ಗಣೇಶ ಹಬ್ಬ ಆಚರಣೆ ಸೌಹಾರ್ದವಾಗಿರಲಿ

07 TKE 3 web
Published on

ತರೀಕೆರೆ: ದೇಶದ ಐಕ್ಯತೆ ದೃಷ್ಟಿಯಿಂದ ಗಣೇಶ ಹಬ್ಬವನ್ನು ಸೌಹಾರ್ದವಾಗಿ ಆಚರಿಸಬೇಕು ಎಂದು ಹಿಂದು ಮಹಾಸಭಾ ಗಣಪತಿ ಸಮಿತಿ ಗೌರವಾಧ್ಯಕ್ಷ ಕೆ.ಎಚ್.ಮಹೇಂದ್ರ ಹೇಳಿದರು. ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೂ ಮುನ್ನ ಬುಧವಾರ ಮುಸ್ಲಿಂ ಸಮುದಾಯದವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪೊಲೀಸ್ ರಕ್ಷಣೆ ಇಲ್ಲದೆ ಗಣೇಶ ಹಬ್ಬ ಆಚರಿಸುವ ವ್ಯವಸ್ಥೆಯಾಗಬೇಕಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ, ನಾಡಿನಲ್ಲಿ ಶಾಂತಿ ನೆಲೆಸಿ ಬಲಿಷ್ಟ ಭಾರತ ನಿರ್ವಣಕ್ಕಾಗಿ ಹಿಂದು-ಮುಸ್ಲಿಮರು ವಿವಿಧ ಹಬ್ಬಗಳನ್ನು ಒಟ್ಟಾಗಿ ಆಚರಿಸಬೇಕು ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಹಿಂದು ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷ ಮಂಜು, ಆದಿಲ್ ಪಾಷಾ, ರಘು, ಶ್ರೇಯಸ್, ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net