ಗಣೇಶ ವಿಸರ್ಜನೆಗೆ 30 ಕಡೆಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ವ್ಯವಸ್ಥೆ

Screenshot_2023-09-16-08-50-07-463_com.android.chrome.jpg
Published on

ದಾವಣಗೆರೆ : ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ, ಸೆ. 18, 20 ಮತ್ತು 22 ರಂದು ನಗರದ 30 ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು. ಜಲ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತೆ ಎನ್. ರೇಣುಕಾ ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸಲಾಗುವ ಸ್ಥಳಗಳ ವಿವರ ಇಂತಿದೆ. ಹಗೆದಿಬ್ಬ ವೃತ್ತ, ರಾಜಕುಮಾರ ಶಾಲೆ ಹತ್ತಿರ ಕುರುಬರ ಕೇರಿ, ಕೊಂಡಜ್ಜಿ ರಸ್ತೆ (ಶಿಬಾರ) ಮೈಲಾರಲಿಂಗೇಶ್ವರ ದೇವಸ್ಥಾನ, ದೇವರಾಜ ಅರಸ್ ಬಡಾವಣೆ ಕೋರ್ಟ್ ಹಿಂಭಾಗ, ದುಗಾಂಬಿಕ ದೇವಸ್ಥಾನ (ಶಿವಾಜಿ ವೃತ್ತ), ಹೊಂಡದ ವೃತ್ತ, ಬೇತೂರು ರಸ್ತೆ ವೆಂಕಟೇಶ್ವರ ವೃತ್ತ, ಮಹಾರಾಜಪೇಟೆ ವಿಠಲಮಂದಿರ, ಚೌಕಿಪೇಟೆಯ ಹಾಸಬಾವಿ ವೃತ್ತ, ವಿನೋಬನಗರ 3ನೇ ಮುಖ್ಯ ರಸ್ತೆ, ರಾಮ್ ಆ್ಯಂಡ್ ಕೋ ವೃತ್ತ, ಕಾಯಿಪೇಟೆಯ ಬಸವೇಶ್ವರ ವೃತ್ತ, ಬಂಬೂ ಬಜಾರ್ (ಗಣೇಶ ಹೋಟೆಲ್ ಬಳಿ), ಎಸ್ಎಸ್ ಲೇಔಟ್ ಬನ್ನಿಮರದ ಹತ್ತಿರ ರಿಂಗ್ ರಸ್ತೆ, ಎಂಸಿಸಿ ಎ ಬ್ಲಾಕ್ ಬಕ್ಕೇಶ್ವರ ಸ್ಕೂಲ್ ಮುಂಭಾಗ, ಜಯದೇವ ವೃತ್ತ, ಡಿಸಿಎಂ ಲೇಔಟ್ ವೃತ್ತ, ಆವರಗೆರೆಯ ಸರ್ಕಾರಿ ಶಾಲೆ, ಸರಸ್ವತಿ ಬಡಾವಣೆ ಪಂಚಮುಖಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ ಸಂಜೀವಿನಿ ಆಂಜನೇಯ ದೇವಸ್ಥಾನ, ನಿಟ್ಟುವಳ್ಳಿ ದುಗಾಂಬಿಕ ದೇವಸ್ಥಾನ, ಎಚ್ ಕೆಆರ್ ಸರ್ಕಲ್, ಡಾಂಗೆ ಪಾರ್ಕ್, ಕುವೆಂಪು ನಗರದ ಬಾಪೂಜಿ ಶಾಲೆ ಹತ್ತಿರ, ಗುಂಡಿ ಮಹದೇವಪ್ಪ ಸರ್ಕಲ್, ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನ, ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನ, ಶಾಮನೂರಿನ ಶ್ರೀರಾಮ ಮಂದಿರ, ಹಳೇ ಕುಂದುವಾಡ ಆಂಜನೇಯ ದೇವಸ್ಥಾನ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net