

ಗದಗ: ಚಿತ್ರಕಲಾ ಸಂಸ್ಥೆಗಳ ಬೆಳವಣಿಗೆ ಹಾಗೂ ಚಿತ್ರಕಲಾ ಶಿಕರ ನೇಮಕಾತಿಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗುವ ಮೂಲಕ ಚಿತ್ರಕಲಾ ಸಂಸ್ಕೃತಿ, ಉಳಿದು ಬೆಳೆದು ಬರಲು ಚಿಂತನೆ ನಡೆಸಬೇಕೆಂದು ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ಹೇಳಿದರು.
ನಗರದ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಜಯ ಕಲಾಮಂದಿರದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಚಿತ್ರಕಲಾ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಮಹತ್ವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗದಗ ಪರಿಸರದಲ್ಲಿ ವಿಜಯ ಕಲಾಮಂದಿರ ಕಲಾಕ್ಷೇತ್ರ ಬಹು ದೊಡ್ಡ ಕೊಡುಗೆ ನೀಡಿದೆ. ನಾಡಿನಲ್ಲಿಂದು ಹೆಸರಾಗಿರುವ ಚಿತ್ರಕಲಾವಿದರು ಇಲ್ಲಿಯೇ ತಮ್ಮ ಕಲಾ ಶಿಕ್ಷಣ ಪಡೆದ ಸಾಧಕರಾಗಿದ್ದಾರೆ. ಕಲಾತಪಸ್ವಿ ಎಂದೇ ಖ್ಯಾತಿಯನ್ನು ಪಡೆದ ಟಿ.ಪಿ.ಅಕ್ಕಿ ಅವರು ಇಂತಹ ಸಂಸ್ಥೆಯನ್ನು ಹುಟ್ಟು ಹಾಕಿ ಇಂದಿಗೆ 75 ವರ್ಷಗಳು ರ್ಪೂಣಗೊಂಡಿವೆ. ಟಿ.ಪಿ.ಅಕ್ಕಿ ಇಂದಿಲ್ಲ ಆದರೆ ಅವರು ಹುಟ್ಟು ಹಾಕಿದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ, ಅವರ ಮಕ್ಕಳೂ ಸಹ ಕಲಾವಿದರಾಗಿದ್ದು ಸಂಸ್ಥೆಯನ್ನು ಚೆನ್ನಾಗಿ ಮುನ್ನಡೆಸಿಕೊಂಡು ಬರುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಬಕವಿಯ ಹಿರಿಯ ಕಲಾವಿದ ಮಹಾದೇವ ಕವಿಶೆಟ್ಟಿ ಅವರು ಮಾತನಾಡಿ ಚಿತ್ರಕಲೆಗೆ ತನ್ನದೇ ಆದ ಇತಿಹಾಸ, ಪರಂಪರೆ, ಉನ್ನತವಾದ ಮಹತ್ವವಿದೆ. ಇಂತಹ ಕಲೆ ಮುಂದಿನ ತಲೆಮಾರಿನವರಿಗೂ ಅಭಿವೃದ್ಧಿಯೊಂದಿಗೆ ತಲುಪಬೇಕಿದೆ. ಆ ಕಾರ್ಯಕ್ಕೆ ನಾವೆಲ್ಲ ಸನ್ನದ್ಧರಾಗಬೇಕಿದೆ ಎಂದರು. ಚಿತ್ರಕಲಾ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಮಹತ್ವ ಕುರಿತು ಬೆಂಗಳೂರಿನ ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯದ ವಿಶ್ರಾಂತ ವಿಶೇಷಾಧಿಕಾರಿ ಡಾ.ಎಸ್.ಸಿ.ಪಾಟೀಲ, ಗದಗ ಶಹರ ಬಿಇಓ ಆರ್.ಎಸ್.ಬುರಡಿ, ತಿಕೋಟದ ನಿವೃತ್ತ ಚಿತ್ರಕಲಾ ಶಿಕ ಡಾ.ಜಿ.ಎಸ್.ಬೂಸಗೊಂಡ, ಗೊಟಗೂಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಂಕರ ಕುಂದಗೋಳ, ಗದಗ ವಿಜಯ ಲಲಿತಕಲಾ ಕಾಲೇಜಿನ ಸ್ನಾತಕೋತರ ಕೇಂದ್ರದ ಉಪನ್ಯಾಸಕ ಸಂತೋಷ ಅಕ್ಕಿ, ಉಪನ್ಯಾಸಕ ಬಸವರಾಜ ನೆಲಜೇರಿ ಉಪನ್ಯಾಸ ನೀಡಿದರು.
ಅಮೃತ ಮಹೋತ್ಸವ ಸಮಿತಿಯ ಅಧ್ಯ ಆರ್.ಡಿ.ಕಡ್ಲಿಕೊಪ್ಪ, ಡಾ.ಬಿ.ಎಲ್. ಚವ್ಹಾಣ, ಡಾ.ಸಿ.ವಿ.ಬಡಿಗೇರ, ವಿಜಯ ಕಲಾಮಂದಿರದ ಪ್ರಾಚಾರ್ಯ ಕೃಷ್ಣಾ ಕೆ.ಎಂ, ಪ್ರೇಮಾ ಹಂದಿಗೋಳ, ಅಶೋಕ ಅಕ್ಕಿ ಇತರರು ಇದ್ದರು.