ಗದಗ: ಜಿಲ್ಲೆಗೆ ಸಿಹಿ ಕಹಿ ಬಜೆಟ್​

df560fcb-d1eb-4417-91ae-93d9204afedd
Published on

ಗದಗ: ಮುಂಬರುವ ವಿಧಾಸಭೆ ಚುನಾವಣೆ ದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಮಂಡನೆಯಾದ ಬಜೆಟ್​ ಪ್ರಾಮುಖ್ಯತೆ ಪಡೆದಿದೆ. ಈ ಹಿನ್ನೆಲೆ ಶುಕ್ರವಾರ ಸಿಎಂ ಬಸವಾರಜ ಬೊಮ್ಮಾಯಿ ಮಂಡನೆ ಮಾಡಿದ ಬಜೆಟ್​ ಜಿಲ್ಲಾವಾರು ಪ್ರಾತಿನಿಧ್ಯ ನೀಡದೇ ಸಮುದಾಯ, ವರ್ಗವಾರು ಪ್ರಾತಿನಿಧ್ಯ ನೀಡಿದ್ದು ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಗದಗ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಬಜೆಟ್​ "ಸಿಹಿ&ಕಹಿ' ಬಜೆಟ್​ ಎಂಬಂತಿದೆ.
ವಿಶೇಷವಾಗಿ ಜಿಲ್ಲೆಯ ನೀರಾವರಿ ಯೋಜನೆ ಮತ್ತು ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ದೃಷ್ಟಿಕೋನದಿಂದ ಬಜೆಟ್​ ಮೀಸಲು ಇಡಬಹುದು ಎಂಬ ಊಹೆ ಇತ್ತಾದರೂ ಜನರ ನಿರೀೆ ಹುಸಿಯಾಗಿದೆ. ಬದಲಾಗಿ, ಗ್ರಾಮೀಣ ಮತದಾರ, ಬಡ ಮತ್ತು ಮಧ್ಯಮ ವರ್ಗ ಹಾಗೂ ವಿದ್ಯಾಥಿರ್ಗಳನ್ನು ಗುರಿಯಾಗಿಸಿ, ಆರೋಗ್ಯ, ಉಚಿತ ಬಸ್​ ಪಾಸ, ಶೂನ್ಯ ಬಡ್ಡಿದರ ಸಾಲ ವಿಸ್ತರಣೆ ಕಾರ್ಯಕ್ರಮ ಜಾರಿ ಮಾಡಲಾಗಿದೆ.
ಮನೆ ಬಾಗಿಲಿಗೆ ಔಷಧಿ ಕಾರ್ಯಕ್ರಮ, ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುವನ್ನು ಸುರತವಾಗಿ ಮನೆಗ ತಲುಪಿಸುವ "ನಗುಮಗು" ವಾಹನ ಒದಗಿಸುವ ಯೋಜನೆ , ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷದಿಂದ 5 ಲಕ್ಷದ ವರೆಗೆ ಸಾಲ ವಿಸ್ತರಣೆ. ಪದವಿ ವಿದ್ಯಾಥಿರ್ಗಳಿಗೆ ರ್ಪೂಣ ಶುಲ್ಕ ವಿನಾಯಿತಿ ಹೀಗೆ ಹಲವು ಯೋಜನೆಗಳ ಮೂಲಕ ವರ್ಗವಾರು ಮತದಾರರನ್ನು ಸೆಳೆಯಲಾಗಿದೆ.

ಜಿಲ್ಲೆಗೆ ಒತ್ತು ನೀಡಬೇಕಿತ್ತು: ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಬಜೆಟ್​ ನಲ್ಲಿ ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿ ಕುರಿತು ಒಂದಾದರೂ ಮಹತ್ವದ ಘೋಷಣೆ ಪ್ರಸ್ತಾಪಿಸುವಂತೆ ಮುತುವಜಿರ್ ವಹಿಸಬೇಕಿತ್ತು. ತಮ್ಮ ಪ್ರಭಾವ ಬಳಸಿ ಬಜೆಟ್​ ನಲ್ಲಿ ಜಿಲ್ಲೆಗೆ ವಿಶೇಷ ಯೋಜನೆ ದೊರಕಿಸಿಕೊಡಬಹುದು ಎಂಬ ನಿರೀೆ ಹುಸಿಯಾಗಿದೆ. ಗದಗ & ಲೆ$್ಮಶ್ವರ ರಸ್ತೆ ನವೀಕರಣ ಪ್ರಸ್ತಾಪ ಮರೆತಂತಿದೆ.

