ಗದಗ: ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಉತ್ತಮ - ಎಸ್.ವಿ.ಕೋರಗಲ್

23MDG4 GANIGA (1)
Published on

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಗಾಣಿಗ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಆದೇಶಿಸಿದ ಹಿನ್ನೆಲೆ ಮುಂಡರಗಿ ಪಟ್ಟಣದಲ್ಲಿ ತಾಲೂಕು ಗಾಣಿಗ ಸಮಾಜದವರು ಗಾಣದೇವತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಒಬ್ಬರಿಗೊಬ್ಬರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಎಸ್.ವಿ.ಕೋರಗಲ್ ಮಾತನಾಡಿ, ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಉತ್ತಮ ಕೆಲಸವಾಗಿದೆ. ಇದರಿಂದ ಸಮಾಜದವರು ಅನುಕೂಲ ಪಡೆದುಕೊಳ್ಳಬೇಕು. ಸರ್ಕಾರ ಇದಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಾಜದ ಮಕ್ಕಳಿಗೆ, ಎಲ್ಲರ ಏಳ್ಗೆಗೆ ಶ್ರಮಿಸಬೇಕು ಎಂದರು.
ಪುರಸಭೆ ಮಾಜಿ ಸದಸ್ಯ ವೀರೇಶ ಸಜ್ಜನರ, ಬಸವರಾಜ ಸಜ್ಜನರ, ಮಹೇಶ ಸಜ್ಜನರ, ಬಸವರಾಜಗೌಡ್ರ ಸಜ್ಜನಗೌಡ್ರ, ವಿ.ಸಜ್ಜನರ, ವೀರಣ್ಣ ಸಜ್ಜನರ, ಶಿವಕುಮಾರ ಸಜ್ಜನರ, ಗೌರಿಶಂಕರ ಸಜ್ಜನರ, ನಾಗರಾಜ ಸಜ್ಜನರ, ಮಲ್ಲೇಶ ಸಜ್ಜನರ, ಶ್ರೀಧರ ಸಜ್ಜನರ, ನಾಗಪ್ಪ ಇಟಗಿ, ಮುತ್ತಣ್ಣ ಸಜ್ಜನರ ಇತರರು ಇದ್ದರು.
23ಎಂಡಿಜಿ4 ಗಾಣಿಗ ಫೋಟೋ ಶೀರ್ಷಿಕೆ: ಮುಂಡರಗಿ ಪಟ್ಟಣದಲ್ಲಿ ಮಂಗಳವಾರ ಸರ್ಕಾರವು ಗಾಣಿಗ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದರಿಂದ ತಾಲೂಕುಗಾಣಿಗ ಸಮಾಜದವರು ಗಾಣದೇವತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರು. ಎಸ್.ವಿ.ಕೋರಗಲ್, ವೀರೇಶ ಸಜ್ಜನರ, ಬಸವರಾಜ ಸಜ್ಜನರ, ಮಹೇಶ ಸಜ್ಜನರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net