ಗದಗ: ಕ್ಷುಲ್ಲಕ ಕಾರಣಕ್ಕೆ ಯವಕನೋರ್ವನ ಮೇಲೆ ಹಲ್ಲೆ

Published on

ಗದಗ: ಕ್ಷುಲ್ಲಕ ಕಾರಣಕ್ಕೆ ಯವಕನೋರ್ವನ ಮೇಲೆ 8 ಜನರ ತಂಡವೊಂದು ದಾಳಿ ಮಾಡಿರುವ ಆರೋಪ ಗದಗ ನಗರದ ಝಂಡಾ ಸರ್ಕಲ್ ನಲ್ಲಿ ಬುಧವಾರ ರಾತ್ರಿ ನಡೆದಿದೆ. ಆಟೋ ಚಾಲಕ ರಾಮಕೃಷ್ಣ ಹಂಡಿ ಹಲ್ಲೆಗೊಳಗಾದ ಯುವಕ. ಈತ ಗದಗ ತಾಲೂಕಿನ ಮಲ್ಲಸಮುದ್ರ ನಿವಾಸಿ ಎಂದು ತಿಳಿದು ಬಂದಿದೆ. ಸಿನಿಮಿಯ ರೀತಿಯಲ್ಲಿ ಯುವಕ ರಾಮಕೃಷ್ಣನನ್ನು ಅಡ್ಡಗಟ್ಟಿದ 8 ಜನರಿದ್ದ ಪುಂಡರ ಗುಂಪು ಆತನನ್ನು ಮನಬಂದಂತೆ ಥಳಿಸಿದ್ದಾರೆ. ಯುವಕರ ತಂಡ ಹರಟೆ ಹೊಡೆಯುತ್ತಾ ರಸ್ತೆಗೆ ಅಡ್ಡಲಾಗಿ ನಿಂತಿದ್ದರು. ಇದನ್ನು ಪ್ರಶ್ನೆ ಮಾಡಿದ್ದ ರಾಮಕೃಷ್ಣ, ರಸ್ತೆ ಬಿಟ್ಟು ಪಕ್ಕಕ್ಕೆ ನಿಲ್ಲಿ ಎಂದಿದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗಾಯಾಳು ರಾಮಕೃಷ್ಣ ಸದ್ಯ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net