ಗದಗ: ನಿವೇಶನ ಇಸ್ವತ್ತು ಪ್ರಕರಣ ರಾಜೀ ಸಂಧಾನ?

21GDG03
Published on

ಗದಗ: ಶಿಗ್ಲಿ ಗ್ರಾಪಂ ನಲ್ಲಿ ನಡೆಯುತ್ತಿದೆ ಎನ್ನಲಾದ ನಿವೇಶನ ಇಸ್ವತ್ತು ಅಕ್ರಮವನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಗುವ ಪ್ರಯತ್ನ ಸದ್ದಿಲ್ಲದೇ ಜರುಗಿದೆ ಎಂಬ ಮಾತು ಕೇಳಿ ಬರುತ್ತಿವೆ.
ಮೀಸಲಿಟ್ಟ 630 ನಿವೇಶನಗಳಲ್ಲಿ ಭಾಗಶಃ ನಿವೇಶನಗಳು ಪ್ರಭಾವಿಗಳ ಪಾಲಾಗಿವೆ ಎಂಬ ಗಂಭೀರ ಆರೋಪದ ಬೆನ್ನಲ್ಲೇ ಪ್ರಕರಣ ತನಿಖೆಗಾಗಿ ಗ್ರಾಮಕ್ಕೆ ತೆರಳಿದ್ದ ಜಿಲ್ಲಾ ಯೋಜನಾ ನಿರ್ದೇಶಕ ಚಳಗೇರಿ ಅವರು ಪ್ರಕರಣ ತನಿಖೆ ನಡೆಸದೇ ಹಿಂತಿರುಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಅನುಮಾನಕ್ಕೆ ಎಡೆಮಾಡಿಕೊಡುತ್ತಿದ್ದು, ಗ್ರಾಪಂ ಪ್ರಭಾವಿಗಳು ಮತ್ತು ಅಧಿಕಾರಿಗಳ ನಡುವೆ ಏನೋ ನಡೆದಿದೇ ಎಂಬ ಗುಸು ಗುಸು ಮಾತು ಗ್ರಾಮದಲ್ಲಿ ಕೇಳಿ ಬರುತ್ತಿವೆ. ಈ ನಡುವೆ ಬಡವರಿಗೆ ಮೀಸಲಿಟ್ಟ ನಿವೇಶನ ಹಂಚಿಕೆ ಪ್ರಕರಣ ತನಿಖೆ ನಡೆಸುವಂತೆ ಲೋಕಾಯುಕ್ತದಲ್ಲಿ ಹಲವರ ವಿರುದ್ಧ ದೂರು ದಾಖಲಾದರೂ ಕೂಡ ಇತ್ತಿಚೆಗಷ್ಟೇ ನಿವೇಶನಗಳ ಇಸ್ವತ್ತು ಮಾಡಿಕೊಡುವ ಪ್ರಕ್ರಿಯೆ ಮುಂದುವರಿದಿದ್ದು, ಮೇಲ್ನೋಟಕ್ಕೆ ಅಕ್ರಮ ಸಾಭಿತು ಆದಂತೆ ಭಾಸವಾಗುತ್ತಿದೆ.

