ಗದಗ: ಪಂಚಾಯಿತಿ ವರ್ಸಸ್​ ಎಂಎಸ್​ಐಎಲ್​

Published on

- ಸಾರಾಯಿ ಮುಕ್ತ ಗ್ರಾಮ ಎಂದು ಘೋಷಣೆ ಮಾಡಿದ್ದರು ಕೂಡ ಎಂಎಸ್​ಐಎಲ್​ ಕಾರ್ಯನಿರ್ವಹಿಸುತ್ತಿರುವುದು ಅಕ್ಷಮ್ಯ ಅಪರಾಧ.

- ಎಂಎಸ್​ಐಎಲ್​ಗೆ ಅನುಮತಿ ನೀಡುವ ಮುಂಚೆ ಅಬಕಾರಿ ಇಲಾಖೆಯು ಸ್ಥಳಿಯ ಗ್ರಾಪಂ ಗೆ ನೋಟಿಸ್​ ಮೂಲಕ ತಿಳಿಸಲು ವಿಲವಾಗಿದೆ.

- ಗ್ರಾಮದಲ್ಲಿ ಎಂಎಸ್​ಐಎಲ್​ ಆರಂಭಕ್ಕೆ ಅನುಮತಿ ನೀಡಲು ಗ್ರಾಪಂ ಠರಾವು ಅಗತ್ಯವಿದೆ.

- ಸ್ಥಳಿಯ ಗ್ರಾಪಂ ಅನುಮತಿ ಪಡೆಯದೇ ಎಂಎಸ್​ಐಎಲ್​ ಆರಂಭಿಸಿದ್ದು ಅಪರಾದ.

ಪಂಚಾಯಿತಿ ವಾದ:

=====

- ಗ್ರಾಮದಲ್ಲಿರುವ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕ್ರಮ ಜರುಗಿಸಬೇಕು.

- ಸರ್ಕಾರದ ನಿಯಮಾವಳಿಗಳ ಅನುಸಾರವೇ ಎಂಎಸ್​ಐಎಲ್​ ಆರಂಭಿಸಿದ್ದೇವೆ.

- ಅಕ್ರಮ ಮದ್ಯ ಮಾರಾಟಕ್ಕೆ ಗದಗ ನಗರದ ಕೆಲ ಬಾರ್​ ಮಾಲೀಕರ ಬೆಂಬಲವಿದೆ. ಅವರ ಲಾಬಿ ಇರುವ ಕಾರಣ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ಹುನ್ನಾರ ನಡೆದಿದೆ.

- ಅಕ್ರಮ ಮದ್ಯ ಮಾರಾಟಗಾರರಿಗೆ ಎಂಎಸ್​ಐಎಲ್​ ನಿಂದ ನಷ್ಟ ಆಗುತ್ತಿದ್ದು, ಉದ್ದೇಶಪೂರ್ವಕ ತಡೆ ನೀಡುತ್ತಿದ್ದಾರೆ.

- ಶಾಲಾ ಕಾಲೇಜು ಸಮೀಪದಲ್ಲೇ ಹಲವರು ಮದ್ಯ ಮಾರಾಟ ಮಾಡುತ್ತಾರೆ.

- ಗ್ರಾಮದಲ್ಲಿ ಕದ್ದು ಮುಚ್ಚಿ ಹಲವು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.

ಎಂಎಸ್​ಐಎಲ್​ ವಾದ:

=====

ಸೊರಟೂರು ಗ್ರಾಮದಲ್ಲಿ ಇತ್ತಿಚೆಗೆ ಸ್ಥಳಿಯ ನಿವಾಸಿ ಶಿವಾನಂದ ಮಾದನ್ನವರ ಎಂಬುವರ ಖಾಸಗಿ ಕಟ್ಟಡದಲ್ಲಿ ಎಂಎಸ್​ಐಎಲ್​ ಆರಂಭವಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಪಂಚಾಯತಿಯ ಸದಸ್ಯರು ಎಂಎಸ್​ಐಎಲ್​ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಆದರೆ, ಮದ್ಯದಂಗಡಿ ಮಾಲೀಕರು ಪಂಚಾಯಿತಿ ಸದಸ್ಯರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಎಂಎಸ್​ಐಎಲ್​ ಗೆ ಮುತ್ತಿಗೆ ಹಾಕಿ ಪ್ರತಿಭಟನಾ ಟನೆಗಳು ಜರುಗಿದವು. ತದನಂತರ ಈ ಬಗ್ಗೆ ವಿಶೇಷ ಗ್ರಾಮ ಸಭೆ ಜರುಗಿಸಿ ಗ್ರಾಮದ ಮಹಿಳೆಯರು, ಸ್ತ್ರೀ ಶಕ್ತಿ ಸಂಗಳು ಹಾಗೂ ಸಾರ್ವಜನಿಕರು ಎಂಎಸ್​ಐಎಲ್​ ಅನ್ನು ನಿಷೇಧಿಸುವಂತೆ ಠರಾವು ಪಾಸು ಮಾಡಿಸಿದ್ದರು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೂ ಎಂಎಸ್​ಐಎಲ್​ ಮುಂದುವರಿಸಲಾಗಿದೆ.