ಚುನಾವಣಾ ಬಜೆಟ್​: ಏಪ್ರಿಲ್​ ನಲ್ಲಿ ಚುನಾವಣೆ ಜರುಗುವುದರಿಂದ ಪ್ರಸಕ್ತ ಬಜೆಟ್​ ಚುನಾವಣೆಗೆ ಮಾತ್ರ ಸೀಮಿತ ಎಂಬುದು ಸ್ಪಷ್ಟ. ಈಗಿನ ಸರ್ಕಅರ ಮತ್ತೇ ಅಧಿಕಾರಕ್ಕೆ ಬಂದರೆ ಬಜೆಟ್​ನಂತೆ ಯೋಜನೆಗಳು ಅನುಷ್ಠಾನಗೊಳ್ಳಬಹುದು. ಸರ್ಕಾರ ಬದಲಾದರೆ ಪ್ರಸಕ್ತ ಬಜೆಟ್​ ಎಂಬುದು ರಾಮನ&ಬೀಮನ ಲೆಕ್ಕದಂತೆ ಎಂಬುದೂ ಸ್ಪಷ್ಟ.

ಜಿಲ್ಲೆಗೆ ಏನೇನು?- ಮಹದಾಯಿ ನ್ಯಾಯಾಧೀಕರಣ ತೀಪಿರ್ನ ಹಿನ್ನೆಲೆ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ 3.90 ಟಿಎಂಸಿ ಬಳಕೆಯ ವಿಸತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಸಮ್ಮತಿಸಿದ ಹಿನ್ನೆಲೆ ಯೋಜನೆಗೆ 1000 ಕೋಟಿ ರೂ. ಮೀಸಲು- ಗದಗ ವಾಡಿ ರೈಲ್ವೆ ಯೋಜನೆಗೆ 200 ಕೋಟಿ- ಗದಗ & ಹೋಟಗಿ ರೈಲ್ವೆ ಲೈನ್​ ಡಬ್ಲಿಂಗ್​ ಗೆ 170 ಕೋಟಿ ರೂ.

ಭರವಸೆ ಏನಿತ್ತು?
- ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿಯಂತ್ರಿಸಲು ಕೈಗಾರಿಕಾ ವಲಯ ಸ್ಥಾಪನೆ
- ಜಿಲ್ಲೆಯಲ್ಲಿ ಹೊಯ್ಸಳ, ಚಾಲುಕ್ಯರ ಕಾಲದ ಸ್ಮಾರಕಗಳ ರಕ್ಷಣೆಗೆ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು.
- ಲಕ್ಕುಂಡಿಯನ್ನು ಹಂಪಿ ಪುರಾತತ್ವ ವಲಯಕ್ಕೆ ಸೇರಿರುವ ಪ್ರಸ್ತಾಪ ಇಲ್ಲ.
- ಕಪ್ಪತಗುಡ್ಡದಲ್ಲಿ ಇರುವ ಔಷಧ ಸಂಪತ್ತನ್ನು ಪರಿಣಾಮಕಾರಿಯಾಗಿ ಬಳಸುವ ಹಿನ್ನೆಲೆ ಆಯುರ್ವೇದ್​ ಹಬ್​ ಸ್ಥಾಪನೆ ವಿಷಯ ಪ್ರಸ್ತಾಪವಿಲ್ಲ.
- ಶಿಂಗಟಾಲೂರು ಯೋಜನೆ ಮೂಲಕ ಗದಗ ರೋಣ ಶಿರಹಟ್ಟಿಗೆ ನೀರು ಹರಿಸುವ ಯೋಜನೆಗೆ ಅನುದಾನ.
- ಕಾರವಾರ & ಇಳಕಲ್​ ಹೆದ್ದಾರಿ, ಯಲವಗಿ- &ಗದಗ ರಸ್ತೆ, ಗದಗ & ಲೆ$್ಮಶ್ವರ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಅನುದಾನ ಮೀಸಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net