ಗದಗ ನಗರಸಭೆ ವೈಫಲ್ಯದಿಂದ ಲೋಕೋಪಯೋಗಿ ಇಲಾಖೆಗೆ ಕೋಟ್ಯಂತರ ರೂ. ಹೊರೆ.

ಲೋಕೋಪಯೋಗಿ ಇಲಾಖೆಯು ಕಾಂಕ್ರಿಟ್ ರಸ್ತೆ ನಿರ್ಮಾಣ ಕೈಗೊಳ್ಳಲು ನಿಗದಿಪಡಿಸಿರುವ ಗದಗ ಹೊಸ ಬಸ್ ನಿಲ್ದಾಣ ಮುಂಭಾಗ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿಯುತ್ತಿರುವುದು.
ಲೋಕೋಪಯೋಗಿ ಇಲಾಖೆಯು ಕಾಂಕ್ರಿಟ್ ರಸ್ತೆ ನಿರ್ಮಾಣ ಕೈಗೊಳ್ಳಲು ನಿಗದಿಪಡಿಸಿರುವ ಗದಗ ಹೊಸ ಬಸ್ ನಿಲ್ದಾಣ ಮುಂಭಾಗ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿಯುತ್ತಿರುವುದು.
Published on

ಶಿವಾನಂದ ಹಿರೇಮಠ ಗದಗ

`ಚರಂಡಿ ತುಂಬಿ ನೀರು ರಸ್ತೆಗೆ ಹರಿಯುತ್ತಿದ್ದು, ಇದರಿಂದ ರಸ್ತೆ ಹಾಳಾಗುತ್ತಿವೆ. ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೊಸ ರಸ್ತೆ ಕಾಮಗಾರಿ ಮತ್ತು ರಸ್ತೆ ದುರಸ್ತಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲು ಚರಂಡಿ ಬಳಿಸಿ' ಹೀಗೆಂದು ಲೋಕೋಪಯೋಗಿ ಇಲಾಖೆಯು ನಗರಸಭೆಗೆ ಎರಡು ಬಾರಿ ಪತ್ರ ಬರೆದಿದೆ. ನಗರಸಭೆ ನಿರ್ಲಕ್ಷ್ಯ ದಿಂದ ಸ್ವಚ್ಚ ಭಾರತ ಮಿಷನ್ ಯೋಜನೆಗೂ ಹಿನ್ನಡೆಯಾಗುತ್ತಿದೆ. ಜತೆಗೆ ಲೋಕೋಪಯೋಗಿ ಇಲಾಖೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಹೊರೆಯಾಗಿ, ಬೊಕ್ಕಸ ನೀರಿನಂತೆ ಕರಗುತ್ತಿದೆ.
ಸದಸ್ಯರ ಮತ್ತು ಅಧಿಕಾರಿಗಳ ವರ್ತನೆಗೆ ಇಲಾಖಾ ಅಧಿಕಾರಿಗಳು ಬೇಸತ್ತು ಪತ್ರ ಬರೆದರೂ ನಗರಸಭೆ ಸ್ಪಂಧಿಸುತ್ತಿಲ್ಲ. ಈ ಹಿನ್ನೆಲೆ ಇಲಾಖೆಗೆ ಅನಗತ್ಯ ವೆಚ್ಚ ಹೆಚ್ಚಾಗಿ ಸಮರ್ಪಕ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದೇ ಮೇಲಿಂದ ಮೇಲೆ ರಸ್ತೆಗಳನ್ನು ದುರಸ್ತಿ ಮಾಡುಲು ಇಲಾಖೆ ಕೋಟ್ಯಂತರ ರೂ. ವ್ಯಯಿಸುತ್ತಿದೆ. ನಗರದ ಸ್ವಚ್ಚತೆಗೂ ನಗರಸಭೆಯು ಲೋಕೋಪಯೋಗಿ ಇಲಾಖೆಯನ್ನು ಬೆಂಬಲಿಸದ ಕಾರಣ ಕೇಂದ್ರ ಸರಕಾರ ಸ್ವಚ್ಚ ಭಾರತ ಮಿಷನ್ ಯೋಜನೆಗೆ ನಗರದಲ್ಲಿ ಹಿನ್ನಡೆಯಾಗುತ್ತಿದೆ.

ಪತ್ರ ಬರೆಯಲು ಕಾರಣ?
ಕಳೆದೆರೆಡೂ ವರ್ಷದಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಅತೀವೃಷ್ಟಿ ತಲೆದೂರಿದೆ. ಇದರಿಂದ ಹುಬ್ಬಳ್ಳಿ-ಗದಗ-ಬಾದಾಮಿ ರಸ್ತೆ, ಮುಖ್ಯ ರಸ್ತೆ, ಒಳ ರಸ್ತೆ ಹಾಗೂ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದವು. ನಗರ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿ, ಸಾಮಾನ್ಯ ಜನರು ಹಿಡಿಶಾಪ ಹಾಕುತ್ತಿದ್ದರು. ಲೋಕಪಯೋಗಿ ಇಲಾಖೆಯೂ ಕೂಡ ಆಗಾಗ ರಸ್ತೆ ದುರಸ್ತಿಗೆ ಹಣ ವ್ಯಯಿಸುತ್ತಲೇ ಇದೆ. ಆದರೆ, ಮಳೆಯಾದ ಸಂದರ್ಭದಲ್ಲಿ ಚರಂಡಿ ಮೂಲಕ ನೀರು ಹರಿಯದೇ ರಸ್ತೆ ಮೇಲೆ ನೀರು ಹರಿಯುತ್ತಿದೆ. ನಗರಸಭೆ ಚಂಡಿ ಬಳಿಸದಿರುವ ಕಾರಣ ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ನೀರು ರಸ್ತೆಗೆ ಬರುತ್ತಿದೆ. ಈ ಹಿನ್ನೆಲೆ ಚರಂಡಿ ಸ್ವಚ್ಚಗೊಳಿಸುವಂತೆ ಸೆ.೨೨, ೨೦೨೧ ಹಾಗೂ ನ.೨೨, ೨೦೨೨ ರಂದು ಲೋಕೋಪಯೋಗಿ ಇಲಾಖೆ ನಗರಸಭೆಗೆ ಪತ್ರ ಬರೆದಿದೆ.

