ಗದಗ: ತಾಲೂಕು ಸಾಹಿತ್ಯ ಸಮ್ಮೇಳನ

12333
Published on


ಗದಗ ತಾಲೂಕಿನ ಹತಿರ್ ಗ್ರಾಮದ ಹತಿರ್ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ೆ.8 ರಂದು ಬೆಳಗ್ಗೆ 8ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಟಕದಿಂದ ಕನ್ನಡ ಸಾಹಿತ್ಯ ಪರಿಷತ್ತಿನ 4ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯೆ ಡಾ.ರಶ್ಮಿ ಅಂಗಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಬೆಳಗ್ಗೆ 8 ರಿಂದ ರಾತ್ರಿ 10ರವರೆಗೂ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಹೆಚ್ಚಿನ ಪ್ರಮಾಣದಲ್ಲಿ ಜನರು ಭಾಗವಹಿಸಬೇಕು ಎಂದು ಹೇಳಿದರು.
ಬೆಳಗ್ಗೆ 8ಕ್ಕೆ ಕವಿ ನಯಸೇನ ವೇದಿಕೆಯಲ್ಲಿ ಧ್ವಜಾರೋಹಣವನ್ನು ಹತಿರ್ ಗ್ರಾಪಂ ಅಧ್ಯ ಸೋಮರಡ್ಡಿ ನಡವೂರ, ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಪರಿಷತ್ತಿನ ಧ್ವಜ, ತಾಲೂಕು ಕಸಾಪ ಅಧ್ಯೆ ಡಾ.ರಶ್ಮಿ ಅಂಗಡಿ ಕನ್ನಡಧ್ವಜ ನೆರವೇರಿಸುವರು. ತದನಂತರ 8.30ಕ್ಕೆ ಹತಿರ್ ಬಸವೇಶ್ವರ ಮಹಾದ್ವಾರದಿಂದ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ಕನ್ನಡ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯರ ಮೆರವಣಿಗೆ ಜರುಗಲಿದೆ. ಹತಿರ್ ಗ್ರಾಪಂ ಉಪಾಧ್ಯೆ ಪಾರ್ವತೆಮ್ಮ ಕುರ್ತಕೋಟಿ ಮೆರವಣಿಗೆಗೆ ಚಾಲನೆ ನೀಡುವರು. ಐ.ಎ.ಗಾಡಗೊಳಿ, ಅಂದಾನಪ್ಪ ಕೊಟ್ಟೂರಶೆಟ್ಟರ, ಭೋಜರಾಜ ನಾವಳ್ಳಿ, ಜಿ.ಎಸ್​.ಸಿಂದಗಿ ಭಾಗವಹಿಸುವರು.
ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ:
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಶಿವಾನಂದಮಠದ ಸದಾಶಿವಾನಂದ ಭಾರತಿ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಮ್ಮೇಳನದ ಸರ್ವಾಧ್ಯೆ ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅಸುಂಡಿ ಉಪಸ್ಥಿತರಿರುವರು. ಉದ್ಘಾಟನೆಯನ್ನು ಶಾಸಕ ಎಚ್​.ಕೆ. ಪಾಟೀಲ ನೆರವೇರಿಸುವರು. ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಕೃತಿ ಬಿಡುಗಡೆ ನೆರವೇರಿಸುವರು ಎಂದು ತಿಳಿಸಿದರು.
ವಿಚಾರ ಗೋಷ್ಠಿ:
ಮಧ್ಯಾಹ್ನ 2ಕ್ಕೆ ಜರುಗುವ ವಿಚಾರಗೋಷ್ಠಿಯ ಅಧ್ಯತೆ ಡಾ.ರಾಜಶೇಖರ ದಾನರಡ್ಡಿ ವಹಿಸುವರು. ಜೆ.ಕೆ. ಜಮಾದಾರ ಆಶಯ ನುಡಿಗಳನ್ನಾಡುವರು. ಕನ್ನಡ ಜನಪದ ಸಾಹಿತ್ಯ, ಗದಗ ತಾಲೂಕು ದರ್ಶನ, ತೃಣಧಾನ್ಯದಿಂದ ಆರೋಗ್ಯ ಸಂವರ್ಧನೆ ವಿಷಯಗಳ ಕುರಿತು ಗೋಷ್ಠಿಗಳು ಜರುಗುವವು. ಮಧ್ಯಾಹ್ನ 2.30ಕ್ಕೆ ಸಂಗೀತ ಕಾರ್ಯಕ್ರಮವನ್ನು ಕಲಾವಿದರು ನಡೆಸಿಕೊಡುವರು. ಮಧ್ಯಾಹ್ನ 3ಕ್ಕೆ ಕವಿಗೋಷ್ಠಿ ಜರುಗುವುದು, ಗೋಷ್ಠಿಯ ಅಧ್ಯತೆಯನ್ನು ಅನ್ನದಾನಿ ಹಿರೇಮಠ ವಹಿಸುವರು. ಡಾ.ಕಲ್ಲೇಶ ಮೂರಶಿಳ್ಳಿನ ಆಶಯ ನುಡಿಗಳನ್ನಾಡುವರು. ಸಾಯಂಕಾಲ 4.30ಕ್ಕೆ ಸಮ್ಮೇಳನಾಧ್ಯರ ಬದುಕು&ಬರಹ ಕುರಿತು ವಿಶೇಷ ಗೋಷ್ಠಿ ಜರುಗುವುದು. ಈ ಕುರಿತು ಉಪನ್ಯಾಸವನ್ನು ಸುಧಾ ಹುಚ್ಚಣ್ಣವರ ನೀಡುವರು. ಸಾಯಂಕಾಲ 5.30ಕ್ಕೆ ಬಹಿರಂಗ ಅವೇಶನ ಜರುಗಲಿದ್ದು, ಅಧ್ಯತೆಯನ್ನು ತಾಲೂಕಾ ಕಸಾಪ ಅಧ್ಯೆ ರಶ್ಮಿ ಅಂಗಡಿ ವಹಿಸುವರು. ನಿರ್ಣಯ ಮಂಡನೆಯನ್ನು ಕರಬಸಪ್ಪ ಬಾಳಿಕಾಯಿ, ಬಸವರಾಜ ನೆಲಜೇರಿ, ಮಂಜುನಾಥ ಜಕ್ಕಲಿ, ಪರಶುರಾಮ ಹೂಗಾರ, ಡಾ.ಸಿದ್ರಾಮಪ್ಪ ಚವಡಿ ಮಂಡನೆ ಮಾಡುವರು.
ಸಮಾರೋಪ ಸಮಾರಂಭ:
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವನ್ನು ರಾತ್ರಿ 7ಕ್ಕೆ ಹಮ್ಮಿಕೊಳ್ಳಲಾಗಿದೆ. ಅಧ್ಯತೆ ಕಸಾಪ ತಾಲೂಕು ಅಧ್ಯೆ ಡಾ.ರಶ್ಮಿ ಅಂಗಡಿ ವಹಿಸುವರು. ಚಿನ್ನವ್ವ ವಸ್ತ್ರದ ಸಮಾರೋಪನುಡಿ ಆಡುವರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net