ಗದಗ: ಕಾನೂನುಗಳು ಸರ್ವರಿಗೂ ಸಮಾನ : ನ್ಯಾಯಾಧೀಶ ಕೆ.ಗುರುಪ್ರಸಾದ

22GDG02
Published on

ಗದಗ: ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಕಾಯ್ದೆ ಕಾನೂನುಗಳು ಸರ್ವರಿಗೂ ಸಮಾನವಾಗಿದ್ದು ನಾವೆಲ್ಲರೂ ಕಾಯ್ದೆ&ಕಾನೂನಿನ ಚೌಕಟ್ಟಿಗೆ ಒಳಪಟ್ಟು ಕಾರ್ಯನಿರ್ವಹಿಸಬೇಕು ಎಂದು ಹಿರಿಯ ನ್ಯಾಯಾದೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಕೆ. ಗುರುಪ್ರಸಾದ ಹೇಳಿದರು.
ಗದಗ&ಬೆಟಗೇರಿಯ ಸೆಂಟರಿಂಗ್​ ಮತ್ತು ಬಾರ್​ ಬೆಂಡಿಂಗ್​ ಮೇಸ್ತ್ರೀಗಳ ಸಂವು ನಗರದ ರೋಟರಿ ಐಕೇರ್​ ಸೆಂಟರ್​ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂದ ಉದ್ಘಾಟನೆ, ಕಾಮಿರ್ಕರಿಗೆ ಕಾನೂನು ಅರಿವು, ಆರೋಗ್ಯ ಜಾಗೃತಿ, ಸಾಮಾಜಿಕ ನ್ಯಾಯ ದಿನಾಚರಣೆ, ಕಾಮಿರ್ಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಕಾಮಿರ್ಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ದೇಶದ ಆಥಿರ್ಕ ಅಭಿವೃದ್ದಿಯು ಆ ದೇಶದ ಕಾಮಿರ್ಕನ ಮೇಲೆ ಅವಲಂಭಿತವಾಗಿದೆ. ಕಠಿಣ ಪರಿಶ್ರಮವು ನಿರಂತರ ದುಡಿಮೆ, ಕಾಮಿರ್ಕ ವರ್ಗದಿಂದ ಸಾಧ್ಯ. ಹಣದ ವಹಿವಾಟುಗಳನ್ನು ನಿಭಾಯಿಸುವಾಗ, ಚೆಕ್​ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸಬೇಕು. ಏಕೆಂದರೆ ಚೆಕ್​&ಬೌನ್ಸ್​ ಪ್ರಕರಣಗಳು ಇತ್ತೀಚೆಗೆ ಅತಿಯಾಗಿ ಕಂಡು ಬರುತ್ತಿರುವುದು ವಿಷಾಧನೀಯ ಎಂದರು.
ಅಧ್ಯತೆ ವಹಿಸಿದ್ದ ಗದಗ ಉಪ ವಿಭಾಗದ ಕಾಮಿರ್ಕ ಅಧಿಕಾರಿ ಭೀಮರಾವ್​ ಜಾಧವ್​ ಮಾತನಾಡಿ, ಕಾಮಿರ್ಕರ ಹಿತಕಾಯಲು ಕಾಮಿರ್ಕ ಇಲಾಖೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದ್ವಿನಿಯೋಗ ಮಾಡಿಕೊಂಡು ಸುರತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಡಾ. ಗಣೇಶ ಕುಂದಾಪೂರ ಆರೋಗ್ಯ ಜಾಗೃತಿ ಕುರಿತು ಮಾತನಾಡಿ, ದುಶ್ಚಟಗಳನ್ನು ದೂರವಿಟ್ಟು ಆರೋಗ್ಯವನ್ನು ಕಾಯ್ದುಕೊಂಡು ಕುಟುಂಬದೊಂದಿಗೆ ಸಾಮರಸ್ಯ ಬದುಕು ನಡೆಸಬೇಕು. ಮೊದಲು ಸಣ್ಣದಾಗಿ ಪ್ರಾರಂಭವಾಗುವ ತಂಬಾಕು ಗುಟ್ಕಾದಂತಹ ದುಶ್ಚಟಗಳು ಕ್ರಮೇಣ ವ್ಯಸನಿಗಳನ್ನಾಗಿಸುತ್ತವೆ. ಕ್ಯಾನ್ಸರ್​ನಂತಹ ಮಾರಕ ರೋಗಗಳು ಆಕ್ರಮಿಸಿ ಬದುಕನ್ನು ದುರಂತದತ್ತ ತಳ್ಳುತ್ತವೆ ಎಂದರು.
ಕಾರ್ಯಕ್ರಮ ನಂತರ 20ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಸಿವಿಲ್​ ಇಂಜನೀಯರ್​ ಅಸೋಶಿಯೇಶನ್​ದ ಅಧ್ಯ ಶಂಕರ ಬಾಕಳೆ, ನಿಂಗಪ್ಪ ಕಟ್ಟಿಮನಿ, ಕವಿತಾ ದಂಡಿನ, ಬಸವರಾಜ ನೀರೇರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net