ಗಣೇಶೋತ್ಸವದಲ್ಲಿ ಸತ್ಯನಾರಾಯಣ ಪೂಜೆ

15bhr 3 web
Published on

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿರುವ ಗಣಪತಿ ಸನ್ನಿಧಿಯಲ್ಲಿ ಗುರುವಾರ ಅರ್ಚಕ ಪ್ರಕಾಶ್ ಭಟ್ ನೇತೃತ್ವದಲ್ಲಿ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆ ನೆರವೇರಿತು. ಗಣೇಶ ವಿಗ್ರಹಕ್ಕೆ ಮಹಾ ಮಂಗಳಾರತಿ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಿ ಅನ್ನಸಂತರ್ಪಣೆ ಮಾಡಲಾಯಿತು. ಗಣಪತಿ ಸಭಾಂಗಣದಲ್ಲಿ ಉಡುಪಿಯ ಕಲಾವಿದರಿಂದ ಭಜನೆ, ಭಕ್ತಿ ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿದ್ಯಾಗಣಪತಿಯ ವಿಸರ್ಜನಾ ಮಹೋತ್ಸವ ಸೆ.16ರಂದು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ದಾವಣಗೆರೆಯ ಭಾರತಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12ರಿಂದ ಅನ್ನ ಸಂತರ್ಪಣೆ ನಡೆಯಲಿದ್ದು 10 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ.ಕೆ.ಮಧುಸೂದನ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಪಟ್ಟಣದ ಚಿಕ್ಕಮಗಳೂರು ರಸ್ತೆಯ ರೋಟರಿ ವೃತ್ತದಿಂದ ಕೊಪ್ಪ ರಸ್ತೆಯ ರಂಭಾಪುರಿ ಪೆಟ್ರೋಲ್ ಬಂಕ್​ವರೆಗೆ ಸೆ.ಸಂಪೂರ್ಣವಾಗಿ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಆದೇಶಿಸಿದ್ದಾರೆ. ಶುಕ್ರವಾರ ಬೆಳಗ್ಗೆ 16ರಂದು ಬೆಳಗ್ಗೆ 6ರಿಂದ ಸೆ.17ರ ಬೆಳಗ್ಗೆ 6ರವರೆಗೆ ಬಾಳೆಹೊನ್ನೂರು ಪಟ್ಟಣ ಸೇರಿದಂತೆ 15 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗಣಪತಿ ವಿಗ್ರಹ ವಿಸರ್ಜನಾ ಮಹೋತ್ಸವ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಪೊಲೀಸರು ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆಸಿದರು. ಎನ್.ಆರ್.ಪುರ ರಸ್ತೆಯ ಕಡ್ಲೇಮಕ್ಕಿಯ ನಾರಾಯಣ ಗುರು ಸಮುದಾಯ ಭವನದಿಂದ ಹೊರಟ ಪೊಲೀಸರ ಪಥ ಸಂಚಲನ ಜೇಸಿ ವೃತ್ತದ ಮೂಲಕ ಚರ್ಚ ರಸ್ತೆಯಲ್ಲಿ ಗಣಪತಿ ಪೆಂಡಾಲ್ ಮೂಲಕ ಸಾಗಿ ಬಸ್ ನಿಲ್ದಾಣ ಹಾಗೂ ರೋಟರಿ ವೃತ್ತದವರೆಗೆ ತೆರಳಿ ಪೊಲೀಸ್ ಠಾಣೆ ಬಳಿ ಸಮಾಪನಗೊಂಡಿತು. ಕೆಎಸ್​ಆರ್​ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ಪಡೆ ಸೇರಿದಂತೆ 400ಕ್ಕೂ ಅಧಿಕ ಪೊಲೀಸರು ಪಾಲ್ಗೊಂಡಿದ್ದರು. ಕೊಪ್ಪ ಎಎಸ್ಪಿ ಗುಂಜನ್ ಆರ್ಯ, ಎನ್.ಆರ್.ಪುರ ಸಿಪಿಐ ವಸಂತ ಶಂಕರ್ ಭಾಗವತ್, ಪಿಸೈ ನಿತ್ಯಾನಂದಗೌಡ, ಜಿಲ್ಲೆಯ 20ಕ್ಕೂ ಅಧಿಕ ಠಾಣೆಯ ಪಿಎಸೈಗಳು ಪಥ ಸಂಚಲನದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net