

ಗದಗ : ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಮೀನುಗಾರರ ಟಕವನ್ನು ಜಿಲ್ಲಾ ಘಟಕ ಕಚೇರಿಯಲ್ಲಿ ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ರಾಷ್ಟ್ರೀಯ ಮೀನುಗಾರ ರಾಜ್ಯ ಸಂಟನೆಯ ಜಂಟಿ ಕಾರ್ಯದಶಿರ್ ಗುರಪ್ಪ ತಿರ್ಲಾಪೂರ ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಮೀನುಗಾರರ ಸಂಟನೆ ರಾಷ್ಟ್ರೀಯ ಮಟ್ಟದಲ್ಲಿ ಘಟಕಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿ ಅಂಬಿಗ ಗಂಗಾಮತ ಸಮಾಜ ಬಾಂಧವರು ಸಂಟಿತರಾಗಿ ಸದಸ್ಯತ್ವ ಪಡೆಯಬೇಕು. ಸಂಪ್ರದಾಯ ಮೀನುಗಾರರ ಹಕ್ಕುಗಳನ್ನು ಪಡೆಯಬೇಕು ಎಂದರು.
ಮೀನುಗಾರಿಕೆ ವಿಭಾಗ ಶಹರಘಟಕ ಅಧ್ಯ ಸಂಗಮೇಶ ಹಾದಿಮನಿ ಮಾತನಾಡಿ, ಅಂಬಿಗ, ಗಂಗಾಮತ, ಸುಣಗಾರ ಸಮುದಾಯವು ಮೂಲ ಸಂಪ್ರದಾಯ ಮೀನುಗಾರರು ಆಗಿದ್ದರೂ ಯಾವುದೇ ರೀತಿಯ ಮೀನುಗಾರಿಕೆ ಇಲಾಖೆ ಸವಲತ್ತುಗಳನ್ನು ಪಡೆಯದೆ ಇರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಸವಲತ್ತುಗಳನ್ನು ಪಡೆಯಲು ಒಗ್ಗಟ್ಟಾಗಬೇಕು. ಸಮುದಾಯದಲ್ಲಿ ಜಾಗೃತಿ ಮೂಡಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ ಗುಡಿಸಾಗರ, ಪ್ರಧಾನ ಕಾರ್ಯದಶಿರ್ಯಾಗಿ ರವಿಕುಮಾರ ಗುಡಿಸಾಗರ, ಟಕ ಪದಾಧಿಕಾರಿಗಳಾಗಿ ಅಮಿತ ಪೂಜಾರ, ಗಣೇಶ ಬಾರಕೇರ, ಬಸವರಾಜ ಗುಡಿಸಾಗರ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಟನೆ ಕ್ಯಾಲೆಂಡರ್ ಹಂಚಲಾಯಿತು.
ಕಾಗನೂರ, ಪ್ರಶಾಂತ ಚೌಡಕಿ, ಶಿವಾನಂದ ಬನಹಟ್ಟಿ, ಬಸವರಾಜ ಹುಲ್ಲೂರ, ಶಂಕರಗೌಡ ರಾಹುತ್, ಶಂಕರಗೌಡ ಪಾಟೀಲ, ಬಸವಪ್ರಬು ಹಾದಿಮನಿ, ಆನಂದ ಹಾದಿಮನಿ, ಹರೀಶ ಬಾರಕೇರ ಸಮಾಜ ಬಾಂಧವರು ಉಪಸ್ಥಿತರಿದ್ದರು.