

ಶಿವಾನಂದ ಹಿರೇಮಠ ಗದಗ
ಚುನಾವಣಾ ಸಂದರ್ಭದಲ್ಲಿ ಪಕ್ಷನಿಷ್ಠೆ ಮರೆತರೆ ಎಚ್ಚರಿಕೆ' ಎನ್ನುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಜಿಲ್ಲಾ ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬೂತ್ ವಿಜಯ ಅಭಿಯಾನಕ್ಕೆ ಗದಗ ಕ್ಷೇತ್ರದಿಂದ ಚಾಲನೆ ನೀಡುವ ಮೂಲಕ ಪ್ರಸಕ್ತ ವರ್ಷದ ಆರಂಭದಲ್ಲೇ ಗದಗದಿಂದ ಚುನಾವಣಾ ಕಹಳೆ ಊದಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವೇದಿಕೆ ಕಾರ್ಯಕ್ರಮದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಒಗ್ಗಟ್ಟು ಬಗ್ಗೆ ಪ್ರಸ್ತಾಪಿಸಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆ ಆಗುತ್ತಿದ್ದಂತೆ, ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಗುಂಪುಗಾರಿಕೆ ರಾಜಕಾರಣ ಮಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸಲು ಯಶಸ್ವಿಯಾಗಿದ್ದು ಈಗ ಇತಿಹಾಸ. ಕೂದಲೆಳೆಯಲ್ಲಿ(1800 ಮತ) ಬಿಜೆಪಿ ಪರಭಾವಗೊಂಡಿತ್ತು. ಜಿಲ್ಲೆಯ ನಾಲ್ಕು ಕ್ಷೇತ್ರದ ಪೈಕಿ 3ರಲ್ಲಿ ಬಿಜಪಿ ಗೆಲವು ಸಾ„ಸಿ ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿತ್ತು. ಚುನಾವಣೆ ನಂತರ ನಡೆದ ರಾಜ್ಯ ಮುಖಂಡರ ಸಭೆಯಲ್ಲಿ ಸೋಲಿನ ಆತ್ಮವಿಮರ್ಶೆ ಮಾಡಿಕೊಳ್ಳಲಾಗಿ, ಕೆಲ ಬಿಜೆಪಿ ಸದಸ್ಯರಿಂದಲೇ ಸೋಲಾಗಿದ್ದು ಕೇಂದ್ರದ ಹೈಕಮಾಂಡ್‍ವರೆಗೂ ವರದಿ ಮುಟ್ಟಿದೆ. ಆರ್‍ಎಸ್‍ಎಸ್ ವಲಯದಲ್ಲೂ ಕೂಡ ಈ ಬಗ್ಗೆ ಚರ್ಚೆಗಳಾಗಿ ಬಿಜೆಪಿಗೆ ಮುಜುಗುರ ತಂದಿತ್ತು. ಈ ಎಲ್ಲ ವಿಷಯಗಳ ಮೇಲೆ ಕೇಂದ್ರಿಕರಿಸಿದ ಸಚಿವ ಪ್ರಹ್ಲಾದ್ ಜೋಶಿ, ಸೋಮವಾರದ ಕಾರ್ಯಕ್ರಮದಲ್ಲಿ ಮಾರ್ಮಿಕವಾಗಿಯೇ ಸ್ವಪಕ್ಷೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷನಿಷ್ಠೆ ಮರೆತು ಹಿಂಬಾಗಿಲಿನ ರಾಜಕಾರಣ ಮಾಡಿದ್ದು ಗೊತ್ತಿದೆ. ಗುಂಪುಗಾರಿಕೆ ರಾಜಕಾರಣದಿಂದಲೇ ಗದಗ ಕ್ಷೇತ್ರದಲ್ಲಿ ಬಿಜೆಪಿಗೆ ಯಶಸ್ಸು ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕೆಲ ಬಿಜೆಪಿ ಮುಖಂಡರು ಬೆಂಬಲ ನೀಡಿರುವ ವಿಚಾರ ಗೊತ್ತಿದೆ. ನಮ್ಮ ಮನೆಯಲ್ಲಿ ಮಕ್ಕಳು ಜನಿಸಿದರೆ ಸಂಭ್ರಮಿಸಬೇಕು. ಪಕ್ಕದ ಮನೆಯಲ್ಲಿ ಮಕ್ಕಳು ಹುಟ್ಟಲು ಕಾರಣರಾಗಬಾರದು. ಈ ಬಾರಿ ಯÁರಿಗೇ ಟಿಕೆಟ್ ಸಿಕ್ಕರೂ ಒಟ್ಟಾಗಿ ಚುನಾವಣÉ ಎದುರಿಸಬೇಕು. ಹಿಂಬಾಗಿಲಿನ ರಾಜಕಾರಣಿಗಳಿಗೆ ಬಿಜೆಪಿ ಪಕ್ಷ ತಕ್ಕ ಪಾಠ ಕಲಿಸಲು ಹಿಂಜರಿಯುವುದಿಲ್ಲ. ನಮ್ಮ ಹೈಕಮಾಂಡ್ ಸ್ಪಷ್ಟ ಸೂಚನೆ ಮತ್ತು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನೇರವಾಗಿ ತಿಳಿಸಿದ್ದಾರೆ.ಬಾಕ್ಸ್:ಕಳೆದ ಚುನಾವಣೆಯಲ್ಲಿ ತೀರಾ ಪಕ್ಷ ನಿಷ್ಠರಾಗಿದ್ದ ಕೆಲವರು ನಗರದ ಕೆಲ ವಾರ್ಡ್‍ಗಳಲ್ಲಿ ಮತ್ತು ಸೊರಟೂರು, ನಾಗಾವಿ, ನಾಗಾವಿ ತಾಂಡಾ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು.