

ಗದಗ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲೆಯ 300ಕ್ಕೂ ಹೆಚ್ಚು ಅಕ್ಷರ ದಾಸೋಹ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಅಕ್ಷರ ದಾಸೋಹ ಜಿಲ್ಲಾ ಸಮಿತಿ ಅಧ್ಯೆ ಯಶೋಧಾ ಬೆಟಗೇರಿ ಮಾತನಾಡಿ, ಆಡಳಿತ ಸುಧಾರಣೆ ಆಯೋಗ 6500 ಶಾಲೆಗಳನ್ನು ವಿಲೀನಗೊಳಿಸುವ ಆದೇಶ ಹೊರಡಿಸಿದ್ದರಿಂದ 6500 ಕಾರ್ಯಕರ್ತರನ್ನು ಹುದ್ದೆಯಿಂದ ತೆಗೆಯುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ನಿವೃತ್ತಿ ಆದವರಿಗೆ, ಹುದ್ದೆಯಿಂದ ತೆಗೆದವರಿಗೆ ಯಾವುದೇ ಪರಿಹಾರ ನೀಡದೇ ಇಂತಹ ಕ್ರಮ ಕೈಗೊಳ್ಳುತ್ತಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದಶಿರ್ ಮಹೇಶ ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರ ಜನವರಿ ತಿಂಗಳಿಂದ 1000 ರೂ. ಅರಿಯರ್ಸ್ ವಿತರಿಸಬೇಕು. ನಿವೃತ್ತಿ ಹೊಂದಿದ ಕೆಲಸಗಾರ ಕುಟುಂಬಸ್ಥರಿಗೆ ಕೆಲಸ ಮತ್ತು ಅಪಘಾತದಲ್ಲಿ ಮರಣಹೊಂದಿದ ಕಾರ್ಯಕರ್ತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಗಿರಿಜಮ್ಮ ಹಿರೇಮಠ, ನೀಲವ್ವ ಪಾಟೀಲ, ಗಂಗಮ್ಮ ಹೆಂಬಲಿ, ಅಶ್ವಿನಿ ಉಳ್ಳಾಗಡ್ಡಿ, ಜಯಶ್ರಿ ಹಿರೇಗೌಡರ, ಪ್ರೇಮಾ ಪೂಜಾರ, ನಾಗರತ್ನ ಬಡಿಗೆನ್ನವರ, ತಿಲಕವಾಡ, ಗೀತಾ ಅಸುಂಡಿ ಹಾಗೂ ಜಿಲ್ಲೆಯ ತಾಲೂಕುಗಳಿಂದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೋಟ್:
ಉದ್ಯೋಗ ಭದ್ರತೆ, ಪರಿಹಾರ ವಿತರಣೆಗೆ ಹಲವು ದಿನಗಳಿಂದ ಹಿಂದೆಯೇ ಮನವಿ ಸಲ್ಲಿಸಿದರು, ಜಿಲ್ಲಾಡಳಿಯ ಮನವಿಗೆ ಸ್ಪಂಧಿಸುತ್ತಿಲ್ಲ. ದಾಸೋಹ ಕಾರ್ಯಕರ್ತರ ಬಗ್ಗೆಯೂ ಜಿಲ್ಲಾಡಳಿತ ಕಾಳಜಿ ವಹಿಸಬೇಕು.
- ಯಶೋಧಾ ಬಡಿಗೇರಿ. ಜಿಲ್ಲಾಧ್ಯಕ್ಷರು, ಅಕ್ಷರ ದಾಸೋಹ ಜಿಲ್ಲಾ ಸಮಿತಿ