

ಗದಗ: ಜಿಲ್ಲೆಯಲ್ಲಿ ಬುಧವಾರ 149 ಜನರಿಗೆ ಸೋಂಕು ತಗುಲಿದ್ದು, 167 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ಕೋವಿಡ್- 19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ವಕ್ಕಲಗೇರಿ ಓಣಿ, ಕಳಸಾಪುರ ರಸ್ತೆ, ಕೆ.ಸಿ. ರಾಣಿ ರಸ್ತೆ, ಹೊಸಪೇಟೆ ಚೌಕ್, ಮಸಾರಿ, ಅಂಬೇಡ್ಕರ್ ನಗರ, ವಿದ್ಯಾನಗರ, ಎಸ್.ಎಂ.ಕೆ. ನಗರ, ವಿವೇಕಾನಂದ ನಗರ, ಬಾಲಾಜಿನಗರ, ಬೆಟಗೇರಿ, ಜಿಮ್ಸ್ ಕ್ವಾರ್ಟರ್ಸ್, ರಾಧಾಕೃಷ್ಣ ನಗರ, ಟರ್ನಲ್ ಪೇಟೆ, ಕೆ.ಎಸ್.ಆರ್.ಟಿ.ಸಿ ಕಾಲನಿ, ಗಾಂಧಿನಗರ, ಹುಡ್ಕೋ ಕಾಲನಿ, ರಂಗನವಾಡ, ಹಳೇ ಕಚೇರಿ, ಗಾರ್ಗಿ ಪೇಟೆ, ಹಬೀಬ ಗಲ್ಲಿ, ಪೊಲೀಸ್ ಕ್ವಾರ್ಟರ್ಸ್ ಬೆಟಗೇರಿ, ವಸಂತ ನಗರ, ರಾಮದೇವ ದೇವಸ್ಥಾನ ಹತ್ತಿರ, ವೀರನಾರಾಯಣ ದೇವಸ್ಥಾನ ಹತ್ತಿರ, ಅಬ್ಬಿಗೇರಿ ಕಾಂಪೌಂಡ್, ಹಾತಲಗೇರಿ ನಾಕಾ, ನರಸಾಪುರ, ಸೆಟ್ಲಮೆಂಟ್, ನಂದೀಶ್ವರ ನಗರ, ಶಿವಾಜಿ ನಗರ, ರಂಗಾವಧೂತ ನಗರ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಉಡಚಮ್ಮ ದೇವಸ್ಥಾನದ ಹತ್ತಿರ, ಖಾನತೋಟ, ಕಳಸಾಪುರ ರಸ್ತೆ, ಸಾಯಿಬಾಬಾ ದೇವಸ್ಥಾನದ ಹತ್ತಿರ, ಹೆಲ್ತ್ ಕ್ಯಾಂಪ್, ಗದಗ ತಾಲೂಕಿನ ಹುಲಕೋಟಿ, ಹರ್ಲಾಪುರ, ಅಸುಂಡಿ, ಮಲ್ಲಸಮುದ್ರ, ಕಳಸಾಪುರ, ಕಣಗಿನಹಾಳ.
ಶಿರಹಟ್ಟಿ ತಾಲೂಕಿನ ಮಾಗಡಿ, ಶಿಗ್ಲಿ, ಕುಂದ್ರಳ್ಳಿ, ಛಬ್ಬಿ, ಲಕ್ಷೆ್ಮೕಶ್ವರ ಪಟ್ಟಣದ ಹಿರೇಬನ, ಕಾಳಿಕಾನಗರ ಪೆಟ್ರೋಲ್ ಬಂಕ್ ಹತ್ತಿರ, ಹಳೇ ಬಸ್ ನಿಲ್ದಾಣದ ಹತ್ತಿರ, ಸರ್ಕಾರಿ ಆಸ್ಪತ್ರೆ ಹತ್ತಿರ.
ರೋಣ ಪಟ್ಟಣದ ಶಿವಾನಂದ ನಗರ ಹತ್ತಿರ, ತಾಲೂಕಿನ ಯಾವಗಲ್, ಕೋತಬಾಳ, ಸೂಡಿ, ಬೆನಹಾಳ, ಜಕ್ಕಲಿ, ಬೆಳವಣಕಿ, ಹೊಳೆಆಲೂರ, ನರೇಗಲ್, ರಾಜೂರ, ಬೊಮ್ಮಸಮುದ್ರ, ಪುರ್ತಗೇರಿ, ಕೊಂಡಿಕೊಪ್ಪ, ನಾಗರಾಳ.
ಮುಂಡರಗಿ ಪಟ್ಟಣದ ಆಯುರ್ವೆದಿಕ್ ಕಾಲೇಜ್, ಎ.ಡಿ. ನಗರ, ಹುಡ್ಕೋ ಕಾಲನಿ, ಹೆಸರೂರ ಪ್ಲಾಟ್, ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾ, ನಾಗರಳ್ಳಿ, ಹಮ್ಮಗಿ, ಡಂಬಳ, ಗಜೇಂದ್ರಗಡ ಪಟ್ಟಣದ ಕೆಇಬಿ, ಸಿಂಹಾಸನ ಪೇಟೆ, ಜವಳಿ ಪೇಟೆ.
ನರಗುಂದ ಪಟ್ಟಣದ ಎನ್.ಎಂ.ಟಿ.ಮಿಲ್, ಜಮಾಲಪುರ ಓಣಿ, ಗಾಡಿ ಓಣಿ, ಹಾಲಬಾವಿ ಕೆರಿ ಓಣಿ, ನರಗುಂದ ತಾಲೂಕಿನ ಕೊಣ್ಣೂರ, ದಂಡಾಪುರ, ಚಿಕ್ಕನರಗುಂದ, ಬೈರನಟ್ಟಿ, ಬನಹಟ್ಟಿ ಗ್ರಾಮದಲ್ಲಿ ಸೋಂಕು ಪತ್ತೆಯಾಗಿದೆ.
ಇಬ್ಬರು ಮೃತ
ರೋಣ ತಾಲೂಕಿನ ಹೊಳೆಆಲೂರ ನಿವಾಸಿ 52 ವರ್ಷದ ಪುರುಷ, ಗದಗ- ಬೆಟಗೇರಿ ನಿವಾಸಿ 61 ವರ್ಷದ ಪುರುಷ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.