

ಕಳಸ: ತಾಲೂಕಿನ ಶ್ರೀ ಬಾಲಗಣಪತಿ ಸೇವಾ ಸಮಿತಿ ಮತ್ತು ಆದರ್ಶ ಯುವಕ ಸಂಘದಿಂದ ಆಯೋಜಿಸಿದ್ದ 41ನೇ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವದಲ್ಲಿ ದಿನವೂ ವಿಶೇಷ ಪೂಜೆ ಸಲ್ಲಿಸಿ ಶುಕ್ರವಾರ ವಿಸರ್ಜನೆಯೊಂದಿಗೆ ತೆರೆ ಕಂಡಿತು.
ವಿಸರ್ಜನಾ ಮೆರವಣಿಗೆ ಕಳಸ ರಥಬೀದಿಯಲ್ಲಿ ಸಾಗಿ ಭದ್ರಾ ನದಿಯ ಕೋಟೆಹೊಳೆ ಕೋಟಿ ತೀರ್ಥದಲ್ಲಿ ಜಲಸ್ತಂಭನ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಆಕರ್ಷಕ ಹುಲಿಕುಣಿತ, ನಾಸಿಕ್ ಡೋಲ್, ಸಿಡಿಮದ್ದು ಪ್ರದರ್ಶನ ಮೆರುಗು ನೀಡಿದವು.
ಆಹ್ವಾನಿತ ತಂಡಗಳಿಗೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹದಿನೈದಕ್ಕೂ ಹೆಚ್ಚು ತಂಡಗಳ ಪೈಕಿ ಗ್ರೂಪ್ ಡಾನ್ಸ್ ವಿಭಾಗದಲ್ಲಿ ಡಸ್ಟಿನಿ ಡ್ಯಾನ್ಸ್ ಸ್ಕೂಲ್ ಕೊಪ್ಪ(ಪ್ರ), ಆರ್ಯ ಶಿವ ಸ್ಕೂಲ್ ಚಿಕ್ಕಮಗಳೂರು(ದ್ವಿ), ಈಗಲ್ ಐಸ್ ಕಳಸ(ತೃ).ಪುನೀತ್ ರಾಜ್ ಹಿಟ್ಸ್ ವಿಭಾಗದಲ್ಲಿ ಸಾಂಗ್ಸ್ ಡ್ಯಾನ್ಸ್ ಸ್ಕೂಲ್ ಚಿಕ್ಕಮಗಳೂರು(ಪ್ರ), ನಿತ್ಯಾ ಕಲಾ ಕ್ಷೇತ್ರ ಮೂಡಿಗೆರೆ(ದ್ವಿ), ಪವರ್ ಡ್ಯಾನ್ಸ್ ಸ್ಕೂಲ್ ಹಳೇಬೀಡು(ತೃ). ಸೋಲೋ ವಿಭಾಗದಲ್ಲಿ ಡಸ್ಟಿನಿ ಡ್ಯಾನ್ಸ್ ಸ್ಕೂಲ್ (ಪ್ರ), ಪವರ್ ಡ್ಯಾನ್ಸ್ ಸ್ಕೂಲ್ ಹಳೇಬೀಡು(ದ್ವಿ), ಪವರ್ ಡ್ಯಾನ್ಸ್ ಸ್ಕೂಲ್ ಹಳೇಬೀಡು(ತೃ) ಸ್ಥಾನ ಪಡೆದುಕೊಂಡವು.
ಸಮಿತಿ ಅಧ್ಯಕ್ಷ ವಸಂತ, ಗೌರವಾಧ್ಯಕ್ಷ ವೆಂಕಟೇಶ್, ಕಾರ್ಯಾಧ್ಯಕ್ಷ ಕಿಶೋರ್ ಭಂಡಾರಿ, ರತ್ನಾಕರ ಪೂಜಾರಿ, ಕಾರ್ಯದರ್ಶಿ ಅಜಿತ್, ರವಿ ರಾವ್, ಹರಿದಾಸ್‌ಕಿರಣ್ ಮೋನಿಸ್, ಅಜಯ್, ಗಜೇಂದ್ರ ಇತರರಿದ್ದರು.