ಗಣೇಶ ವಿಸರ್ಜನೆ

kdr ganapaa
ಕಡೂರು ಸಾರ್ವಜನಿಕ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. ಕೆ.ಜಿ.ಸೋಮಶೇಖರ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಎನ್.ಎಚ್.ನಂಜುಂಡಸ್ವಾಮಿ. ಕೆ.ಜಿ.ಲೋಕೇಶ್ವರ್, ಕಷ್ಣಮೂರ್ತಿ ಇತರರಿದ್ದರು.
Published on

ಕಡೂರು: ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ 38ನೇ ವರ್ಷದ ಸಾರ್ವಜನಿಕ ಶ್ರೀ ಪ್ರಸನ್ನ ಗಣಪತಿಯನ್ನು ಮಂಗಳವಾರ ಸಂಜೆ ಕೆ.ಹೊಸಹಳ್ಳಿ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಯಿತು.

ಸೋಮವಾರ ರಾತ್ರಿ ಮಹಾಮಂಗಳಾರತಿಯೊಂದಿಗೆ ಶ್ರೀ ಪ್ರಸನ್ನ ಗಣಪತಿಯನ್ನು ವಿಶೇಷ ಅಲಂಕತ ವಾಹನದಲ್ಲಿ ಕೂರಿಸಿ ಪಟ್ಟಣದ ಮುಖ್ಯ ಬೀದಿಗಳಾದ ಛತ್ರದಬೀದಿ, ದೊಡ್ಡಪೇಟೆ ಮೂಲಕ ಅಂಬೇಡ್ಕರ್ ನಗರ, ರಾ.ಹೆ.206, ಜೈನ್ ಟೆಂಪಲ್ ರಸ್ತೆ ಮೂಲಕ ಕೆ.ಎಂ. ರಸ್ತೆ, ಸುಭಾಷ್ ನಗರದಿಂದ ಎಮ್ಮೆದೊಡ್ಡಿ ರಸ್ತೆಯ ಮೂಲಕ ಕೆ.ಹೊಸಹಳ್ಳಿಗೆ ತೆರಳಿ ಕಲ್ಯಾಣಿಯಲ್ಲಿ ಕ್ರೇನ್‌ನಿಂದ ವಿಸರ್ಜಿಲಾಯಿತು.

ಪೂಜಾ ಕುಣಿತ, ಕೀಲುಕುದುರೆ, ಚಂಡೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಕಡೂರು ಪಿಎಸ್‌ಐ ಸಚೇತ್‌ಕುಮಾರ್ ನೇತತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಿದ್ದರು. ಸಮಿತಿ ಅಧ್ಯಕ್ಷ ಸೋಮಶೇಖರ್, ಪುರಸಭೆ ಸದಸ್ಯ ಈರಳ್ಳಿ ರಮೇಶ್, ಪದಾಧಿಕಾರಿಗಳಾದ ಕೆ.ಜಿ.ಶ್ರೀನಿವಾಸ್‌ಮೂರ್ತಿ, ಎನ್.ಎಚ್. ನಂಜುಂಡಸ್ವಾಮಿ, ಕೆ.ಜಿ.ಲೋಕೇಶ್ವರ್, ಕೆ.ಜಿ.ಕಷ್ಣಮೂರ್ತಿ, ಲೋಕೇಶ್, ಟಿ.ರಂಗಪ್ಪ, ಎನ್.ಎಚ್. ಚಂದ್ರಪ್ಪ. ಜಿ.ಬಿ.ಆನಂದಮೂರ್ತಿ, ಪಿ.ಎಸ್. ಹೊಳೆಯಪ್ಪ, ದೀಪು ಕಾಂತರಾಜ್, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net