ಮದ್ಯ ಮಾರಾಟ ವಿಷಯವಾಗಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಸ್ಥಳಿಯ ಪಂಚಾಯಿತಿ ಮತ್ತು ಎಂಎಸ್​ಐಎಲ್​ ಜಿದ್ದಿಗೆ ಬಿದ್ದು ಹೋರಾಟಕ್ಕೆ ಇಳಿದಿವೆ. ಎಂಎಸ್​ಐಎಲ್​ ಸ್ಥಗಿತಗೊಳಿಸುವಂತೆ ಪಂಚಾಯಿತಿ ಸದಸ್ಯರು ತಾಕೀತು ಮಾಡಿದರೆ, ನಿಮ್ಮಪ್ಪಣೆ ನಮಗೇನು ಅಗತ್ಯವಿಲ್ಲ ಎಂದು ಎಂಎಸ್​ಐಎಲ್​ ಸ್ಪಷ್ಟಪಡಿಸಿದೆ. ಹೀಗಾಗಿ ಸೊರಟೂರು ಗ್ರಾಪಂ ಮತ್ತು ಪಂಚಾಯಿತಿ ನಡುವೆ ಶೀತಲ ಸಮರ ಶುರುವಾಗಿದ್ದು, ಗಂಡ ಹೆಂಡಿರ ನಡುವೆ ಕೂಸು ಬಡವಾದಂತೆ ಗ್ರಾಮದ ಯುವಕರು ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಕುಟುಂಬಗಳು ಬೀದಿಗೆ ಬಂದಿವೆ.

ಶಿವಾನಂದ ಹಿರೇಮಠ ಗದಗ

=== ಬಾಕ್ಸ್​: ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸಂಬಂಧಿಸಿದ ಮಹಿಳಾ ಗಾರ್ಮೆಂಟ್​ ಒಂದು ಸ್ಥಳಿಯ ಶಿವಾನಂದ ಮಾದನ್ನವರ್​ ಎಂಬುವರ ಖಾಸಗಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಅದೇ ಕಟ್ಟದಲ್ಲಿ ಎಂಎಸ್​ಐಎಲ್​ ಆರಂಭವಾಗಿದೆ. ಈ ಹಿನ್ನೆಲೆ ಗ್ರಾಮದ ಮಹಿಳೆಯರ ಆಕ್ರೋಶಕ್ಕೂ ಕಾರಣವಾಗಿ ಗ್ರಾಮದ ಹಿರಿಯರಿಗೆ ದೂರು ಸಲ್ಲಿಸಲಾಗಿತ್ತು. ಹಿರಿಯರ ಮದ್ಯಸ್ಥಿಕೆಯಲ್ಲಿ ಸಭೆ ನಡೆದು ಅಧಿಕೃತ ಮತ್ತು ಅನಧಿಕೃತ ಮದ್ಯ ಮಾರಾಟಕ್ಕೆ ತಡೆ ನೀಡುವಂತೆ ಗ್ರಾಪಂ ಗೆ ಸೂಚಿಸಿದ್ದರು. ಈ ಹಿನ್ನೆಲೆ ಸಾರಾಯಿ ಮುಕ್ತ ಗ್ರಾಮ ಎಂದು ಗ್ರಾಪಂ ಇತ್ತೀಚೆಗೆ ಘೋಷಿಸಿದೆ. ಆದರೆ, ಗ್ರಾಪಂ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ವಿಪರ್ಯಾಸ. ===

ಕೋಟ್​: ಗ್ರಾಮದ ಕ್ಷೇಮಾಭಿವೃದ್ಧಿ, ಹಿತಚಿಂತನೆ ಮುಖ್ಯ. ಗ್ರಾಪಂ ವಿರುದ್ಧ ಎಂಎಸ್​ಐಎಲ್​ ನಡೆದುಕೊಂಡರೆ ಉಗ್ರ ಹೋರಾಟ ಮುಂದುವರಿಸಬೇಕಾಗುತ್ತದೆ. -ಎಂ. ಏಕಲಾಸಪುರ ಸೊರಟೂರು ಗ್ರಾ.ಪಂ ಅಧ್ಯಕ್ಷ. == ಕೋಟ್​: ಗ್ರಾಮದಲ್ಲಿ ಕದ್ದುಮುಚ್ಚಿ ಮಾರುತ್ತಿದ್ದ ಮದ್ಯ ಮಾರಾಟಗಾರರಿಗೆ ಎಂಎಸ್​ಐಎಲ್​ ಕಾರ್ಯಾರಂಭದಿಂದ ಬಹುದೊಡ್ಡ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಅದಕ್ಕಾಗಿ ಎಂಎಸ್​ಐಎಲ್​ ಸ್ಥಗಿತಗೊಳಿಸುವಂತೆ ಕೆಲವರು ಹುನ್ನಾರ ನಡೆಸಿದ್ದಾರೆ. ನಮ್ಮದು ಸಕ್ರಮ ವ್ಯವಹಾರ. - ಶಿವಾನಂದ ಮಾದನ್ನವರ, ಎಂಎಸ್​ಐಎಲ್​ ಗೆ ಕಟ್ಟಡ ಬಾಡಿಗೆ ನೀಡಿದ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net