ಗದಗ: ಆಧ್ಯಾತ್ಮ ಚಿಂತನೆಯಿಂದ ಜೀವನ ಸಾರ್ಥಕ

25 srt-1
Published on

ಗದಗ: ಐಶಾರಾಮಿ ಜೀವನ ಕಳೆಯುವದರಿಂದ ಮನುಷ್ಯನ ಬದುಕಿಗೆ ಅರ್ಥ ಬರಲಾರದು. ಜೀವನ್ಮುಕ್ತಿ ಹೊಂದಲು ಶುದ್ದ ಮನಸ್ಸಿನಿಂದ ಭಗವಂತನ ಆರಾಧನೆ ಮಾಡಿದ್ದಲ್ಲಿ ಆತನ ದರ್ಶನ ಭಾಗ್ಯ ಲಭ್ಯ. ಅದಕ್ಕೆ ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಸಂತ ನಾರಾಯಣ ಭೀಸೆ ಹೇಳಿದರು.
ಶಿರಹಟ್ಟಿ ಪಟ್ಟಣದ ಸತ್ಸಂಗ ಪರಿವಾರದಿಂದ ವೆಂಕಟೇಶ ಮಾಂಡ್ರೆ ಅವರ ಮಹಾಮನೆಯಲ್ಲಿ ಶುಕ್ರವಾರ ಜರುಗಿದ ವಾಸ್ಕರ ಮಹಾರಾಜರ ಪುಣ್ಯತಿಥಿ ಮತ್ತು ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ಕೀರ್ತನೆ ಉಪದೇಶ ನೀಡಿದರು.
ನಿರಾಕಾರ, ಅಮೂರ್ತ ರೂಪಿಯಾಗಿರುವ ದೇವರನ್ನು ಕಲ್ಲು,ಮಣ್ಣುಗಳ ಗುಡಿಯೊಳಗೆ ಹುಡುಕುವ ಪ್ರಯತ್ನ ಮಾಡಿದರೆ ಅರ್ಥವಿಲ್ಲ.ನಮಗೆ ಭವಸಾಗರದಿಂದ ಪಾರು ಮಾಡುವ ಶಕ್ತಿ ಭಗವಂತನಿಗಿದೆ. ಹೀಗಾಗಿ ಸಂತ,ಶರಣರು, ದಾಸ ಶ್ರೇಷ್ಟರೆಲ್ಲರೂ ಸತ್ಯ, ಶುದ್ದ ಕಾಯಕ ಮತ್ತು ಪರಾಕಾಷ್ಠತೆಯಿಂದ ಕೂಡಿದ ಭಕ್ತಿ, ಶ್ರದ್ಧೆಯಿಂದ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಮನುಕುಲಕ್ಕೆ ಧರ್ಮಪಾಲನೆ ಮತ್ತು ಆಧ್ಯಾತ್ಮ ಚಿಂತನೆಯಲ್ಲಿ ಸಾಗಲು ನೀಡಿದ ತತ್ವಸಂದೇಶ ಪಾಲಿಸಬೇಕಾಗ ಅಗತ್ಯವಿದೆ ಎಂದರು.
ಸತ್ಸಂಗದ ಸಂಚಾಲಕ ಪ್ರಕಾಶ ನರಗುಂದೆ ಮಾತನಾಡಿ, ಇಂಥ ಆಧ್ಯಾತ್ಮಿಕ, ಧಾರ್ಮಿಕ ಸತ್‍ಚಿಂತನೆ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮೋಪದೇಶದ ಒಳ್ಳೆಯ ನುಡಿಗಳನ್ನು ಆಲಿಸಿದಾಗ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಸರ್ವಾಂತರಯಾಮಿಯಾದ ದೇವರನ್ನು ನಮ್ಮಲ್ಲೇ ಹುಡುಕುವ ಪ್ರಯತ್ನ ಮಾಡಿದಾಗ ಬದುಕು ಪಾವನವಾಗುತ್ತದೆ ಎಂದರು.
ಸತೀಶ ಮಾಂಡ್ರೆ, ಸೋಪಾನ ತಾಂದಳೆ, ಪಕ್ಕೀರಪ್ಪ ಗಣಾಚಾರಿ, ಆನಂದ ಇಂಗಳೆ, ಬಾಲಕೃಷ್ಣ ಮಾಂಡ್ರೆ, ಪ್ರಹ್ಲಾದ ಮಾಂಡ್ರೆ, ದತ್ತಾತ್ರಯ ಬೇಂದ್ರೆ, ಏಕನಾಥ ಭೀಸೆ, ಜ್ಞಾನೋಬಾ ಬೋಮಲೆ, ಸಿದ್ದಪ್ಪ ಸೋಸರಡ್ಡಿ, ವೆಂಕಟೇಶ ಬೇಂದ್ರೆ, ಗೋಪಾಲ ಬೇಂದ್ರೆ, ಶಿವಲಿಂಗ ಅಡರಕಟ್ಟಿ, ನಟರಾಜ ರಾನಡೆ, ಸುಧಾ ಮುಧೋಳಕರ, ಉಮಾಬಾಯಿ ಮಾಂಡ್ರೆ, ಲಕ್ಷ್ಮೀ ಭೀಸೆ, ಭೂಮಿಕಾ ಮಾಂಡ್ರೆ, ಪುಷ್ಪಾ ಭೀಸೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net