ಗದಗ: ಗಮನ ಸೆಳೆದ ಜನಪದ ಸಂಜೆ

23GDG10
Published on

ನಮ್ಮ ನಾಡಿನ ಕಲೆ, ಸಂಸ್ಕ್ರತಿ, ಸಂಪ್ರದಾಯಗಳನ್ನು ಬಿಂಬಿಸುವ ಗ್ರಾಮೀಣ ಭಾಗದ ಜನಪದ ಕಲೆಯನ್ನು ಉಳಿಸಿ ಬೆಳೆಸಲು ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಮಾಜ ಸೇವಕ ಷಣ್ಮುಖಗೌಡ ಅಯ್ಯನಗೌಡ್ರ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಂದ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಬಿನ್ನಾಳ ಬಸವೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಜಾನಪದ ಸಂಜೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿ ಅವರು ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲದಲ್ಲಿ ಟಿ.ವಿ ಮತ್ತು ಮೊಬೆಲ್​ ಸಂಸ್ಕ್ರತಿಯಿಂದ ಜನಪದ ಕಲೆಯು ಮರೆಯಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಎಲೆ ಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು.
ರೋಣ ತಾಲೂಕಿನ ಕೊತಬಾಳದ ಅರಣೋದಯ ಕಲಾ ತಂಡವು ಜನಪದ ಗೀತೆ, ತತ್ವಪದ, ಸುಗ್ಗಿ ಕುಣಿತ, ದೀಪ ನತ್ಯ, ಜೋಗುತಿ ನತ್ಯ, ಏಕಪಾತ್ರಭಿನಯ ಕಲೆಗಳನ್ನು ಜಿ.ಎಸ್​.ಪಾಟೀಲ, ರಾಮಕಷ್ಣ ಪೂಜಾರ,ರಾಚಯ್ಯ ಮೂದಳಮಠ, ಈರಣ್ಣ ಪಾಗದ ಅವರು ಪ್ರದರ್ಶನವು ಜನ ಮನ ಸೆಳೆದವು. ಚನ್ನಪ್ಪ ಹುಬ್ಬಳ್ಳಿ, ಬಸವರಾಜ ಬೇಲೇರಿ, ಮಲ್ಲಪ್ಪ ಕಲ್ಲೂರ, ಮಂಜುನಾಥ ಮಾರನಬಸರಿ, ರಾಮಣ್ಣ ನರಗುಂದ , ಗೋವಿಂದ ನೂಕಾಪೂರ, ಮಂಜುನಾಥ ಕೊಳಸೆ ಇದ್ದರು, ಶಿವು ಭಜಂತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net