

ಹುಬ್ಬಳ್ಳಿ: ಇಲ್ಲಿನ ಗಣೇಶಪೇಟ ಚಿಟಗುಪ್ಪಿ ಚಾಳ ನಿವಾಸಿ 23 ವರ್ಷದ ಯುವತಿ ಪ್ರೀತಿ ಪದ್ಮನಾಭನ್ ನಾಪತ್ತೆಯಾಗಿರುವ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಡಿ.13ರಂದು ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋದವಳು ಈವರೆಗೆ ವಾಪಸ್ ಬಂದಿಲ್ಲ. ಪ್ರೀತಿ 5.2 ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ತೆಳ್ಳನೆ ಮೈಕಟ್ಟು, ಉದ್ದನೆಯ ಮುಖ ಹೊಂದಿದ್ದು, ಈಕೆಯ ಸುಳಿವು ಸಿಕ್ಕಲ್ಲಿ ಶಹರ ಠಾಣೆ 94808 02021ಗೆ ಸಂರ್ಪಸಬಹುದು.</