ಗಣೇಶೋತ್ಸವ ಪೆಂಡಾಲ್ ನಿರ್ಮಾಣಕ್ಕೆ ಚಾಲನೆ

bhr ganesha
ಬಾಳೆಹೊನ್ನೂರಿನ ವಿದ್ಯಾಗಣಪತಿ ಸೇವಾ ಸಮಿತಿಯ ಗಣೇಶೋತ್ಸವದ ಪೆಂಡಾಲ್ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸುರೇಂದ್ರ, ತ್ರಿವಿಕ್ರಮ ಭಟ್, ಸುಧಾಕರ್, ಪ್ರಕಾಶ್ ಭಟ್, ಗೋವಿಂದರಾಜು ಇತರರಿದ್ದರು.
Published on

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ಆ.27ರಿಂದ ಆಯೋಜಿಸಿರುವ 67ನೇ ವರ್ಷದ ಗಣೇಶೋತ್ಸವ ಪೆಂಡಾಲ್ ನಿರ್ಮಾಣಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಪೆಂಡಾಲ್ ನಿರ್ಮಾಣದ ಪೂಜಾ ಕಾರ್ಯದಲ್ಲಿ ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ ಮಾತನಾಡಿ, ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎರಡು ಸಾವಿರಕ್ಕೂ ಅಧಿಕ ಭಕ್ತರು ಒಮ್ಮೆಲೆ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮೇಲಣಗವಿಯ ವೀರಸಿಂಸ್ಥಾನ ಮಠ ಶಿವಗಂಗಾ ಕ್ಷೇತ್ರದ ಡಾ. ಮಲಯಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಂತಿಮ ದಿನ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ವಿದ್ಯಾಗಣಪತಿ ವಿಗ್ರಹ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು. ಸಮಿತಿ ಕಾರ್ಯದರ್ಶಿ ಸುರೇಂದ್ರ, ಖಜಾಂಚಿ ತ್ರಿವಿಕ್ರಮ ಭಟ್, ಸುಧಾಕರ್, ಪೆಂಡಾಲ್ ನಿರ್ಮಾಣದ ಉಸ್ತುವಾರಿ ಗೋವಿಂದರಾಜು, ಭರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net