ಗದಗ: ನನಗೆ ಟಿಕೆಟ್ ನೀಡಬೇಡಿ ಎಂದು ಇಲ್ಲಿನ ಏಕೈಕ ಕಾಂಗ್ರೆಸ್ ನಾಯಕರು ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಕರೆ ಮಾಡಿದ್ದಾರೆ: ವೆಂಕನಗೌಡ್ರ

IMG-20230223-WA0001
Published on

ನಾನೂ ಯಾರ ಬೆಂಬಲಿತ ಅಭ್ಯರ್ಥಿಯೂ ಅಲ್ಲ. ಗೆಲ್ಲುವ ಉದ್ದೇಶದಿಂದಲೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ. ಬಿಜೆಪಿಗರು ಕಾಂಗ್ರೆಸ್ಸಿನ ಅಭ್ಯರ್ಥಿಯೆಂದು, ಕಾಂಗ್ರೆಸ್ಸಿನವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,

ದೇವೇಗೌಡರು ಪ್ರಧಾನಿ ಆಗಿದ್ದಾಗ, ಬೆಂಬಲ ವಾಪಾಸ ತಗೆದುಕೊಳ್ಳಿ ಎಂದು ಸೋನಿಯಾಗಾಂಧಿ ಮನೆಗೆ ಬಾಗಿಲೆಗೆ ಹೋಗಿದ್ದವರು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಈಗ ಅವರೇ ಈಗ ನನಗೆ ಟಿಕೆಟ್ ನೀಡಬೇಡಿ ಎಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಕರೆ ಮಾಡಿ ಹೇಳ್ತಾರೆ ಎಂದು ಪರೋಕ್ಷವಾಗಿ ಎಚ್.ಕೆ. ಪಾಟೀಲರಿಗೆ ಬೊಟ್ಟ ಮಾಡಿ ತೋರಿಸಿದರು. 

ಕಾಂಗ್ರೆಸ್ಸಿಗರು ಪ್ರತಿ ಮಹಿಳೆಗೆ 2000 ರೂ. ನೀಡುವ ಗ್ಯಾರಂಟಿ ಕಾರ್ಡ್ ಎಂಬುವ ಹುಚ್ಚು ಭರವಸೆ ನೀಡುತ್ತಿದ್ದಾರೆ. ಪ್ರತಿ ತಿಂಗಳು 1200 ಕೋಟಿ ಅಗತ್ಯವಿದೆ. ಕಾಂಗ್ರೆಸ್ಸಿನವರು ನೋಟು ಪ್ರಿಂಟ್ ಮಾಡಿದರೂ ಮಹಿಳೆಯರಿಗೆ 2000 ರೂ. ನೀಡಲು ಸಾಧ್ಯವಿಲ್ಲ. ಜನರನ್ನು ಸುಳ್ಳು ಭರವಸೆ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬ್ಯಾನರ್ ರಾಜಕಾರಣ
ನಗರದಾದ್ಯಂತ ಜೆಡಿಎಸ್ ಬ್ಯಾನರ್ ಗಳನ್ನು ಹರಿದು ಹಾಕಲಾಗಿದೆ. ಹರಿದಿದ್ದು ಬೇಸರ ಇಲ್ಲ. ಜೆಡಿಎಸ್ ನ ಭಯ ಇತರೆ ಪಕ್ಷಗಳಿಗೆ ಭಯ ಇದೆ ಎಂಬುದು ಖುಷಿ ತಂದಿದೆ ಎಂದರು.

ಅಪ್ಪಣ್ಣ ಹರ್ಲಾಪುರ ಮಾತನಾಡಿ, ಲಕ್ಕುಂಡಿಯಲ್ಲಿ ಘೋಷಿಸಿದ ಯಾವುದೇ ಯೋಜನೆ ಬಜೆಟ್ ನಲ್ಲಿ ಘೋಷಣೆಯಾಗಿಲ್ಲ. ಗದಗಿಗೆ ಬಿಜೆಪಿಗರು ನಾಮಾ ಎಳೆದಿದ್ದಾರೆ. ಅದಕ್ಕಾಗಿ, ನಾಮಾ ಬಳೆದುಕೊಂಡು ಸೋಮವಾರ ಗಾಂಧಿವೃತ್ತದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ರಮೇಶ ಕಲಬುರ್ಗಿ, ಬಸವರಾಜ ಅಪ್ಪಣ್ಣವರ, ಪ್ರಭುಗೌಡ ಪಾಟೀಲ, ಶಿರಾಜ ಕದಡಿ, ಪ್ರಫುಲ್ ಪುಣೇಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net