

ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಡೊಣಿಯ ಸಂಗೀತ ನೃತ್ಯ ನಾಟಕ ಸಂಸ್ಥೆ(ಎಸ್.ಸಿ) ಹಾಗೂ ಕನ್ನಡ ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಆಶ್ರಯದಲ್ಲಿ ಶನಿವಾರ ಕಲಾ ಸಂಭ್ರಮ ಕಾರ್ಯಕ್ರಮ ಜರುಗಿತು.
ರಾಣೆಬೆನ್ನೂರು ಕಲಾತಂಡದಿಂದ ‘ತಿಕ್ಕಲು ರಾಜ, ತಿರುಬೋಕಿ ರಾಜ್ಯ, ಎಂಬ ನಾಟಕ ಪ್ರದರ್ಶನವಾಯಿತು. ಅನ್ಮೂಲ್ ಯೋಗ ಕೇಂದ್ರದಿಂದ ಯೋಗ ಪ್ರದರ್ಶನ, ಬೀರಲಿಂಗೇಶ್ವರ ಜಾನಪದ ಕಲಾತಂಡದಿಂದ ಡೊಳ್ಳಿನ ಪದಗಳು, ಶ್ರೀ ಶರಣ ಬಸವೇಶ್ವರ ಭಜನಾ ಸಂಘದಿಂದ ಭಜನಾ ಪದಗಳು ಹಾಗೂ ಹುಯಿಲಗೋಳದ ಜೇನುಗೂಡು ಕಲಾತಂಡ, ವಿಜಯ ಮೆಲೋಡಿಸ್ ಕಲಾತಂಡ ಸೇರಿ 10ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿ, ಕಲೆಯಿಂದ ಎಲ್ಲರ ಬದುಕು ಸುಧಾರಿಸುತ್ತದೆ. ಕಲೆ ಮೂಲಕ ತಮ್ಮ ಊರಿನ ಹೆಸರು ಬೆಳಕಿಗೆ ಬರುತ್ತದೆ. ಕನ್ನಡ ಸಂಸ್ಕøತಿ ಇಲಾಖೆಯು ಹಲವಾರು ಸಂಘ-ಸಂಸ್ಥೆಗಳಿಗೆ ಅನೇಕ ಕಾರ್ಯಕ್ರಮಗಳನ್ನು ಕೊಡುವ ಮೂಲಕ ವಿವಿಧ ರೀತಿಯ ಕಲಾವಿದರನ್ನು ಮತ್ತು ಅವರ ಕಲೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿ ಆಸರೆಯಾಗಿದೆ ಎಂದರು.
ಗ್ರಾ.ಪಂ.ಅಧ್ಯಕ್ಷ ಈಶ್ವರಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಮಾತನಾಡಿದರು.ರಂಗ ಕಲಾವಿದೆ ವೀಣಾ ಅಠವಲೆ, ಅನ್ಮೋಲ್ ಯೋಗ ಕೇಂದ್ರ ನಿದೇಶಕಿ ಮಂಗಳಾ ಇಟಗಿ, ಸಂಗೀತ ನೃತ್ಯ ನಾಟಕ ಸಂಸ್ಥೆ ಅಧ್ಯಕ್ಷ ಯಲ್ಲಪ್ಪ ಚಲವಾದಿ, ಕಾರ್ಯದರ್ಶಿ ಸತ್ಯಪ್ಪ ಚಲವಾದಿ, ಕಾಶಪ್ಪ ಹೊನ್ನೂರ, ಮಲ್ಲಪ್ಪ ಹೊಸಮನಿ, ಅಲ್ಲಾಸಾಬ ದೊಡ್ಡಮನಿ, ಭರಮಗೌಡ ಪಾಟೀಲ, ಬಸವರಾಜ ಚಲವಾದಿ, ಯಮನೂರಪ್ಪ ಚಲವಾದಿ, ಉಪಸ್ಥಿತರರು ಇದ್ದರು.