ಲೋಕಾಯುಕ್ತಕ್ಕೆ ದೂರು?
ತನಿಖೆಗೆ ಆಗ್ರಹಿಸಿರುವ ದೂರುದಾರ ಸುರೇಶ ಸ್ವಾಧಿ, ಸಂತೋಷ ಮಾದನಹಳ್ಳಿ ಮತ್ತು ಯೋಜನಾ ನಿರ್ದೇಶಕರ ನಡುವೆ ಒಂದು ಸುತ್ತಿನ ಒಳಜಗಳವೂ ನಡೆದಿದೆ. ಪ್ರಕರಣ ತನಿಖೆ ನಡೆಸಿರುವ ಯೋಜನಾ ನಿರ್ದೇಶಕರು ಹಲವು ದಿನಗಳ ನಂತರವೂ ಜಿಲ್ಲಾಡಳಿತಕ್ಕೆ ವರದಿ ಒಪ್ಪಿಸಿಲ್ಲ ಎಂದು ಪ್ರಶ್ನಿಸಿರುವ ಸುರೇಶ, ತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಸಿಇಒ, ಉಪ ಕಾರ್ಯದಶಿರ್, ಯೋಜನಾ ನಿರ್ದೇಶಕರು, ತಾಪಂ ಇಒ, ಹಾಗೂ ಪಿಡಿಒ ಮತ್ತು ಕೆಲ ಸ್ಥಳಿಯರ ಮೇಲೆ ಬೆಂಗಲೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಸಾಮಾನ್ಯ ಸಭೆಯಲ್ಲಿ ಠಾರಾವು:
ಇತ್ತಿಚೆಗೆ ನಡೆದ ಸಭೆಯಲ್ಲಿ ಈ ಹಿಂದೆ ನಿವೇಶನ ಹಂಚಿಕೆ ಮಾಡಿದ ಎಲ್ಲವೂ ಸಕ್ರಮ ಎಂದು ಠರಾವು ಪಾಸು ಮಾಡಲಾಗಿದೆ. ಆದರೆ, ನಿವೇಶನ ಸಕ್ರಮಕ್ಕೆ ಅನುಸರಿಸ ಬೇಕಾದ ಮಾನದಂಡಗಳೇ ಅನುಸರಿಸಿಲ್ಲ ಎಂಬುದು ಪ್ರಮುಖ ಪ್ರಶ್ನೆ. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿವೇಶನ ಸಮ್ರಕಗೊಳಿಸುವ ಬಗ್ಗೆ ಪ್ರಸ್ತಾಪ ನಡೆಸಿ, ಚಚಿರ್ಸಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಠರಾವಿಗೆ ಅಂಕಿತ ನೀಡಬೇಕು. ಹಿಗಿದ್ದರೂ ಏಕಾಏಕಿ ಸಭೆಗೆಯಲ್ಲಿ ಅಕ್ರಮಗಳನ್ನು ಸಕ್ರಮ ಎನ್ನುವುದು ಲೋಪವಲ್ಲದೇ ಮತ್ತೇನು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಪಂಚಾಯಿತಿ ಸ್ಪಷ್ಟಣೆ:
ಪಂಚಾಯತ್​ ರಾಜ್ಯ ಕಾಯಿದೆ ಸೆಕ್ಷನ್​ 209 ಹಾಗೂ 58/2/4 ಅಡಿಯಲ್ಲಿ ಪಂಚಾಯಿತಿ ಆಸ್ತಿಯನ್ನು ಅರ್ಹ ಲಾನುಭವಿಗಳಿಗೆ ವಿತರಿಸುವ ಅಧಿಕಾರ ಪಂಚಾಯಿತಿಗೆ ಇರುವ ಹಿನ್ನೆಲೆ ಅರ್ಹರಿಗೆ ಹಂಚಿಕೆ ಮಾಡಲಾಗಿದೆ. 2015ಕ್ಕೂ ಮೊದಲು ಇಸ್ವತ್ತು ಇರಲಿಲ್ಲ. ಕೈಬರವಣಿಗೆ ಮೂಲಕವೇ ನಿವೇಶನ ಪತ್ರ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಈಗ ಅದನ್ನೇ ಅಕ್ರಮವೆಂದು ಪ್ರತಿಪಾಧಿಸುವುದು ಸರಿಯಲ್ಲಿ. ಹಿಗಿದ್ದರೂ ಜಿಲ್ಲಾಡಳಿತದ ತನಿಖೆಗೆ ಪೂರಕವಾಗಿ ಎಲ್ಲ ದಾಖಲೆ ಒದಗಿಸಲಾಗಿದೆ.

ಅಕ್ರಮಕ್ಕೆ ಸಾಗಳೇನು?

  • ನಿವೇಶನ ಹಂಚುವ ಮೊದಲು ರಾಜೀವಗಾಂಧಿ ವಸತಿ ನಿಗಮದಿಂದ ಅನುಮತಿ ಪಡೆಯದೇ ಇರುವುದು.
  • ಕಂದಾಯ ಇಲಾಖೆ ಗಮನಕ್ಕ ತರದೇ ನಿವೇಶನ ಹಂಚಿಕೆ.
  • ಚೆಕ್​ ಬಂದಿ ಸಹಿ ಇಲ್ಲದೇ ಇಸ್ವತ್ತು ಅಕ್ರಮ ದಾಖಲೆ ಸೃಷ್ಟಿ.
  • ಇಸ್ವತ್ತು ಅಧಿಕಾರ ರ್ದುಬಳಕೆ.
  • ನಿವೇಶನ ಪಟ್ಟಾ ನೀಡದೇ ನೂರಾರು ನಿವೇಶನ ಹಂಚಿಕೆ ಅಕ್ರಮ.

ಕೋಟ್​:ನಿವೇಶನ ಹಂಚಿಕೆ ತನಿಖೆಯಾಗಲಿ. ಅರ್ಹರಿದ್ದರೆ ಪಟ್ಟಾ ನೀಡಲಿ. ಈಗಾಗಲೇ ಮನೆಗಳನ್ನು ಹೊಂದೊಇದವರೂ ನಿವೇಶ ಪಡೆದು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗ್ರಹಿಸುತ್ತಿದ್ದೇವೆ. -ಸುರೇಶ್​ ಸ್ವಾಧಿ, ದೂರುದಾರ ಮತ್ತು ಗ್ರಾಪಂ ಸದಸ್ಯ

ಕೋಟ್​:ಮೇಲಾಧಿಕಾರಿ ಪರವಾಣಿಗೆ ಮೂಲಕವೇ ನಿವೇಶನ ಹಂಚಿಕೆ ಮಾಡಲಾಗಿದೆ. ಹಲವರಿಗೆ ಪಟ್ಟಾ ನೀಡಿಲ್ಲ. ಇದು ಈ ಹಿಂದೆ ಆಗಿದ್ದಂತಹ ಪ್ರಕರಣ. ಕೆಲವೊಮ್ಮೆ ಕಾನೂನುಗಿಂತ ಮಾನವಿಯತೇ ದೃಷ್ಟಿಯಿಂದ ನಿವೇಶನ ನೀಡಲಾಗಿದೆ. ಈಗಾಗಲೇ ಮನೆ ಕಟ್ಟಿಕೊಮಡವರು ಅರ್ಹ ಲಾನುಭವಿಗಳೇ ಆಗಿದ್ದರಿಂದ ಅವರಿಗೇ ಪಟ್ಟಾ ನೀಡಬೇಕೆಮದು ಮನವಿ.-ಅಶೋಕ ಮುಳಗುಂದ ಮಠ, ಗ್ರಾಪಂ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net