ಗಣೇಶ ಮೂರ್ತಿ ಮೆರವಣಿಗೆ ಅದ್ದೂರಿ

Mdl Ganesha Idol
ಮುದಗಲ್‌ನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮಾಡಲಾಯಿತು. ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್, ಯಮುನಪ್ಪ ಬುಶೆಟ್ಟಿ, ರಾಜು ಮಾಲಿ ಪಾಟೀಲ್, ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ಶರಣಪ್ಪ ಮಡಿವಾಳರ, ರಮೇಶ ಕಂದಗಲ್ ಇದ್ದರು.
Published on

ಮುದಗಲ್: ಪಟ್ಟಣದ ವೆಂಕಟರಾಯಪೇಟೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಗುರುವಾರ ಪ್ರಮುಖ ಬೀದಿಗಳಲ್ಲಿ ಮೂರ್ತಿ ಮೆರವಣಿಗೆ ನಡೆಸಲಾಯಿತು.

ಲಿಂಗಸುಗೂರು ರಸ್ತೆಯ ಆಂಜನೇಯ ದೇವಸ್ಥಾನದಿಂದ ಮಹಿಳೆಯರ ಕುಂಭ-ಕಳಸ ಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಮೇಗಳಪೇಟೆ ಹಾಗೂ ಕನ್ನಾಪುರಹಟ್ಟಿಯ ಡೊಳ್ಳು ವಾದ್ಯಗಳು ಎಲ್ಲರ ಗಮನ ಸೆಳೆದವು.

ಮುಖಂಡರಾದ ಯೋಗೇಶಪ್ಪ ಗೌರಿಪುರ, ಸುರೇಶ ಸೇಠ, ರಜನಿಕಾಂತ ಶೆಟ್ಟಿ, ಜೋಸೆಫ್ ಇರ್ಲಾ, ವಿರೂಪಾಕ್ಷಯ್ಯ ವಸ್ತ್ರದ್, ಅಮೀರಬೇಗ ಉಸ್ತಾದ್, ಕೃಷ್ಣ ಮುಳ್ಳೂರು, ಉದಯಕುಮಾರ, ಸಂತೋಷ ಸುರುಪುರ, ಶಿವರಾಜ ತಳವಾರ, ಮಲ್ಲಪ್ಪ ಮಾಟೂರು, ಮಹಾಂತೇಶ ಅಕ್ಷತಿ, ಶಿವಕುಮಾರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net