗೆ ದಾಖಲಾಗಿರುವ ಬಗ್ಗೆ ವಿ.ವಿ.ಪ್ಯಾಟ್ ಯಂತ್ರದ ಮೂಲಕ ಖಚಿತಪಡಿಸಿಕೊಳ್ಳುವುದು ಕಂಡು ಬಂದಿತು. ಈ ಸಂದರ್ಭದಲ್ಲಿ ಬಿ.ಎಲ್.ಓ ಮೇಲ್ವಿಚಾರಕರಾದ ಚಿದಾನಂದ ಹಿರೇಮಠ , ಆರಾಧ್ಯಮಠ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net