ರಸ್ತೆ ಕಾಮಗಾರಿಗಳ ಉಲ್ಲೇಖ:
ಲೋಕೋಪಯೋಗಿ ಇಲಾಖೆ ಬರೆದ ಪತ್ರದಲ್ಲಿ ನಿಖರವಾಗಿ ಹೆದ್ದಾರಿಗಳು, ರಸ್ತೆಗಳನ್ನು ಉಲ್ಲೇಖಿಸಲಾಗಿದೆ. `ವಿವಿಧ ಯೋಜನೆಯಡಿ ನಗರ ಪ್ರಮುಖ ರಸ್ತೆಗಳ ಅಭಿವೃದ್ಧಿಯಡಿ ಅನುದಾನ ಲಭ್ಯವಿದ್ದು, ರಸ್ತೆ ಕಾಮಗಾರಿ ಆರಂಭಿಸಬೇಕಿದೆ. ಗದಗ-ಮುಂಡರಗಿ ರಸ್ತೆ, ಕಾರವಾರ ಇಳಕಲ್ ರಾಷ್ಟಿçÃಯ ಹೆದ್ದಾರಿ(ರಾಹೆ) ೦೬, ಗದಗ-ಕಳಸಾಪು-ಮಹಾಲಿಂಗಪುರ-ಹAಗನಕಟ್ಟಿ ರಸ್ತೆ, ಅರಭಾವಿ-ಚಳ್ಳಕೇರಿ ರಾಹೆ ೪೫, ಗದಗ-ಸಂಭಾಪುರ ರಸ್ತೆ ಅಭಿವೃದ್ಧಿಗೆ ಅನುದಾನ ಲಭ್ಯವಿದೆ. ಹೊಸ ಬಸ್ ನಿಲ್ದಾಣ ಮುಂಭಾಗ ರಸ್ತೆ ಸಮೀಕ್ಷೆ ಮಾಡಿಸಿ ಕಾಂಕ್ರಿಟ್ ರಸ್ತೆ ಕಾಮಗಾರಿ ಯೋಜಿಸಲಾಗುತ್ತಿದೆ. ನಗರದ ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ವೃತ್ತದ ವರೆಗೆ, ಬೆಟಗೇರಿ ತುಳಜಾ ಭವಾನಿ ವೃತ್ತದಿಂದ ನರಸಾಪುರ ಸೇತುವೆವರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ಲಭ್ಯವಿದೆ. ಈಗಾಗಲೇ ಚರಂಡಿ ನೀರು ಹರಿದು ಲೋಕೋಪಯೋಗಿ ಇಲಾಖೆ ರಸ್ತೆಗಳು ಹಾಳಾಗುತ್ತಿದೆ. ಈ ಹಿನ್ನೆಲೆ ನಗರಸಭೆ ವ್ಯಾಪ್ತಿಗೆ ಬರುವ ಚರಂಡಿ ಬಳಿಸಿ, ನೀರು ರಸ್ತೆಗೆ ಹರಿಯದಂತೆ ತಡೆಯಲು ಕ್ರಮ ಕೈಗೊಳ್ಳಬೇಕು' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಾಕ್ಸ್:
ಗದಗ ಮಾರ್ಗವಾಗಿ ಹುಬ್ಬಳಿಯಿಂದ ಬಾದಾಮಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ೩.೬೦ ಕೋಟಿ, ನಗರದ ಹೊಸ ಬಸ್ ನಿಲ್ದಾಣ ಮುಂಭಾದ ರಸ್ತೆಗೆ ಅಂದಾಜು ೯ ಕೋಟಿ ಅನುದಾನ ಬಿಡುಗಡೆಯಾಗಿದೆ. ೩.೬೦ ಕೋಟಿ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ೯ ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಿ.ಸಿ. ಪಾಟೀಲ, ಶಾಸಕ ಎಚ್.ಕೆ. ಪಾಟೀಲ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದಾರೆ. ಹಿಗಿದ್ದರೂ ಪ್ರಮುಖ ರಸ್ತೆಯ ಅಕ್ಕಪಕ್ಕದ ಚರಂಡಿ ಬಳಿಸಲು ನಗರಸಭೆ ವೈಫಲ್ಯವಾಗಿದೆ. ನಗರದ ನೈರ್ಮಲ್ಯ ದಿನೇ ದಿನೆ ಹದಗೆಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net