

ಗದಗ: ನಗರದ ಮೂಕ ಪ್ರಾಣಿ ಪಗಳಿಗೆ ಬಾಯಾರಿಕೆ ನೀಗಿಸಲು ನೀರಿನ ಸಿಸಿ ಟ್ಯಾಂಕಿನ ಜೊತೆಗೆ ಸಿಮೆಂಟಿನ ಚಿಕ್ಕ ದೋಣಿ ಅಳವಡಿಸಬೇಕೆಂದು ಕ್ರಾಂತಿ ಸೇನಾ ಜಿಲ್ಲಾ ಟಕದ ವತಿಯಿಂದ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳಿಗೆ ಶುಕ್ರವಾರ ಮನವಿ ನೀಡಲಾಯಿತು.
ಈ ವೇಳೆ ಕ್ರಾಂತಿ ಸೇನಾ ಜಿಲ್ಲಾ ಗೌರವ ಕಾರ್ಯದಶಿರ್ ಪ್ರವಿಣ ಹಬೀಬ ಮಾತನಾಡಿ, ಹಲವು ನೀರಿನ ಸಿಸಿ ಟ್ಯಾಂಕರಗಳು ಹಾಳು ಬಿದ್ದಿದೆ. ಈಗ ಬೇಸಿಗೆ ಕಾಲ ಹಿನ್ನೆಲೆಯಲ್ಲಿ ಜನರಿಗೆ ಸಾಕಷ್ಟು ನೀರಿನ ತೊಂದರೆ ಉಂಟಾಗಿದೆ. ಈ ಹಿನ್ನೆಲೆ ಈ ಕೂಡಲೇ ಹಾಳು ಬಿದ್ದಿರುವ ನೀರಿನ ಸಿಸಿ ಟ್ಯಾಂಕ್ ದುರಸ್ತಿಗೊಳಿಸಿ ಪುನರಾರಂಭ ಮಾಡಬೇಕು ಹಾಗೂ ಚಿಕ್ಕ ಸಿಮೆಂಟಿನ ದೋಣಿಗಳನ್ನು ನಗರಾದ್ಯಂತ ಅಳವಡಿಸಿ ಮೂಕ ಪ್ರಾಣಿ ಪಗಳಿಗೆ ನೀರಿನ ದಾಹ ನಿಗಿಸಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು. ಮನವಿ ಮಾಡಿದರು.
ಶಿವಕುಮಾರ್ ಕುಂಬಾರ್, ರಾಮು ಕಬಾಡಿ, ರಾಮು ನೀಲಗುಂದ್, ವಿನೋದ್, ರಾು ಪವಾರ್, ಮಲ್ಲೇಶ ಪತ್ತಾರ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.