

ಬೀದರ್: ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಮಾರ್ಗಸೂಚಿ ಅನುಸಾರವೇ ಜಿಲ್ಲೆಯಲ್ಲಿ ಗಣೇಶ ಉತ್ಸವ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕೋರಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಗಣೇಶ ಮಹಾಮಂಡಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕರೊನಾ ಸೋಂಕು ಅಧಿಕವಾಗುತ್ತಿರುವ ಕಾರಣ ಗಣೇಶೋತ್ಸವ ಸರಳ, ಭಕ್ತಿಪೂರ್ವಕವಾಗಿ ನಡೆಸಬೇಕಿದೆ. ಎಲ್ಲರೂ ನಿಯಮ ಪಾಲನೆ ಮೂಲಕ ಸಂದಿಗ್ಧ ಸ್ಥಿತಿಯಿಂದ ಸಮಾಜವನ್ನು ಕಾಪಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಧರ್ಮದ ವಿರುದ್ಧ ಮಾಡಿರುವ ಮಾರ್ಗಸೂಚಿ ಎಂದು ಯಾರೂ ತಪ್ಪಾಗಿ ಭಾವಿಸಬಾರದು. ನಮ್ಮೆಲ್ಲರ ಆರೋಗ್ಯ ಹಿತೃದೃಷ್ಟಿಯಿಂದ ಮಾಡಿದ್ದು ಎಂದು ತಿಳಿಯಬೇಕು. ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಗಣೇಶೋತ್ಸವ ವೇಳೆ ಸುರಕ್ಷತೆಗೆ ಒತ್ತು ಕೊಡಬೇಕು. ಹಬ್ಬ ಆಚರಣೆ ವೇಳೆ ಗುಂಪು ಸೇರಿದರೆ ಒಬ್ಬರಿಂದ ಎಲ್ಲರಿಗೂ ಕರೊನಾ ಮಹಾಮಾರಿ ಹರಡುತ್ತದೆ ಎಂಬುದನ್ನು ಅರಿಯಬೇಕು. ದೈಹಿಕ ಅಂತರ ಪಾಲಿಸಬೇಕು ಎಂದು ಸೂಚಿಸಿದರು.
ಎಸ್ಪಿ ನಾಗೇಶ್ ಡಿ.ಎಲ್. ಮಾತನಾಡಿ, ಕೋವಿಡ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಸರಳ ಆಚರಣೆ ನಡೆಸಿ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾಡಳಿತದ ಮಾರ್ಗಸೂಚಿ ಪ್ರಕಾರ ಗಣೇಶೋತ್ಸವಕ್ಕೆ ಸಹಕರಿಸುವುದಾಗಿ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಗಾದಗಿ, ಪ್ರಧಾನ ಕಾರ್ಯದಶರ್ಿ ಬಾಬು ವಾಲಿ, ಪದಾಧಿಕಾರಿಗಳಾದ ಸೂರ್ಯಕಾಂತ ಶೆಟಕಾರ, ಡಾ.ರಜನೀಶ್ ವಾಲಿ, ವೀರಶೆಟ್ಟಿ, ವೆಂಕಟೇಶ ಮೋರ್ಖಂಡಿ ಇತರರು ತಿಳಿಸಿದರು.
ದೊಡ್ಡ ದೊಡ್ಡ ಗಾತ್ರದ ಗಣೇಶ ಮೂತರ್ಿ ಹೈದರಾಬಾದ್ ಮತ್ತು ಇತರ ಕಡೆಗಳಿಂದ ಜಿಲ್ಲೆಗೆ ತರುವುದನ್ನು ಜಿಲ್ಲಾಡಳಿತ ಬ್ಯಾನ್ ಮಾಡಬೇಕು. ಇನ್ನುಳಿದ ಎಲ್ಲ ನಿಯಮಗಳ ಪಾಲನೆಗೆ ಕ್ರಮ ವಹಿಸಬೇಕು ಎಂದು ಗಣೇಶ ಮಹಾಮಂಡಳವು ಜಿಲ್ಲಾಡಳಿತಕ್ಕೆ ಸಲಹೆ ನೀಡಿತು.