ಗದಗ: ಎಲೆಕ್ಷನ್​ ಮೂಡ್​ನಲ್ಲಿ ಜಿಲ್ಲಾಡಳಿತ

03GDG09A
Published on


ಗದಗ: ವಿಧಾನಸಭೆ ಚುನಾವಣೆಗೆ ಇನ್ನೇರೆಡು ತಿಂಗಳು ಬಾಕಿ ಇರುವಂತೆಯೇ ಜಿಲ್ಲಾಡಳಿತದ ಕಾರ್ಯವೈಖರಿ ಸಂರ್ಪೂಣ ಚುನಾವಣೆ ಮೂಡ್​ಗೆ ಹೊರಳಿದಂತೆ ಕಾಣುತ್ತಿದೆ. ಸ್ಪಧಿರ್ಗಳ, ಪಕ್ಷಗಳ ತಯಾರಿಯಂತೆಯೇ ಜಿಲ್ಲಾಡಳಿತವೂ ಕೂಡ ಚುನಾವಣೆ ತಯಾರಿ ನಡೆಸಿದೆ. ಮತಪಟ್ಟಿ ಸಿದ್ದಪಡಿಸುವುದರಿಂದ ಮತಗಟ್ಟೆ ದುರಸ್ತಿ, ಮೇಲ್ವಿಚಾರಣೆ, ಇವಿಎಂ ಪ್ರಾತ್ಯಕ್ಷತೆ, ಶಾಂತಿ ಸಭೆ, ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಮತಪಟ್ಟಿ ಪರಿಷ್ಕರಣೆ ಲೋಪದೋಷಗಳ ಕುರಿತು ಪಕ್ಷಗಳ ಅಹವಾಲು, ಮತದಾನ ಚೀಟಿಗೆ ಆಧಾರ ಜೋಡಣೆ ಕಾರ್ಯ ಹೀಗೆ ಚುನಾವಣೆಗೆ ಸಂಬಂಧಿಸಿದಂತಹ ಚಟುವಟಿಕೆಗಳಲ್ಲಿ ಜಿಲ್ಲಾಡಳಿತ ಸಂರ್ಪೂಣ ತೋಡಗಿಸಿಕೊಂಡಿದೆ.
ಚುನಾವಣೆ ಲಿತಾಂಶ ಹೊರಬೀಳುತ್ತಿದ್ದಂತೆ ಇವಿಎಂ ದೋಷಗಳನ್ನು ಹುಡುಕುವ ರಾಜಕೀಯ ಪಕ್ಷಗಳ ನಡೆಯಿಂದ ಚುನಾವಣಾ ಆಯೋಗ ಬೇಸತ್ತು ಹೋಗುತ್ತದೆ. ಹಾಗೂ ಮತದಾರರಿಗೂ ಮತದಾನ ಮಾಡುವ ವೇಳೆ ಗೊಂದಲಗಳು ಏರ್ಪಡುವ ಸನ್ನಿವೇಶಗಳು ಉದ್ಭವಿಸುವುದು ಸಾಮಾನ್ಯ. ಇಂತಹ ಆರೋಪ ಅನುಮಾನಗಳನ್ನು ದೂರು ಮಾಡುವ ಉದ್ದೇಶದಿಂದ ಈ ಬಾರಿ ಇವಿಎಂ ಪ್ರಾತ್ಯಕ್ಷತೆಗೆ ಜಿಲ್ಲಾಡಳಿತ ಅತೀ ಪ್ರಾಮುಖ್ಯತೆ ನೀಡಿರುವುದು ವಿಶೇಷ. ಸರ್ಕಾರಿ ಕಾರ್ಯಕ್ರಮಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಇವಿಎಂ ಪ್ರಾತ್ಯಕ್ಷತೆ ನಡೆಸುವ ಮೂಲಕ ಜಿಲ್ಲಾಡಳಿತ ಜಾಗೃತಿ ಮೂಡಿಸುತ್ತಿದೆ.
ಎಲೆಕ್ಟ್ರಾನಿಕ್​ ಮತಪಟ್ಟಿಯಲ್ಲಿ ಮತದಾನ ಮಾಡುವ ಬಗೆ ಕುರಿತು ಜ.27ರಿಂದಲೇ ಜಿಲ್ಲಾದ್ಯಂತ ಪ್ರಾತ್ಯಕ್ಷತೆ ಕಾರ್ಯಕ್ರಮ ಜಾರಿಗೊಳಿಸಿದ್ದು ವಿಶೇಷ. ಆಯಾ ತಾಲೂಕು ತಹಸೀಲ್ದಾರ ನೇತೃತ್ವದಲ್ಲಿ ಗ್ರಾಮಗಳಲ್ಲಿ, ಪ್ರತಿನಿತ್ಯ ಒಂದೊಂದು ಕಾಲೇಜಿನಲ್ಲಿ, ಜಿಲ್ಲಾಡಳಿತ ಕಚೇರಿಯಲ್ಲಿ ಇವಿಎಂ ಪ್ರಾತ್ಯಕ್ಷತೆ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಜಿಲ್ಲಾಡಳಿತ ಭವನದಲ್ಲಿ ಪ್ರಾತ್ಯಕ್ಷತೆಗೆ ಪ್ರತ್ಯೇಖ ಕೌಂಟರ್​ ತೆರೆಯಲಾಗಿದ್ದು ಕಚೇರಿಗೆ ಬರುವ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಸಮಿತಿಗಳ ರಚನೆ:
92 ಸಿಬ್ಬಂದಿಗಳ 45 ಸೆಕ್ಟರ್​ ಆಫೀಸರ್​ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ತಂಡಕ್ಕೂ 10 ರಿಂದ 11 ಮತಗಟ್ಟೆಗಳನ್ನು ನಿಯೋಜಿಸಿದ್ದು ಚುನಾವಣೆ ಮುಗಿಯುವವರೆಗೂ ಮತಗಟ್ಟೆಗಳ ಮೇಲುಸ್ತುವಾರಿ ಅವರದ್ದೇ ಆಗಿರುತ್ತದೆ. ಜನರಿಗೆ ಜಾಗೃತಿ, ಮತಗಟ್ಟೆಗಳ ಮಾಹಿತಿ, ಸ್ಥಳಿಯ ಗುಂಡಾ ವರ್ತನೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದು, ಮತಗಟ್ಟೆಗಳ ದುರಸ್ತಿ, ಕುಟಿಯುವ ನೀರು, ಶೌಚಾಲಯ ವಿದ್ಯುತ್​ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯಕ್ಕೆ ಅಣಿಗೊಳಿಸಲಾಗಿದೆ.

