

ಗದಗ: ಆಥಿರ್ಕ ಸ್ವಾಲಂಭನೆಗಾಗಿ ಮಹಿಳೆಯರು ಸ್ವಉದ್ಯೋಗ ಮಾಡಲೇಬೇಕಾದಂತಹ ಅನಿವಾರ್ಯತೆ ಇಂದಿನ ದಿನಗಳಲ್ಲಿ ಅವಶ್ಯವಾಕವಾಗಿದೆ. ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಮೂಲ ಉದ್ದೇಶವೇ ಸ್ವಾವಲಂಭಿ ಬದುಕು ಕಟ್ಟಿಕೊಡುವುದಾಗಿದೆ ಎಂದು ಉದ್ಯಮಿ ಪ್ರವಿಣಕುಮಾರ ನಿಶಾನಮಠ ಹೇಳಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಹಿಳಾ ಟಕದಿಂದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಉದ್ಯೋಗ ಅಭಿವೃದ್ಧಿಯಲ್ಲಿ, ಉದ್ಯಮಶೀಲತಾ ಅಭಿವೃದ್ಧಿಯಲ್ಲಿ ಅಳವಡಿಸಿಕೊಳ್ಳಬಹುದಾದ ಕೌಶಲ್ಯಗಳು, ಮಾರುಕಟ್ಟೆಯ ಜ್ಞಾನ, ಸುಧಾರಿಸಿದ ತಂತ್ರಜ್ಞಾನದ ಅಳವಡಿಕೆ, ಉದ್ಯಮವನ್ನು ವಿಸ್ತರಿಸುವ ಕುರಿತು ಸವಿಸ್ತಾರವಾಗಿ ತಿಳಿಸಿದರು. ಮಹಿಳೆಯರು ಹಲವು ೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಮಹಿಳೆಯರ ಕೌಶಲ್ಯಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುವ ಮೂಲಕ ಇಂತಹ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಉದ್ಯಮಿ ಶಿವಾನಂದ ಸೋಮಣ್ಣವರ ಮಾತನಾಡಿ, ದೇಶಪಾಂಡೆ ಪೌಂಡೇಶನ್ ಸ್ಥಾಪನೆ, ಅದರ ಅಂಗಸಂಸ್ಥೆಗಳ ಕಾರ್ಯವ್ಯಾಪ್ತಿ ಮತ್ತು ಮುಂಬರುವ ದಿನಗಳಲ್ಲಿ ಬರುವಂತಹ ಯೋಜನೆಗಳ ಕುರಿತು ಪ್ರಸ್ತಾಪಿಸಿದರು. ಉದ್ಯಮಶೀಲತಾ ಅಭಿವೃದ್ಧಿಯ ತರಬೇತಿಯ ಕುರಿತು ಪುಷ್ಪಾ ನಾಯ್ಕರ ಮಾತನಾಡಿದರು.
ಪ್ರಭಾ ಎಸ್, ಜಯಶ್ರೀ ಪಾಟೀಲ, ಸುವರ್ಣಾ ಮದರಿಮಠ, ವೀಣಾ ಪೊತ್ನೀಸ ಇತರರು ಇದ್ದರು.