ನೀತಿ ಸಂಹಿತೆ ಸ್ಕಾಡ್​:
ನೀತಿ ಸಂಹಿತೆ ಉಲ್ಲಂನೆ ಮಾಹಿತಿ ಕಲೆಹಾಕಲು ಈಗಾಗಲೇ ತಂಡಗಳ ರಚನೆಯಾಗಿದೆ. ವಿಡಿಯೋ ಶೂಟಿಂಗ್​ ಟೀಮ್​, ವಿಡಿಯೋ ವಿವಿಂಗ್​ ಟೀಮ್​ಗಳು ಮೇಲುಸ್ತುವಾರಿ ವಹಿಸಲಿವೆ. ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಸಂಹಿತೆ ಉಲ್ಲಂಘಿಸಿ ಸಭೆ ಸಮಾರಂಭ ಜರುಗಿಸುವುದು, ಉಟೋಪಚಾರ ಮಾಡಿಸುವುದು, ಗ್ಟಿ್​ಗಳನ್ನು ವಿತರಿಸುವುದು ಹೀಗೆ ಅನೇಕ ಉಲ್ಲಂಂನೆಗಳ ಕುರಿತು ವಿಡಿಯೋ ಚಿತ್ರೀಕರಿಣ ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ವರದಿ ಒಪ್ಪಿಸುವ ಕಾರ್ಯ ಸ್ಕಾಡ್​ ಮಾಡಲಿದೆ.

ಬಾಕ್ಸ್​:
ಜಿಲ್ಲೆಯಲ್ಲಿ ಮತಗಟ್ಟೆಗಳು - 956
ಬಾಲೇಟ್​ ಯುನಿಟ್​ಗಳು - 1876
ಕಂಟ್ರೋಲ್​ ಯುನಿಟ್​ಗಳು - 1314
ವಿವಿ ಪ್ಯಾಟ್​ಗಳ ಸಂಖ್ಯೆ - 1404
ಕಂಟ್ರೋಲ್​ ಯುನಿಟ್​ ಬ್ಯಾಟರಿ ಬ್ಯಾಕ್​ಅಪ್​ & ನಿರಂತರ 72 ಗಂಟೆ
ಆಧಾರ ಜೋಡಣೆ ಕಾರ್ಯ - ಶೇ.87 ರ್ಪೂಣ
ಪುರುಷ ಮತದಾರರು - 427624
ಮಹಿಳಾ ಮತದಾರರು - 424817
ಇತರೆ ಮತದಾರರು - 57
ಒಟ್ಟಾರೆ ಮತದಾರರು - 852498(ಜನವರಿ ಅಂತ್ಯಕ್ಕೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net